ಮೀಸಲು ಹೆಚ್ಳಳದ ಅವಕಾಶ ಬಳಸಿಕೊಳ್ಳಿ : ಡಾ.ಲಕ್ಷ್ಮಿಕಾಂತ್

ತುಮಕೂರು

      2011ರ ಜನಗಣತಿ ಆಧಾರದಲ್ಲಿ ಮೀಸಲಾತಿಯನ್ನು ಶೇ.17ಕ್ಕೆ ಹೆಚ್ಚಳ ಪರಿಶಿಷ್ಟ ಜಾತಿಯಲ್ಲಿ ಸ್ಪೃಶ್ಯ ಮತ್ತು ಅಸ್ಪೃಶ್ಯ ಜಾತಿಗಳಿಬ್ಬರಿಗೂ ಹಂಚಿಕೆ ಮಾಡಿರುವುದು ಸಮಂಜಸವಾಗಿದೆ. ಪರಿಶಿಷ್ಟ ಜಾತಿಯಲ್ಲಿನ ಸ್ಪೃಶ್ಯರು ಇದನ್ನು ವಿರೋಧಿಸುತ್ತಿರುವುದು ಸರಿಯಲ್ಲ. ಅಸ್ಪೃಶ್ಯರಿಗೆ ಸಿಗಬೇಕಾದ ಸವಲತ್ತಿನಲ್ಲಿ ಸ್ಪೃಶ್ಯ ಜಾತಿಯವರಿಗೆ ಪಾಲು ಸಿಕ್ಕಿರುವುದನ್ನು ಒಪ್ಪಿ ಸಹೋದರರಂತೆ ಮುನ್ನೆಡೆಯಬೇಕು ಎಂದು ದಲಿತ ಪರ ಸಂಘಟನೆಗಳ ಒಕ್ಕೂಟದ ಮುಖಂಡ ಡಾ.ಲಕ್ಷ್ಮಿಕಾಂತ್ ತಿಳಿಸಿದರು.

     ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮೀಸಲಾತಿ ಎನ್ನುವುದು ಸಾಮಾಜಿಕ ನ್ಯಾಯದ ಭಾಗವಾಗಿದೆ. ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ತುಳಿತಕ್ಕೆ ಒಳಗಾದ ಸಮುದಾಯಗಳನ್ನು ಇತರೆ ಸಮುದಾಯಗಳೊಂದಿಗೆ ಸ್ಪರ್ಧೆ ಮಾಡಲು ಅನುಕೂಲವಾಗುವಂತೆ ಮೀಸಲಾತಿಯನ್ನು ರಕಾರ ಕಲ್ಪಿಸಿದೆ.ಆದರೆ ಇದನ್ನು ಸರಿಯಾಗ ಅರ್ಥೈಸದ ಕೆಲ ಸ್ಪೃಶ್ಯ ಜಾತಿಗಳ ಜನರು ಇದರ ವಿರುದ್ದ ಪ್ರತಿಭಟನೆ ನಡೆಸುತ್ತಿರುವುದು ವಿಷಾದ ಸಂಗತಿ ಎಂದರು.

      ಪ್ರಸ್ತುತ ರಾಜ್ಯ ಸರಕಾರ ಮಾಡಿರುವ ಮೀಸಲಾತಿ ಹಂಚಿಕೆ ಮಾಡಿರುವುದು ಅತ್ಯಂತ ವೈಜ್ಞಾನಿಕವಾಗಿದೆ .ಇದರಿಂದ ಮೇಲ್ಜಾತಿಯ ಜನರು ಬೇಡ ಜಂಗಮ ಹೆಸರಿನಲ್ಲಿ ಪಡೆಯುತ್ತಿದ್ದ ಎಸ್ಸಿ ಮೀಸಲಾತಿ ಸೌಲಭ್ಯಕ್ಕೆ ಕಡಿವಾಣ ಬೀಳಲಿದೆ. ಇದುವರೆಗೂ ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಬೇಡ ಜಂಗಮ ದಾಸರ ಹೆಸರಿನಲ್ಲಿ ಸಾವಿರಾರು ಜನ ಮುಂದುವರಿದವರು ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದರು

    .ಆದರೆ ಈಗ ಒಳ ಮೀಸಲುಮಾಡಿ ಶೇ.1ರ ಮೀಸಲಾತಿಯನ್ನು ಅಲೆಮಾರಿ ಸಮುದಾಯಕ್ಕೆ ಸೇರಿದ ಜಾತಿಗಳಿಗೆ ಮೀಸಲಿಟ್ಟಿರುವುದರಿಂದ ವಾಮಮಾರ್ಗದಿಂದ ಜಾತಿ ಪ್ರಮಾಣ ಪತ್ರ ಪಡೆಯುವುದಕ್ಕೂ ಕಡಿವಾಡ ಬಿದ್ದಿದೆ. ಇದಕ್ಕಾಗಿ ಸಿಎಂ ಹಾಗೂ ಕಾನೂನು ಸಚಿವರನ್ನು ಅಭಿನಂದಿಸುತ್ತೇವೆ ಎಂದರು.

     ಪರಿಶಿಷ್ಟ ಜಾತಿಯ 101 ಜಾತಿಗಳು ಸೇರಿ 2011ರ ಜನಗಣತಿ ಅನ್ವಯ ಸುಮಾರು 1.04 ಕೋಟಿ ಜನಸಂಖ್ಯೆಯಿದೆ. 32.60ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಎಡಗೈ ಸಮುದಾಯಕ್ಕೆಶೇ 6, ಪರಿಶಿಷ್ಟರಲ್ಲಿ 32.57 ಲಕ್ಷ ಜನಸಂಖ್ಯೆ ಇರುವ ಬಲಗೈನವರಿಗೆ ಶೇ5.5, 11ಲಕ್ಷ ಬೋವಿ, 12 ಲಕ್ಷ ಲಂಬಾಣಿ, 2.50 ಕೊರಚ, 60 ಸಾವಿರ ಕೊರಮ ಸೇರಿ ಒಟ್ಟು 26.51 ಜನಸಂಖ್ಯೆ ಹೊಂದಿರುವ ಸ್ಪೃಶ್ಯ ಜಾತಿಗಳಿಗೆ ಶೇ4.5 ನೀಡಿದರೆ, ಉಳಿದಂತೆ 10 ಸಾವಿರಕ್ಕಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ 89 ಸಣ್ಣ ಜಾತಿಗಳಿಗೆ ಶೇ1ರ ಮೀಸಲಾತಿ ಕಲ್ಪಿಸಲಾಗಿದೆ ಎಂದರು.

    ನಿವೃತ್ತ ತಹಸೀಲ್ದಾರ್ ದಾಸಪ್ಪ ಮಾತನಾಡಿ ಪಿಟಿಸಿಎಲ್ ಕಾಯ್ದೆಗೆ ಸೂಕ್ತ ತಿದ್ದುಪಡಿತರಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾದಿಗ ದಂಡೋರದ ಆಟೋ ಶಿವಕುಮಾರ್, ಜಗದೀಶ್, ರಂಗಧಾಮಯ್ಯ, ಟೂಡಾ ಸದಸ್ಯ ಹನುಮಂತಪ್ಪ ಮತ್ತಿತರರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap