ಕಾಂಗ್ರೆಸ್‌ ಎರಡನೆ ಪಟ್ಟಿ : ಯಾರಿಗೆ ಸಿಕ್ಕಿದೆ ಟಿಕೆಟ್‌…!

ಬೆಂಗಳೂರು

ತುಮಕೂರು: ಇಕ್ಬಾಲ್ ಅಹಮದ್‌ ಗೆ ಒಲಿದ ಪಾರ್ಟಿ ಟಿಕೆಟ್

       ಯುಗಾದಿಯ ದಿನದಂದು ಬಿಡುಗಡೆಯಾಗ ಬೇಕಾಗಿದ್ದ ಕಾಂಗ್ರೆಸ್ಸಿನ ಬಹು ನಿರೀಕ್ಷಿತ ಮೊದಲ ಪಟ್ಟಿ ಒಂದು ದಿನ ತಡವಾಗಿ ಬಿಡುಗಡೆಯಾಗಿತ್ತು .ನಂತರದ ದಿನಗಳಲ್ಲಿ ನಡೆದ ಕೆಲವು ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿತ್ತು ಅದೇ ರೀತಿ ಈಗ ಎರಡನೆ ಪಟ್ಟಿಯು ಕುತೂಹಲ ಕೆರಳಿಸಿದೆ ಎರಡನೆ ಪಟ್ಟಿ ತಯಾರಿಕೆಯ ಸಮಯದಲ್ಲಿ ಅಭ್ಯರ್ಥಿಗಳ ಜಯಾಪಜಯಗಳ ಸಂಪೂರ್ಣ ವರದಿ ಪರಿಶೀಲಿಸಿ, ನಂತರ ಜಾಗರೂಕತೆ ಮತ್ತು ಚಾಣಾಕ್ಷತೆ ಬಳಸಿ ಈ ಬಿಡುಗಡೆ ಮಾಡುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ನಾಯಕರು ತಿಳಿಸಿದ್ದಾರೆ .

ಒಟ್ಟು 166  ಕ್ಷೇತ್ರಗಳ ಟಿಕೆಟ್‌ ಘೋಷಣೆಯಾಗಿದ್ದು, ಪಕ್ಷಕ್ಕೆ ಜಯಮಾಲೆ ಒಲಿಯುವಂತೆ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿ ತಯಾರು ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು ಇನ್ನು ಚುನಾವಣೆ ಮುಗಿದ ನಂತರ ಅಧಿಕಾರ ನಮ್ಮ ಪಕ್ಷಕ್ಕೆ ಎಂದು ಆತ್ಮವಿಶ್ವಾಸ ತುಂಬಿದ ಮಾತುಗಳಲ್ಲಿ ಹೇಳಿದ್ದಾರೆ.

ಇನ್ನು ಒಂದು ಸುತ್ತಿನ ಪಟ್ಟಿ ಬಿಡುಗಡೆ ಬಾಕಿ ಇದ್ದು ನಾವು ಚುನಾವಣೆಗೆ ಎಲ್ಲಾ ರೀತಿಯಲ್ಲೂ ನಾವು ನ್ಯಾಯಯುತ ಚುನಾವಣೆಗೆ ಸಹಕರಿಸುತ್ತೇವೆ ಎಂದಿದ್ದಾರೆ.ಮತ್ತು ನಿನ್ನೆ ಈ ಕುರಿತಾಗಿ ಉನ್ನತ ಮಟ್ಟದ ಸಭೆ ಕೂಡ ನಡೆದಿದೆ .ಈ ವಿಚಾರವಾಗಿ ಡಿ ಕೆ ಶಿವಕುಮಾರ್‌ ಟ್ವೀಟ್‌ ಸಹ ಮಾಡಿದ್ದಾರೆ .

ತುಮಕೂರು:ಇಕ್ಬಾಲ್ ಅಹಮದ್‌ ಗೆ ಒಲಿದ ಪಾರ್ಟಿ ಟಿಕೆಟ್

        ನಗರದ ಟಿಕೆಟ್‌ ಮೊದಲ ಪಟ್ಟಿಯಲ್ಲಿ ಬರದೆ ಇರುವುದು ತೀರ ಕುತೂಹಲ ಕೆರಳಿಸಿತ್ತು ಆದರೆ ಈಗ ಎರಡನೆ ಪಟ್ಟಿಯಲ್ಲಿ ಬಂದಿದ್ದು ಇಕ್ಬಾಲ್ ಅಹಮದ್ ಅವರಿಗೆ ಕಾಂಗ್ರೇಸ್‌ ಟಿಕೆಟ್‌ ಒಲಿದು ಬಂದಿದೆ. ತುಮಕೂರು ನಗರದಲ್ಲಿ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿ ನಂತರ ಇಕ್ಬಾಲ್ ಅಹಮದ್‌ ರವರಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ .   

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap