ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಮೈತ್ರಿ ಪಕ್ಷದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ರವರು ತಾವು ಸಿಂಗಾಪುರಕ್ಕೆ ಹೋಗುವ ವಿಷಯಕ್ಕೆ ಸಂಬಂಧಪಟ್ಟಂತೆ ಮೈಸೂರಿನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಐದು ದಿವಸಗಳ ಕಾಲ ಸಿಂಗಾಪುರದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಮಗ ಶಾಸಕ ಯತೀಂದ್ರ ಅವರ ಜೊತೆಗೆ ಇರಲಿದ್ದಾರೆ ಎನ್ನಲಾಗಿದೆ.
ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಶುರುವಾಗುವುದಕ್ಕೆ ಇನ್ನೇನು ಕೆಲವೇ ದಿವಸಗಳು ಬಾಕಿ ಉಳಿದಿವೆ. ಈ ನಡುವೆ ಬಿಜೆಪಿಯು ದೋಸ್ತಿ ಸರಕಾರದ ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳುವುದಕ್ಕೆ ಮುಂದಾಗಿದೆ ಎನ್ನುವ ಬೆನ್ನಲ್ಲೆ ದೋಸ್ತಿ ಸರಕಾರದ ಟ್ರಬಲ್ ಶೂಟರ‍್ ಹೀಗೆ ಫಾರಿನ್ ಟೂರು ಹೋಗುವುದು ಸಹಜವಾಗಿ ದೋಸ್ತಿ ಸರಕಾರದಲ್ಲಿ ಹೊಸ ತಳಮಳ ಉಂಟುಮಾಡಿದೆ.
ಅಧಿವೇಶನ ನಡೆಯುತ್ತಿರುವ ವೇಳೆಯಲ್ಲೇ ಸಿಂಗಾಪುರಕ್ಕೆ ಟ್ರಿಪ್ ಹೋಗುತ್ತಿರುವುದು ಸಮ್ಮಿಶ್ರ ಸರಕಾರದಲ್ಲಿ ಹೊಸ ಬಿರುಗಾಳಿಯೇ ಬೀಸಿದಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
