ಮೋದಿ ಹಾಗೂ ಯೋಗಿ ಹೊಗಳಿದ ಮುಸ್ಲಿಂ ಮಹಿಳೆಗೆ ಘೋರ ಶಿಕ್ಷೆ ನೀಡಿದ ಪತಿ

ಅಯೋಧ್ಯೆ

   ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದಕ್ಕೆ ಮುಸ್ಲಿಂ ಮಹಿಳೆಯೊಬ್ಬರು ಪತಿಯಿಂದ ಭೀಕರ ಶಿಕ್ಷೆಗೆ ಗುರಿಯಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬೆಳಕಿಗೆ ಬಂದಿದೆ.

   ಸದ್ಯದ ಮಾಹಿತಿ ಪ್ರಕಾರ, ಪತಿ ಮೊದಲು ತನ್ನ ಪತ್ನಿಗೆ ಬೆಂಕಿ ಹಚ್ಚಿ ಕೊಲ್ಲಲು ನೋಡಿದ್ದಾನೆ. ನಂತರ ಆಕೆಗೆ ತ್ರಿವಳಿ ತಲಾಖ್ ನೀಡಿ ವಿಚ್ಛೇದನ ನೀಡಿದ್ದಾರೆ.ಬಹ್ರೈಚ್ ಮೂಲದ ಮಹಿಳೆ ಅಯೋಧ್ಯೆಯ ಅರ್ಷದ್ ಎಂಬಾತನನ್ನು ಮದುವೆಯಾಗಿದ್ದಳು. ಅವರ ಮದುವೆಯ ನಂತರ, ಆ ಮಹಿಳೆ ಅಯೋಧ್ಯೆಗೆ ಆಗಮಿಸಿದಾಗ ಆಕೆ ಉತ್ತರ ಪ್ರದೇಶದ ಪರಿಸರದಿಂದ ಪ್ರಭಾವಿತರಾದರು.

   ಆಕೆ ಆಗಾಗ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುತ್ತಿದ್ದರು. ಇದರಿಂದ ಕುಪಿತಗೊಂಡ ಪತಿ ಆಕೆಯನ್ನು ಸುಟ್ಟು ಹಾಕಿದ್ದಲ್ಲದೆ ವಿಚ್ಛೇದನವನ್ನೂ ನೀಡಿದ್ದಾನೆ.

  ದೆಹಲಿ ದರ್ವಾಜಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ಈಗ ಅಯೋಧ್ಯೆ ಮತ್ತು ಬಹ್ರೈಚ್ ಜಿಲ್ಲೆಗಳ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತಿದ್ದರೂ ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಬಗ್ಗೆ ಅರ್ಷದ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪವೂ ಇದೆ.

  ಅಂದಹಾಗೆ, ಭಾರತೀಯ ಸಂಸತ್ತು 2019ರ ಜುಲೈ 30ರಂದು ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆ ಎಂದು ಔಪಚಾರಿಕವಾಗಿ ಕರೆಯಲ್ಪಡುವ ತ್ರಿವಳಿ ತಲಾಖ್ ಮಸೂದೆಯನ್ನು ಅಂಗೀಕರಿಸಿತು.

   ಈ ಮಸೂದೆಯು ತ್ವರಿತ ತ್ರಿವಳಿ ತಲಾಖ್ ಅಥವಾ ತಲಾಕ್-ಇ-ಬಿದ್ದತ್ ಆಚರಣೆಯನ್ನು ಅಪರಾಧ ಎಂದು ಹೇಳುತ್ತದೆ. ಇದರ ಅಡಿಯಲ್ಲಿ ಮುಸ್ಲಿಂ ಪುರುಷನು ತಲಾಖ್ ಎಂಬ ಪದವನ್ನು ಮೂರು ಬಾರಿ ಉಚ್ಛರಿಸುವ ಮೂಲಕ ತನ್ನ ಹೆಂಡತಿಯನ್ನು ವಿಚ್ಛೇದನ ಮಾಡುವ ಸಂಪ್ರದಾಯವನ್ನು ಮಾಡಿದರೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ.ಈ ಮಸೂದೆಯ ಅಂಗೀಕಾರವು ಭಾರತದಲ್ಲಿ ಮಹಿಳಾ ಹಕ್ಕುಗಳಿಗೆ ಮಹತ್ವದ ಜಯವನ್ನು ತಂದುಕೊಟ್ಟಿತು. ಇದು ಅನೇಕ ಮುಸ್ಲಿಂ ಮಹಿಳೆಯರನ್ನು ಹಠಾತ್ ಮತ್ತು ಏಕಪಕ್ಷೀಯ ವಿಚ್ಛೇದನಕ್ಕೆ ಗುರಿಯಾಗುವಂತೆ ಮಾಡಿದ ದೀರ್ಘಕಾಲದ ಸಮಸ್ಯೆಯನ್ನು ಪರಿಹರಿಸುತ್ತದೆ.

Recent Articles

spot_img

Related Stories

Share via
Copy link