ನೇಪಾಳ: ಕೂದಳೆಯ ಅಂತರದಲ್ಲಿ ತಪ್ಪಿದ ವಿಮಾನ ದುರಂತ

ಕಠ್ಮಂಡು:

  ಜನರು ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಲೆಂದು ಇರುವ ಸಾರಿಗೆ ವ್ಯವಸ್ಥೆಗಳಲ್ಲಿ ಅತ್ಯಂತ ವೇಗವಾದ ಮಾರ್ಗ ಎಂದರೆ ವಾಯು ಸಾರಿಗೆ ಅಂದರೆ ವಿಮಾನಯಾನ ಎಲ್ಲಾ ಸಾರಿಗೆಗಳಲ್ಲೂ ಇದ್ದಂತೆ ಇದರಲ್ಲೂ ಸಹ ಅಪಘಾತಗಳು ಸಮಾನ್ಯವೇ ಆದರೆ ಕೆಲ ವರ್ಷಗಳಿಂದ ಈ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ .

   ಕೆಲದಿನಗಳ ಹಿಂದೆ ಏರ್ ಇಂಡಿಯಾ ಹಾಗೂ ನೇಪಾಳ ಏರ್ ಲೈನ್ಸ್ ವಿಮಾನಗಳು ಮಾರ್ಗ ಮಧ್ಯದಲ್ಲಿ ಘರ್ಷಣೆಗೆ ಒಳಗಾಗಬಹುದಾಗಿದ್ದ ಅನಾಹುತ ಕೂದಲೆಳೆ ಅಂಚಿನಲ್ಲಿ ತಪ್ಪಿದೆ.ವಿಮಾನದಲ್ಲಿನ ಎಚ್ಚರಿಕೆ  ವ್ಯವಸ್ಥೆಗಳಿಂದ ಎಚ್ಚೆತ್ತ ಪೈಲಟ್ ಗಳ ಸಮಯೋಚಿತ ಕ್ರಮಗಳಿಂದಾಗಿ ಈ ಅನಾಹುತ ತಪ್ಪಿದೆ ಎಂದು ಕಠ್ಮಂಡುವಿನಲ್ಲಿರುವ ಅಧಿಕಾರಿಗಳು ತಿಳಿಸಿದ್ದಾರೆ.

    ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ಏರ್ ಟ್ರಾಫಿಕ್ ಕಂಟ್ರೋಲರ್ ವಿಭಾಗದ ಇಬ್ಬರು ಉದ್ಯೋಗಿಗಳನ್ನು ಅಜಾಗರೂಕತೆ ಕಾರಣ ನೀಡಿ ಅಮಾನತುಗೊಳಿಸಿದೆ ಎಂದು ತಿಳಿಸಿದ್ದಾರೆ. 

     ಶುಕ್ರವಾರ ಬೆಳಿಗ್ಗೆ ಮಲೇಷ್ಯಾದ ಕೌಲಾಲಂಪುರದಿಂದ ಕಠ್ಮಂಡುವಿಗೆ ಬರುತ್ತಿದ್ದ ನೇಪಾಳ ಏರ್‌ಲೈನ್ಸ್ ವಿಮಾನ ಮತ್ತು ನವದೆಹಲಿಯಿಂದ ಕಠ್ಮಂಡುವಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಬಹುತೇಕ ಅಪಘಾತಕ್ಕೀಡಾಗುವ ಸಾಧ್ಯತೆ ಇತ್ತು. ಏರ್ ಇಂಡಿಯಾ ವಿಮಾನ 19,000 ಅಡಿಗಳಿಂದ ಕೆಳಗಿಳಿಯುತ್ತಿದ್ದರೆ, ನೇಪಾಳ ಏರ್‌ಲೈನ್ಸ್ ವಿಮಾನ ಅದೇ ಸ್ಥಳದಲ್ಲಿ 15,000 ಅಡಿ ಎತ್ತರದಲ್ಲಿ ಹಾರುತ್ತಿತ್ತು ಎಂದು ನಿರೋಲಾ ಮಾಹಿತಿ ನೀಡಿದ್ದಾರೆ.

     ಎರಡು ವಿಮಾನಗಳು ಸಾಮೀಪ್ಯದಲ್ಲಿವೆ ಎಂದು ರಾಡಾರ್‌ನಲ್ಲಿ ತೋರಿಸಿದ ನಂತರ, ನೇಪಾಳ ಏರ್‌ಲೈನ್ಸ್ ವಿಮಾನ 7,000 ಅಡಿಗಳಿಗೆ ಇಳಿದಿತ್ತು ಎಂದು ವಕ್ತಾರರು ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸಲು ನಾಗರಿಕ ವಿಮಾನಯಾನ ಪ್ರಾಧಿಕಾರ ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap