ತುಮಕೂರು : ಗಂಡನ ಕೊಲೆಗೆ ಸುಪಾರಿ ನೀಡಿದ ಮಡದಿ..!

ತುಮಕೂರು:

      ಜಿಲ್ಲೆಯ ಕುಣಿಗಲ್‌ ತಾಲ್ಲೂಕಿನ ಸೀನಪ್ಪನಹಳ್ಳಿ ಗ್ರಾಮದ ಮಂಜುನಾಥ್ ಅನುಮಾನಸ್ಪದಾಗಿ ಸಾವನ್ನಪ್ಪಿದ್ದರು‌ ಇದರ ಜಾಡು ಹಿಡಿದು ಕೆದಕಿದ ಪೊಲೀಸರಿಗೆ ಸಿಕ್ಕಿದ್ದೇ ಹೆಂಡತಿಯ ಆನೈತಿಕ ಸಂಬಂಧದ ಕತೆ ಈ ಸಂಬಂಧಕ್ಕೆ ಗಂಡ ಮಂಜುನಾಥ್​ ಅಡ್ಡಿಯಾಗುತ್ತಿದ್ದ ಎನ್ನುವ ಕಾರಣಕ್ಕೆ ಹರ್ಷಿತಾ ತನ್ನ ಗಂಡನ ಕೊಲೆ ಸುಪಾರಿ ನೀಡಿದ್ದಳು ಎನ್ನಲಾಗಿದೆ.

     ಸುಪಾರಿ ಪಡೆದ ಆರೋಪಿಗಳು ಮಂಜುನಾಥ್ ಹುಟ್ಟು ಹಬ್ಬದಂದೇ ಆತನನ್ನು ಕೊಲೆ ಮಾಡಿ ಕೆರೆಗೆ ಬೀಸಾಡಿದ್ದರು ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಕುಣಿಗಲ್ ಪೊಲೀಸರು ಹರ್ಷಿತಾ, ರಘು, ರವಿಕಿರಣ್ ಎಂಬ ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಫೆಬ್ರವರಿ 03 ರಂದು ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿ ಗ್ರಾಮದ ಮಂಜುನಾಥ್ . ಮಂಜುನಾಥ್​ ಮೃತದೇಹ ಗ್ರಾಮದ ಕಿತ್ನಾಮಂಗಲ ಕೆರೆಯ ಬಳಿ ಪತ್ತೆಯಾಗಿತ್ತು. ಅಂದು ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ಮನೆಗೆ ಬಂದಿದ್ದ ಮಂಜುನಾಥ್, ಮಧ್ಯರಾತ್ರಿ 12 ಸುಮಾರಿಗೆ ಯಾವುದೋ ಫೋನ್​ ಬಂತು ಅಂತ ಮನೆಯಿಂದ ಹೊರ ಹೋಗಿದ್ದರಂತೆ.ಆ ಬಳಿಕ ಎಷ್ಟೇ ಸಮಯವಾದರೂ ಆತನ ಮನೆಗೆ ವಾಪಸ್​ ಬಂದಿರಲಿಲ್ಲ ಎಂದು ಮಂಜುನಾಥ್‌ ಮನೆಯವರು ಹೇಳಿದ್ದಾರೆ.  ಮರುದಿನ ಬೆಳಗ್ಗೆ ಆತನ ಮೃತದೇಹ ಗ್ರಾಮದಿಂದ ಒಂದು ಕಿಲೋಮೀಟರ್​ ದೂರದಲ್ಲಿನ ಕಿತ್ನಾಮಂಗಲ ಕೆರೆಯಲ್ಲಿ ಪತ್ತೆಯಾಗಿತ್ತು ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ