ಇಸ್ಲಾಮಾಬಾದ್:
ಆರ್ಥಿಕವಾಗಿ ದಿವಾಳಿಯ ನಲ್ಲಿರುವ ಪಾಕಿಸ್ತಾನ ಕೇವಲ ಬೆದರಿಕೆ ತಂತ್ರ ಮಾಡುತ್ತಿದೆ ಎಂದು ಕೊಂಡಿದ್ದ ಭಾರತಕ್ಕೆ ಎಚ್ಚರಿಕೆ ಸಂದೇಶವೊಂದನ್ನು ನೀಡಿದೆ.
ಇಷ್ಟೂ ದಿನ ನಾವು ಭಾರತದೊಂದಿಗೆ ಶಾಂತಿಯನ್ನು ಬಯಸುತ್ತಿದ್ದೇವೆ ಎಂದು ನಾಟಕ ಮಾಡುತ್ತಿದ್ದ ಪಾಕಿಸ್ತಾನದ ಅಸಲಿ ಬುದ್ದಿ ಬಯಲಾಗಿದೆ.ಭಾರತದೊಂದಿಗೆ ಪರಮಾಣು ಯುದ್ಧ ಸೇರಿದಂತೆ ಕೆಲವು ರೀತಿಯ ಯುದ್ಧಗಳ ನಿರೀಕ್ಷೆಯನ್ನು ಅವರು ಮತ್ತೊಮ್ಮೆ ಪಾಕಿಸ್ತಾನ ಹೆಚ್ಚಿಸಿದೆ. ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಕ್ರಮವನ್ನು ಖಂಡಿಸುತ್ತಾ ಬಂದಿರುವ ಪಾಕಿಸ್ತಾನ ಭಾರತ ಕಾಶ್ಮೀರವನ್ನು ಅಕ್ರಮವಾಗಿ ಸ್ವಾಧೀನಪಡಿಸಿ ಕೊಂಡಿದೆ ಎಂದು ಹೇಳುವ ಮೂಲಕ ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸುವ ಕೆಲಸಕ್ಕೆ ಕೈ ಹಾಕಿದೆ.
ಅಲ್ ಜಜೀರಾ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಭಾರತದೊಂದಿಗೆ ಯುದ್ಧಕ್ಕೆ ಹೋಗಿ ನಾವು ಸೋತರೂ ಕೂಡ ಅದರಿಂದ ಭಾರತ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ