32 ಸಿಸಿ ಕ್ಯಾಮರಾಗಳಲ್ಲಿ ಬಹುತೇಕ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿಲ್ಲ

0
16

ಹಾವೇರಿ :

       ನಗರವು ಜಿಲ್ಲೆಯ ಕೇಂದ್ರ ಪ್ರದೇಶವಾಗಿದ್ದು, ಇಲ್ಲಿ ಹಲವಾರು ಜಿಲ್ಲಾ ಕಛೇರಿಗಳು ಕಾರ್ಯನಿರ್ವಹಿಸುತ್ತಿವೆ. ಹತ್ತು ಸಾವಿರಕ್ಕೂ ಅಧಿಕ ಶಾಲಾ ಕಾಲೇಜು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಸಮಾಜದ ಹಾಗೂ ಜನರ ಭದ್ರತೆ ದೃಷ್ಠಿಯಿಂದ ನಗರದ ಸಿಸಿ ಕ್ಯಾಮರಾಗಳನ್ನು ದುರಸ್ಥಿ ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ಪದಾಧಿಕಾರಿಗಳಿಂದ ಜಿಲ್ಲಾ ವರಿಷ್ಠಾಧಿಕಾರಿಗಳಾದ ಕೆ ಪರಶುರಾಮ ಅವರಿಗೆ ಮನವಿ ಸಲ್ಲಿಸಿಲಾಯಿತು.

         ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ಹೆಚ್ಚಾಗುತ್ತಿದ್ದು. ಜನ ದಟ್ಟನೆ, ಅಪಘಾತಗಳು ಅಧಿಕವಾಗುತ್ತಿವೆ. ನಗರದಲ್ಲಿ ಇರುವ 32 ಸಿಸಿ ಕ್ಯಾಮರಾಗಳಲ್ಲಿ ಬಹುತೇಕ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿಲ್ಲ. ಅವುಗಳನ್ನು ದುರಸ್ಥಿಗೊಳಿಸಿ ಕಾರ್ಯಗತಗೊಳಿಸುವುದು ಜರುರು ಅಗತ್ಯವಿದೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಇನ್ನು ಕೆಲವು ಪ್ರಮುಖ ಸ್ಥಳಗಳಲ್ಲಿ ಕ್ಯಾಮರಾ ಅಳವಡಿಸಬೇಕು. ಇದರಿಂದ ಅಪಘಾತಗಳನ್ನು ಹಾಗೂ ಅಪರಾಧಗಳನ್ನು ಪತ್ತೆಹಚ್ಚುವುದು ಅತ್ಯಂತ ಸುಲಭ.

          ಶಾಲಾ ಕಾಲೇಜಗಳ ವಿದ್ಯಾರ್ಥಿನಿಯರಿಗೆ ರಸ್ತೆಗಳಲ್ಲಿ ಪುಂಡರು ಚುಡಾಯಿಸುವ ಘಟನೆಗಳು ನಡೆದಿದ್ದು ಇವುಗಳನ್ನು ನಿಯಂತ್ರಿಸಿಲು ಸಿಸಿ ಕ್ಯಾಮರಾ ಅವಶ್ಯಕವಾಗಿದೆ. ತಾವುಗಳು ಅತಿ ಶಿಘ್ರವಾಗಿ ಸಿಸಿ ಕ್ಯಾಮರಾಗಳನ್ನು ದುರಸ್ಥಿಗೊಳಿಸಿ ಜಿಲ್ಲಾ ಕೇಂದ್ರದ ಘನತೆ ಗೌರವನ್ನು ಕಾಪಾಡಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸಂತೋಷ ಆಲದಕಟ್ಟಿ.ಪ್ರಶಾಂತ ಗಾಣಗೇರ.ನೀಕಿಲ್ ಡೊಳ್ಳಿನ.ಗಿರೀಶ ಶೆಟ್ಟರ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here