ಸೋಮವಾರದಿಂದ ವಿಟಿಯು ಎಂಜಿನಿಯರಿಂಗ್ ತರಗತಿಗಳು ಶುರು!!

ಬೆಂಗಳೂರು :

     ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2,4,6 ಮತ್ತು 8 ನೇ ಸೆಮಿಸ್ಟರ್ ಎಂಜಿನಿಯರಿಂಗ್ ತರಗತಿಗಳನ್ನು ಏಪ್ರಿಲ್ 19 ರಿಂದ ಆರಂಭವಾಗಲಿದೆ.

      ಏಪ್ರಿಲ್ 19 ರಿಂದ ಬಿ.ಇ.ಬಿಟೆಕ್, ಬಿ ಪ್ಲಾನ್, ಬಿ ಅರ್ಕ್ ಕೋರ್ಸ್ ಗಳ 2,4,6, ಮತ್ತು 8 ನೇ ಸೆಮಿಸ್ಟರ್ ತರಗತಿಗಳು ಏಪ್ರಿಲ್ 19 ರಿಂದ ಆರಂಭವಾಗಲಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜಿತ ಎಲ್ಲ ಎಂಜಿನಿಯರಿಂಗ್ ಕಾಲೇಜು, ಸ್ವಾಯತ್ತ ಕಾಲೇಜುಗಳು, ಸ್ವತಂತ್ರ ಕಾಲೇಜುಗಳ ಪ್ರಾಂಶುಪಾಲರು ಈ ವಿಷಯವನ್ನು ವಿದ್ಯಾರ್ಥಿಗಳ ಗಮನಕ್ಕೆ ತರಬೇಕೆಂದು ಸೂಚಿಸಲಾಗಿದೆ.

    ಏಪ್ರಿಲ್ 19 ರಿಂದ ತರಗತಿಗಳು ಆರಂಭವಾಗಲಿದ್ದು, ಆಗಸ್ಟ್ 7 ಕ್ಕೆ ತರಗತಿಗಳು ಕೊನೆಯಾಗಲಿವೆ. ಆ.19 ರಿಂದ ಪ್ರಾಯೋಗಿಕ ಪರೀಕ್ಷೆ. ಆ 23 ರಿಂದ ಸೆ. 9 ರವರೆಗೆ ಥಿಯರಿ ಪರೀಕ್ಷೆಗಳು ನಡೆಯಲಿವೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪ್ರಕಟಣೆ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap