ಖರ್ಗೆ ಹೇಳಿಕೆಗೆ ಯೋಗಿ ಆದಿತ್ಯನಾಥ್‌ ಕಿಡಿ…!

ನವದೆಹಲಿ: 

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ‘ರಾಮ vs ಶಿವ’ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಪಕ್ಷ ಭಾರತದ ಸನಾತನ ಸಂಪ್ರದಾಯವನ್ನು ಅವಮಾನಿಸುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಆರೋಪಿಸಿದ್ದಾರೆ.

   ಛತ್ತೀಸ್‌ಗಢದಲ್ಲಿ ಬುಧವಾರ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಪಕ್ಷದ ಅಭ್ಯರ್ಥಿ ಶಿವಕುಮಾರ್ ದಹರಿಯಾ. ಅವರ ಹೆಸರು ಶಿವಕುಮಾರ್, ಅವರು ರಾಮನೊಂದಿಗೆ ಸ್ಪರ್ಧಿಸಬಹುದೇ ಏಕೆಂದರೆ ಅವರು ಶಿವ. ನಾನು ಕೂಡಾ ಮಲ್ಲಿಕಾರ್ಜುನ (ಶಿವ) ಎಂದರು.

    ಖರ್ಗೆಯವರ ಟೀಕೆಗೆ ಪ್ರತಿಕ್ರಿಯಿಸಿದ ಯೋಗಿ ಆದಿತ್ಯನಾಥ್, ರಾಮ ಮತ್ತು ಶಿವ ಬೇರೆಯಲ್ಲ ಎಂದು ಹೇಳಿದರು. ರಾಮನು ಸ್ವತಃ ಶಿವನನ್ನು ಪೂಜಿಸುತ್ತಿದ್ದನು. ಇಬ್ಬರೂ ಪರಸ್ಪರ ಪೂರಕವಾಗಿದ್ದಾರೆ. ಕಾಂಗ್ರೆಸ್‌ನ ನಿಜವಾದ ಮುಖವು ಮುನ್ನೆಲೆಗೆ ಬರುತ್ತಿದೆ. ಭಾರತದ ಸನಾತನ ಸಂಪ್ರದಾಯವನ್ನು ಅವಮಾನಿಸುವುದು, ಅದನ್ನು ದೂಷಿಸುವುದು, ಭಾರತದ ನಂಬಿಕೆಯೊಂದಿಗೆ ಆಟವಾಡುವುದು ಕಾಂಗ್ರೆಸ್‌ನ ಪ್ರವೃತ್ತಿಯಾಗಿದ್ದು, ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

   ಸನಾತನ ಧರ್ಮವನ್ನು ಅಪಹಾಸ್ಯ ಮಾಡುವ ಮೂಲಕ ಕಾಂಗ್ರೆಸ್ ತನ್ನ ಹತಾಶೆಯನ್ನು ಹೊರಹಾಕುತ್ತಿದೆ. “ಚುನಾವಣೆ ಸಂದರ್ಭದಲ್ಲಿ ಇಂತಹ ಸೂಕ್ಷ್ಮ ವಿಚಾರಗಳನ್ನು ಆಯ್ದುಕೊಳ್ಳುವ ಮೂಲಕ ಕಾಂಗ್ರೆಸ್ ಭಾರತದ ನಂಬಿಕೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap