ನಮ್ಮ ಮೆಟ್ರೋದ ಲಕ್ಷಾಂತರ‌ ರೂ. ಮೌಲ್ಯದ ವಿದ್ಯುತ್ ಕೇಬಲ್ ಕಳವು!

ಬೆಂಗಳೂರು

    ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ  ರೈಲು ಸಂಚಾರ ಜನರಿಗೆ ಅನುಕೂಲವಾಗಿದೆ. ಆದರೆ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಅಧಿಕಾರಿಗಳಿಗೆ ಕಳ್ಳರು ಚಿಂತೆಯಾಗಿದೆ. ಹೌದು, ಬಿಎಂಆರ್​ಸಿಎಲ್ ಸಿಬ್ಬಂದಿ ವರ್ಗ ಹಾಗೂ ಸೆಕ್ಯುರಿಟಿ ಅಧಿಕಾರಿಗಳಿಗೆ ಕಳೆದ ಕೆಲ‌ ತಿಂಗಳಿನಿಂದ ವಿದ್ಯುತ್ ಕೇಬಲ್ ಕಳ್ಳತನ ನಿದ್ದೆಗೆಡಿಸಿದೆ. ನಮ್ಮ ಮೆಟ್ರೋ ರೈಲು ಸಂಚಾರ ಸಂಪೂರ್ಣ ಹೈವೋಲ್ಟೆಜ್ ವಿದ್ಯುತ್ ಪೂರೈಕೆಯ ಮೇಲೆಯೇ ಅವಲಂಬಿತವಾಗಿದೆ.

   ಆದರೆ, ಕಳೆದ ಮೂರು ತಿಂಗಳಿನಿಂದ ನಮ್ಮ ಮೆಟ್ರೋ ಮಾರ್ಗದಲ್ಲಿನ ವಿದ್ಯುತ್ ಕೇಬಲ್ ಕಳವು ಹೆಚ್ಚಾಗಿದೆ. ಪೀಣ್ಯ, ರಾಜಾಜಿನಗರ, ಬಸವನಗುಡಿ ಮೆಟ್ರೋ ರೈಲು ಮಾರ್ಗದಲ್ಲಿನ ಮೆಟ್ರೋ ರೈಲು ಟ್ಯ್ರಾಕ್​ ಕೆಳಭಾಗದಲ್ಲಿರುವ ವಿದ್ಯುತ್ ಕೇಬಲ್ ಕಳುವಾಗಿದೆ. 2024ರ ಅಕ್ಟೋಬರ್​ನಿಂದ ಜನವರಿವರೆಗೂ ಸುಮಾರು ನೂರಾರು ಮೀಟರ್​ಗೂ ಹೆಚ್ಚು ಉದ್ದದ ಕೇಬಲ್, ಲಕ್ಷಾಂತರ ರೂಪಾಯಿ ಮೌಲ್ಯದ ಕಾಪರ್ ವಿದ್ಯುತ್ ಕೇಬಲ್ ಕಳ್ಳತನವಾಗಿದೆ ಎಂದು ಬಿಎಂಆರ್​ಸಿಎಲ್ ಅಧಿಕಾರಿಗಳು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

  ನಮ್ಮ ಮೆಟ್ರೋ ರೈಲು ಟ್ಯ್ರಾಕ್​ ಮೇಲೆ ಹೈವೋಲ್ಟೆಜ್ ವಿದ್ಯುತ್ ಪ್ರವಹಿಸುತ್ತದೆ. ಇಂತಹ ಸಮಯದಲ್ಲಿ ವಿದ್ಯುತ್ ಕೇಬಲ್ ಕಳ್ಳತನ ಅಂದ್ರೆ ಅದು‌ ಸುಲಭದ ಮಾತಲ್ಲ. ಸಾಮಾನ್ಯ ಕಳ್ಳರು ಇಂತಹ ಕೆಲಸ ಮಾಡಲು ಅಸಾಧ್ಯ. ಆದರೂ, ಸುಲಭವಾಗಿ ಕಳ್ಳತನವಾಗುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಬಿಎಂಆರ್​ಸಿಎಲ್ ಸಿಬ್ಬಂದಿ ವರ್ಗದ ಸಹಾಯವಿಲ್ಲದೆ ಅಥವಾ ತಂತ್ರಜ್ಞಾನವನ್ನು ಅರಿತವನನ್ನು ಹೊರೆತುಪಡಿಸಿ ಯಾರಿಗೂ ಇಂತಹ ಸಾಹಸಕ್ಕೆ ಕೈಹಾಕಲು ಸಾಧ್ಯವೇ ಇಲ್ಲ. ಆದರೂ ಕಳ್ಳತನವಾಗುತ್ತಿರುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಸದ್ಯಕ್ಕೆ ಮೂರು ಪ್ರತ್ಯೇಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Recent Articles

spot_img

Related Stories

Share via
Copy link