ತುಮಕೂರು :
ಪರಿಚಿತನಿಗೆ ಚಿನ್ನದ ಸರ ಕೊಟ್ಟು ಯಾರೋ ಅಪಹರಿಸಿಕೊಂಡು ಹೋದರೆಂದು ಸುಳ್ಳು ದೂರು ನೀಡಿದ್ದ ಪ್ರಕರಣವನ್ನುತಿಲಕ್‍ಪಾರ್ಕ್ ವೃತ್ತದ ಪೊಲೀಸರು ಬಯಲು ಮಾಡಿದ್ದಾರೆ.
ಜಯನಗರ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣದಲ್ಲಿ ಕಳೆದ ಆ.8ರಂದು ಮುಂಜಾನೆ 4.35ರ ಸಮಯದಲ್ಲಿ ಶೆಟ್ಟಿಹಳ್ಳಿ ತೋಟದ ಸಾಲಿನಲ್ಲಿರುವ ಶಿವಕುಮಾರ್ ಅವರ ಮಗಳು ವರ್ಷಿತಳ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿರುವುದಾಗಿ ದೂರಿದ್ದರು.
ಆದರೆ ಸಿಪಿಐ ಮುನಿರಾಜು, ಪಿಎಸ್ಸೈ ರಾಮಚಂದ್ರಪ್ಪ ಅವರುಗಳ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ನಡೆಸಿದಾಗ ದೂರುದಾರೆಯೇ ತನಗೆ ಪರಿಚಿತವಿರುವ ಶ್ರೀನಿವಾಸ್ ಎಂಬಾತನಿಗೆ ಸರ ಬಿಚ್ಚುಕೊಟ್ಟಿರುವುದಾಗಿ ತಿಳಿಸಿದ್ದು, ಸುಳ್ಳು ದೂರು ನೀಡಿರುವುದು ಬಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ