ತಿಪಟೂರು : ಕಫ್ರ್ಯೂನಡುವೆ ಒಂದೇ ದಿನ ದಾಖಲೆಯ 131 ಸೊಂಕಿತರು

 ತಿಪಟೂರು :

      ತಾಲ್ಲೂಕಿನಲ್ಲಿ ಒಂದೆ ದಿನ ದಾಖಲೆಯ ಪ್ರಮಾಣದಲ್ಲಿ ಸೊಂಕಿತರು ಕಂಡು ಬಂದಿದೆ ಇಂದು 131 ಮಂದಿಗೆ ಕೊರೋನಾ ದೃಢವಾಗಿದ್ದು ಇಂದು 81 ಜನರು ಸೊಂಕಿನಿಂದ ಮುಕ್ತವಾಗಿದ್ದು ತಾಲ್ಲೂಕಿನಲ್ಲಿ ಒಟ್ಟು 489 ಕೊರೋನಾ ಸಕ್ರೀಯ ಪ್ರಕರಣಗಳಿವೆ.

      ಇಂದು ಕೊರೋನಾ ಕಫ್ರ್ಯೂ ಇದ್ದರು ಸಹ ಬೆಳಗ್ಗೆ ಜನಸಂಚಾರ ತುಂಬಾ ವಿರಳವಾಗಿದ್ದು ತರಕಾರಿ ಮಾರುಕಟ್ಟೆಯಲ್ಲಿ ಜನಸಂದಣಿ ಕಡಿಮೆ ಇತ್ತು ಎಲ್ಲದಕ್ಕೂ ಆರಕ್ಷಕರು ಸೂಕ್ತ ಬಂದೂಬಸ್ತ್ ವ್ಯವಸ್ಥೆ ಮಾಡಿದ್ದು ರಸ್ತೆಯಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದ ವ್ಯಕ್ತಿಗಳಿಗೆ ಆರಕ್ಷಕರು ವಿಚಾರಿಸಿ ಕಳುಹಿಸುತ್ತಿದ್ದರು ಇದರ ಮಧ್ಯೆ ಎಲ್ಲರದ್ದೂ ಒಂದೆ ಉತ್ತರವಾಗಿದ್ದು ಅವುಗಳನ್ನು ಕೇಳಿ ಆರಕ್ಷಕರಿಗೆ ತಲೆನೋವು ಬಂದಿರುವುದಲ್ಲಿ ಸಂಶವೆ ಇಲ್ಲ ಯಾರನ್ನು ಕೇಳಿದರು ಆಸ್ಪತ್ರೆಗೆ, ಬ್ಯಾಂಕ್,ಎಂದು ಹೇಳುವವರೆ ಹೆಚ್ಚಾಗಿದ್ದರು.

      ಇಷ್ಟು ದಿನ ಬೆಳ್ಳಂಬೆಳಿಗ್ಗೆ ಮದ್ಯ ಕುಡಿಯ ಬೇಕೆಂದರೆ ಕದ್ದು ಮುಚ್ಚಿ ಓಡಾಡುತ್ತಿದ್ದ ಮದ್ಯ ಪ್ರಿಯರಿಗೆ ಸರ್ಕಾರವು ಬೆಳಗ್ಗೆ 6 ರಿಂದಲೆ ಮದ್ಯವನ್ನು ದೊರಕಿಸಿಕೊಡುತ್ತಿದ್ದ ಸಂತೋಷದ ವಿಷಯವಾಗಿದ್ದು ಯಾರಿಗೂ ಹೆದರದೆ ಅಳುಕದೆ ಅಂಜದೆ ಮದ್ಯವನ್ನು ತೆಗೆದುಕೊಂಡು ಹೋಗುತ್ತಿದ್ದು ಸಾಮನ್ಯ ವಾಗಿಕಂಡು ಬಂದಿತು.

      ಇಷ್ಟು ದಿನ ಬೆಳಿಗ್ಗೆ ಬೆಳಿಗ್ಗೆ ಮದ್ಯಕುಡಿಯ ಬೇಕೆಂದರೆ ಕದ್ದುಮುಚ್ಚಿ ಅಥವಾ ಎಲ್ಲೋ ಇಟ್ಟಿದ್ದ ಮದ್ಯವನ್ನು ತೆಗೆದುಕೊಂಡು ಕುಡಿಯಬೇಕಾಗಿತ್ತು ಆದರೆ ಕೋವಿಡ್ ಕಪ್ರ್ಯೂ ಮದ್ಯಪ್ರಿಯರಿಗೆ ಬೆಳಗ್ಗೆ 6ಕ್ಕೆ ಹಾಲು ಮತ್ತು ಆಲ್ಕೋಹಾಲ್‍ಗೆ ಒಂದೆ ಸಮಯ ನಿಗದಿಪಡಿಸಿದ್ದು ಎಂದೂ ಸಹ ಮನೆಗೆ ತೆಗೆದುಕೊಂಡು ಹೋಗದವರು ಇಂದು ಬೆಳ್ಳಂಬೆಳಗ್ಗೆಯೆ ಮದ್ಯದಂಗಡಿ ಬಂದು ಆಲ್ಕೋಹಾಲ್ ತೆಗೆದುಕೊಂಡು ಹೋಗುವಲ್ಲಿ ನಿರತರಾಗಿದ್ದಾರೆ.

     ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬಂತೆ ಹಾಲು ಮತ್ತು ಆಲ್ಕೋಹಾಲ್‍ಗೆ ಒಂದೆ ಸಮಯ ನಿಗದಿ ಯಾಗಿರುವುದು ತನಗೂ 1 ಸಮಯ ಬಂದೆ ಬರುತ್ತದೆ ಎನ್ನುವ ವ್ಯಕ್ತಿಗಳಿಗೆ ಇದು ಮಾದರಿ ಯಾಗಿದೆ ಎನ್ನುವಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link