ವರ್ಗಾವಣೆ ದಂಧೆ ಮಿತಿಮೀರಿಹೋಗಿದೆ : ಬಿಜೆಪಿ

ಬೆಂಗಳೂರು:

       ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕದ ಖರ್ಚು ರೈತನೇ ಭರಿಸಬೇಕು ಎಂಬ ಆದೇಶ ಹೊರಡಿಸಲು ಸರ್ಕಾರ ಹೊರಟಿದೆ. ಉಚಿತ ಬಸ್ ಹೊರತು ಬೇರೆ ಸರ್ಕಾರದ ಬೇರೆ ಗ್ಯಾರಂಟಿ ಯೋಜನೆಗಳು ಸರಿಯಾಗಿ ಜಾರಿಗೆ ಬಂದಿಲ್ಲ. ಅರ್ಧದಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ನಿಧಿ ಕೊಟ್ಟಿಲ್ಲ. ಇದು ಲೂಟಿ ಸರ್ಕಾರ, ಐಟಿ ದಾಳಿಯಿಂದ ಸರ್ಕಾರದ ಲೂಟಿ ಬಯಲಾಗಿದೆ ಎಂದು ಆರೋಪಿಸಿದರು. 

      ಸಿದ್ದರಾಮಯ್ಯ- ಡಿಕೆಶಿ ಬಣಗಳ ನಡುವೆ ನಾಯಕತ್ವದ ಜಗ್ಗಾಟ ತಾರಕಕ್ಕೇರಿದೆ. ಮೊದಲಿಗಿಂತ ಹೆಚ್ಚು ವರ್ಗಾವಣೆ ದಂಧೆ ಮಿತಿಮೀರಿದೆ. ಡಿಸಿಎಂ ಕಟ್ಟಿ ಹಾಕಲು ಡಿನ್ನರ್ ಮೀಟಿಂಗ್ ಶುರುವಾಗಿದೆ.

 
     ಮಳೆ ಕೊರತೆ ಅರಿವಿದ್ದರೂ ಮುಂಜಾಗ್ರತಾ ಕ್ರಮ ವಹಿಸಲಿಲ್ಲ. ಭೀಕರ ಬರ ಪರಿಸ್ಥಿತಿ ಇದೆ. ಬರ ಪರಿಹಾರ ಕೊಡದೇ ಕೇಂದ್ರಕ್ಕೆ ಮೂದಲಿಸುವ ಕೆಲಸ ಮಾಡ್ತಿದ್ದಾರೆ. ಆಡಳಿತ ಯಂತ್ರ ಸರಿಪಡಿಸುವ ಬದಲು ವಿಪಕ್ಷಗಳ ಮೇಲೆ ಹರಿಹಾಯ್ತಿರೋದು ಪ್ರಜಾಪ್ರಭುತ್ವದ ಅಣಕ. ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಕೇಂದ್ರ ಬರ ಪರಿಹಾರ ನಿಶ್ಚಿತವಾಗಿ ಕೊಡುತ್ತದೆ. ಆದರೆ ಇವರು ಕೇಂದ್ರದ ಪರಿಹಾರಕ್ಕೆ ಕಾಯುತ್ತಿದ್ದಾರೆ.
    ಸಂಪನ್ಮೂಲಗಳ ಕೊರತೆಯಿಂದ ಎಲ್ಲದಕ್ಕೂ ಕೇಂದ್ರದ ಕಡೆ ನೋಡುತ್ತಿದ್ದಾರೆ. ಸುರ್ಜೇವಾಲಾ, ವೇಣುಗೋಪಾಲ ಕಲೆಕ್ಷನ್ ಟಾರ್ಗೆಟ್ ಕೊಡಲು ಭೇಟಿ ಕೊಟ್ಟಿದ್ದಾರೆ. ಇದು ಎಐಸಿಸಿಗೆ ಎಟಿಎಂ ಸರ್ಕಾರ ಆಗಿದೆ. ಮೋದಿಯವರನ್ನು ನಿತ್ಯ ಟೀಕಿಸೋದು ಸಿದ್ದರಾಮಯ್ಯ ಚಾಳಿಯಾಗಿದೆ ಎಂದು ಟೀಕಿಸಿದರು. 

 

    ಕಳೆದ ಒಂಬತ್ತು ವರ್ಷಗಳಲ್ಲಿ ಎನ್‌ಡಿಆರ್‌ಎಫ್‌ನಡಿ 12,407 ಕೋಟಿ, ಎಸ್‌ಡಿಆರ್‌ಎಫ್‌ನಡಿ 3,377 ಕೋಟಿ ರೂಪಾಯಿ ಹಣ ಕೇಂದ್ರ ಕೊಟ್ಟಿದೆ. ರಾಜ್ಯದಲ್ಲಿ 54 ಹೆದ್ದಾರಿ ಕಾಮಗಾರಿಗಳು ಚಾಲ್ತಿಯಲ್ಲಿವೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಮುಂದಿನ ಮಾರ್ಚ್‌ಗೆ ಸಿದ್ಧವಾಗಲಿದೆ. ಹೀಗೆ ಹಲವು ಕಾಮಗಾರಿಗಳು ಕೇಂದ್ರದಿಂದ ರಾಜ್ಯದಲ್ಲಿ ನಡೆಯುತ್ತಿವೆ ಎಂದರು. ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ಕಾಂಗ್ರೆಸ್ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap