ನಟ ವಿಷ್ಣುವರ್ಧನ್‌ರವರ 75ನೇ ವರ್ಷದ ಜನ್ಮದಿನೋತ್ಸವ ಹಾಗೂ ಅಮೃತ ಮಹೋತ್ಸವ

ಬೆಂಗಳೂರು;

   ನಟ ||. ವಿಷ್ಣುವರ್ಧನ್‌ರವರ 75ನೇ ವರ್ಷದ ಜನ್ಮದಿನೋತ್ಸವ ಹಾಗೂ ಅಮೃತ ಮಹೋತ್ಸವ ಅಂಗವಾಗಿ ದಿನಾಂಕ: 18-09-2025 ರಂದು ಸ್ಥಳ: ಅಭಿಮಾನ್ ಸ್ಟುಡಿಯೋದ ಆವರಣದಲ್ಲಿರುವ ಡಾ|| ವಿಷ್ಣುವರ್ಧನ್ ರವರ ಅಂತ್ಯ ಸಂಸ್ಕಾರವಾದ 10 ಗುಂಟೆ ಪುಣ್ಯಭೂಮಿ ಜಾಗದಲ್ಲಿ ಪೂಜಾ ಕಾರ್ಯಕ್ರಮ, ವಿಷ್ಣುವರ್ಧನ್ ರವರ ಭಾವಚಿತ್ರ ಅಳವಳಿಕೆ ಮಂಟಪಕ್ಕೆ ಹೂವಿನ ಅಲಂಕಾರ ಹಾಗೂ ರಕ್ತದಾನ ಹಾಗೂ ಅನ್ನದಾನ ಶಿಬಿರವನ್ನು ಹಮ್ಮಿಕೊಂಡಿರುತ್ತೇವೆ. ಎಂದು ಡಾ|| ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ , ಸಂಸ್ಥಾಪಕ ಅಧ್ಯಕ್ಷರು ಬಿ.ರಾಜುಗೌಡ ತಿಳಿಸಿದರು.ಅಭಿಮಾನ್ ಸ್ಟುಡಿಯೋದ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಮನವಿ.

   ಅಭಿಮಾನ್ ಸ್ಟುಡಿಯೋ ಮಾಲೀಕರು ಇಲ್ಲಿಯವರೆಗೂ ಯಾವುದೇ ಅಭಿವೃದ್ದಿ ಮಾಡಿಲ್ಲ ಬಾಲಣ್ಣರವರು ಕಟ್ಟಿದ ಸ್ಟುಡಿಯೋ ಹಾಗೇ ಇದೆ ಸುಮಾರು 55 ವರ್ಷಗಳ ಹಿಂದೆ ಹಾಕಿದ ಸೀಟ್ ಗಳು ಹಾಗೇ ಇದೆ ಮಳೆ ಬಂದರೆ ಸೋರುತ್ತದ್ದೆ. ಸ್ಟುಡಿಯೋ ಮೇಲಾವಣಿ ಸೀಟ್‌ಗಳು ಶೀತಾವಸ್ಥೆಯಲ್ಲಿ ಇದೆ. ಸೀಟ್‌ಗಳಿಗೆ ಗಮ್ ಪೇಪರ್ ಹಾಕಿ ಅಂಟಿಸಿರುತ್ತಾರೆ, ಇಗಲೂ ಚಿತ್ರಿಕರಣಕ್ಕೆ ಸರಿಯಾದ ವ್ಯವಸ್ಥೆ ಇಲ್ಲ ಬಾಲಣ್ಣನವರು ಹಾಕಿದ ಸ್ಟುಡಿಯೋ ನಾಮ ಫಲಕ ನಮಿಕರಣ ಮಾಡಿಲ್ಲ ಸ್ಟುಡಿಯೋಗೆ ಸರಿಯಾದ ಕಾಪೋಂಡ್ ವ್ಯವಸ್ಥೆ ಇಲ್ಲ ಸ್ಟುಡಿಯೋ ಮುಂಭಾಗದ ಗೇಟ್ ಅನ್ನು 2016ರಲ್ಲಿ ಸರ್ಕಾರವೇ ಹಾಕಿಸಿತು. ಅಭಿಮಾನ್ ಸ್ಟುಡಿಯೋದ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸರ್ಕಾರಕ್ಕೆ ಮನವಿ ಮಾಡಿದರು.

Recent Articles

spot_img

Related Stories

Share via
Copy link