ತುಮಕೂರು :
ತುಮಕೂರು ವಿಶ್ವವಿದ್ಯಾಲಯದ ವಿದ್ಯಾ ವಿದ್ಯಾಯಕ ಪರಿಷತ್‍ಗೆ ಸ್ಥಳೀಯ ಜನಪ್ರತಿನಿಧಿಯನ್ನು ಕಡೆಗೂ ಸರಕಾರ ನೇಮಕ ಮಾಡಿದ್ದು, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತುಮಕೂರು ವಿವಿ ವಿದ್ಯಾಯಕ ಪರಿಷತ್ ಸದಸ್ಯರಾಗಿ ನಿಯುಕ್ತಿಗೊಂಡಿದ್ದಾರೆ.
ಪ್ರಜಾಪ್ರಗತಿ ಪತ್ರಿಕೆಯಲ್ಲಿ ಮಾ.10ರಂದು ‘ಹೆಸರಿಗಷ್ಟೇ ತುಮಕೂರು ವಿವಿ ರಾಜಧಾನಿಗರಿಗೆ ಮಣೆ’ ಸ್ಥಳೀಯ ಜನಪ್ರತಿನಿಧಿಗಳು ಆಕಾಡೆಮಿಕ್ ಕೌನ್ಸಿಲ್‍ನಲ್ಲಿಲ್ಲ’ ಎಂಬ ಶೀರ್ಷಿಕೆಯಡಿ ವಿಸ್ತøತ ವರದಿ ಪ್ರಕಟಿಸಲಾಗಿತ್ತು. ಅಕಾಡೆಮಿಕ್ ಕೌನ್ಸಿಲ್‍ಗೆ ಬೆಂಗಳೂರು ಮೂಲದ ವಿಧಾನಪರಿಷತ್ ಸದಸ್ಯರಾದ ಗೋವಿಂದರಾಜು, ಅ.ದೇವೇಗೌಡ ಅವರು ಪರಿಷತ್ ಸಭಾಪತಿಗಳಿಂದ ನಾಮನಿರ್ದೇಶನಗೊಂಡಿದ್ದು, ಸ್ಥಳೀಯ ವಿಧಾನಸಭಾ ಸದಸ್ಯರ್ಯಾರು ನೇಮಕಗೊಂಡಿರಲಿಲ್ಲ. ನಾಮ ನಿರ್ದೇಶಿತ ಇತರೆ ಕ್ಷೇತ್ರದ ಸದಸ್ಯರು ಬೆಂಗಳೂರಿಗರೇ ಅಕಾಡೆಮಿಕ್ ಕೌನ್ಸಿಲ್ ಹಾಗೂ ಸಿಂಡಿಕೇಟ್‍ನಲ್ಲಿ ಹೆಚ್ಚಾಗಿದ್ದರು. ಶಾಸಕರಾಗಿದ್ದ ಎಚ್.ನಿಂಗಪ್ಪ, ಡಾ.ಹುಲಿನಾಯ್ಕರ್ ಅವರುಗಳು ಅಕಾಡೆಮಿಕ್ ಕೌನ್ಸಿಲ್‍ಗೆ ನಿಯೋಜನೆಗೊಂಡಿದ್ದು ಬಿಟ್ಟರೆ, ಜಿಲ್ಲೆಯ ಜನಪ್ರತಿನಿಧಿಗಳಿಗೆ ತುಮಕೂರು ವಿಶ್ವವಿದ್ಯಾಲಯದಲ್ಲಿ ಪ್ರಾತಿನಿಧ್ಯವಿಲ್ಲವಾಯಿತು.
ಶಿಕ್ಷಣ ತಜ್ಞರು ಬೇಸರ ವ್ಯಕ್ತಪಡಿಸಿದ್ದರು:
ಜಿಲ್ಲೆಯ ಶಿಕ್ಷಣ ತಜ್ಞ ಪ್ರೊ.ಸಿ.ಎನ್.ನರಸಿಂಹಮೂರ್ತಿ, ವಿಶ್ರಾಂತ ಕುಲಪತಿ ಡಾ.ಓ ಅನಂತರಾಮಯ್ಯ ಅವರು ಸಹ ವಿವಿಗಳಿಗೆ ಸ್ಥಳೀಯರನ್ನು ಕಡೆಗಣಿಸಿ ಆಗುತ್ತಿರುವ ನಾಮನಿರ್ದೇಶನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಪರಿಣಾಮ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರನ್ನು ವಿಧಾನಸಭಾ ಸಭಾಧ್ಯಕ್ಷರು ವಿವಿ ವಿದ್ಯಾಯಕ ಪರಿಷತ್‍ಗೆ ನಾಮ ನಿರ್ದೇಶನ ಮಾಡಿದ್ದು ಸ್ಥಳೀಯ ಜನಪ್ರತಿನಿಧಿಯೊಬ್ಬರಿಗೆ ಜಿಲ್ಲೆಯ ವಿವಿಯಲ್ಲಿ ಪ್ರಾತಿನಿಧ್ಯ ಸಿಕ್ಕಂತಾಗಿದೆ. ಈ ಅವಕಾಶ ಸ್ಥಳೀಯ ಜನಪ್ರತಿನಿಧಿಗೆ ಮಾತ್ರ ಸೀಮಿತವಾಗದೆ ಇತರೆ ಕ್ಷೇತ್ರಗಳವರ ನಾಮನಿರ್ದೇಶನದಲ್ಲೂ ಜಿಲ್ಲೆಯವರಿಗೆ ಆದ್ಯತೆ ದೊರಕಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
