ಇಸ್ಲಾಂ ಧರ್ಮದ ಪವಿತ್ರ ತಿಂಗಳು ರಂಜಾನ್ ಶುರುವಾಗುವುದರಲ್ಲಿದೆ. ರಂಜಾನ್ ಗೂ ಮುನ್ನವೇ ಸೌದಿ ಅರೇಬಿಯಾದಲ್ಲಿ ಒಂಟೆಯೊಂದು ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಒಂಟೆಗೆ ಸಿಕ್ಕ ಬೆಲೆ ಕೇಳಿದ್ರೆ ನೀವು ದಿಗ್ಭ್ರಮೆಗೊಳ್ಳೋದು ಗ್ಯಾರಂಟಿ.ಇದು ಜಗತ್ತಿನ ಅತ್ಯಂತ ದುಬಾರಿ ಒಂಟೆ ಅಂತಾನೂ ಹೇಳಲಾಗ್ತಿದೆ.
ಈ ಒಂಟೆಯ ಬೆಲೆ 14 ಕೋಟಿ 23 ಲಕ್ಷ ರೂಪಾಯಿ ಅಂದ್ರೆ ನೀವು ನಂಬಲೇಬೇಕು. ಸೌದಿ ಅರೇಬಿಯಾದಲ್ಲಿ ಈ ಒಂಟೆಯನ್ನು ಸಾರ್ವಜನಿಕವಾಗಿ ಹರಾಜು ಹಾಕಲಾಯ್ತು. ಈ ವಿಡಿಯೋ ಕೂಡ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮದ್ವೆಯಾದ 5 ತಿಂಗಳಲ್ಲೇ ಘೋರ ದುರಂತ : ತನಗಿಂತ 20 ವರ್ಷ ಚಿಕ್ಕವಳ ಜೊತೆಗೆ ಮದ್ವೆಯಾಗಿದ್ದ ಶಂಕ್ರಣ್ಣ ನೇಣಿಗೆ ಶರಣು
ಒಂಟೆಗೆ ಸಿಕ್ಕ ಆರಂಭಿಕ ಬೆಲೆಯೇ 7 ಮಿಲಿಯನ್ ಸೌದಿ ರಿಯಾಲ್, ಅಂದ್ರೆ ಸುಮಾರು 10.16 ಕೋಟಿ ರೂಪಾಯಿ. ಹರಾಜಿನಲ್ಲಿ ಒಂಟೆಯನ್ನು ಕೊಂಡುಕೊಂಡವರು ಯಾರು ಅನ್ನೋದನ್ನು ಬಹಿರಂಗಪಡಿಸಿಲ್ಲ. ಪಾರಂಪರಿಕ ಪೋಷಾಕಿನಲ್ಲಿ ಈ ಹರಾಜು ಪ್ರಕ್ರಿಯೆ ನಡೆದಿದೆ.
ಇದು ಜಗತ್ತಿನ ಅಪರೂಪದ ಒಂಟೆ ಅಂತಾ ಹೇಳಲಾಗ್ತಿದೆ. ಈ ಒಂಟೆ ತನ್ನ ವಿಶೇಷ ಸೌಂದರ್ಯ ಮತ್ತು ಅನನ್ಯತೆಯಿಂದಲೇ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಜಗತ್ತಿನಲ್ಲಿ ಈ ಜಾತಿಯ ಒಂಟೆಗಳು ಬಹಳ ಕಡಿಮೆ. ಸೌದಿ ಅರೇಬಿಯಾದಲ್ಲಿ ಈದ್ ದಿನದಂದು ಒಂಟೆಗಳನ್ನು ಬಲಿ ನೀಡಲಾಗುತ್ತದೆ. ಇಲ್ಲಿ ಜಗತ್ತಿನ ಅತಿ ದೊಡ್ಡ ಒಂಟೆ ಮೇಳವೂ ನಡೆಯುತ್ತದೆ.
ಸಂತೋಷ್ ಕೆ ಪಾಟೀಲ್ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇವೆ : ಕೆ ಎಸ್ ಈಶ್ವರಪ್ಪ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ