‘1 ರಿಂದ 9ನೇ ತರಗತಿ ಶಾಲೆ’ಗಳ ‘ರಜೆ ವಿಸ್ತರಣೆ.?

ಬೆಂಗಳೂರು:

ಸುಳಿವು ನೀಡಿದ ‘ಶಿಕ್ಷಣ ಸಚಿವ’

     ರಾಜ್ಯ ಸರ್ಕಾರದಿಂದ ಈಗಾಗಲೇ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂವನ್ನು  ಜನವರಿ.31, 2022ರವರೆಗೆ ವಿಸ್ತರಣೆ ಮಾಡಲಾಗಿದೆ.

        ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳ ಆಗಿರುವ ಕಾರಣ, 1 ರಿಂದ 9ನೇ ತರಗತಿಗಳ ಶಾಲೆಗಳಿಗೆ  ಈಗ ನೀಡಿರುವಂತ ರಜೆಯನ್ನು ವಿಸ್ತರಿಸೋ ಸುಳಿವನ್ನು ಶಿಕ್ಷಣ ಸಚಿವರು ಸುಳಿವು ನೀಡಿದ್ದಾರೆ.

 

ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್  ಅವರು, ಎಷ್ಟು ಸಾಧ್ಯವೋ ಅಷ್ಟು ಶಾಲೆಗಳನ್ನು ನಡೆಸುತ್ತೇವೆ. ಈಗಾಗಲೇ ಜನವರಿ 19ರವರೆಗೆ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.

ಇದಕ್ಕೂ ಮುನ್ನಾ ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿಯನ್ನು ಆಧರಿಸಿ ಸಿಎಂ ಬೊಮ್ಮಾಯಿಯವರ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಸಭೆಯನ್ನು ನಡೆಸಲಾಗುತ್ತದೆ. ಆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ತಜ್ಞರಿಂದ ಶಾಲೆಗಳಲ್ಲಿ ಕೊರೋನಾ ಸೋಂಕಿನ ಬಗ್ಗೆ ಮಾಹಿತಿಯನ್ನು ತರಿಸಿಕೊಳ್ಳಲಾಗುತ್ತದೆ. ಯಾವ ಯಾವ ಶಾಲೆಗಳಲ್ಲಿ ಕೊರೋನಾ ಹೆಚ್ಚಳ ಆಗುತ್ತಿದೆ. ಅವುಗಳನ್ನ ನಿಯಂತ್ರಣ ಕ್ರಮಗಳ ಬಗ್ಗೆಯೂ ತಜ್ಞರೊಂದಿಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ.

ಈ ಬಳಿಕ ಜನವರಿ 19ರ ನಂತ್ರ ಶಾಲೆಗಳ ರಜೆಯ ವಿಸ್ತರಣೆ ಬಗ್ಗೆ ಸಿಎಂ ನೇತೃತ್ವದ ಸಭೆಯಲ್ಲಿ ಕೋವಿಡ್ ಸ್ಥಿತಿಗತಿ ಆಧರಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದಾಗಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ