ಆಹಾರ ಭದ್ರತಾ ಕಾಯ್ದೆ ಸಂವಾದ ಕಾರ್ಯಕ್ರಮದ ಉದ್ಘಾಟನೆ

ಹಾನಗಲ್ಲ :

        ಗ್ರಾಮೀಣ ಪ್ರದೇಶದಲ್ಲಿರುವ ನ್ಯಾಯಬೆಲೆ ಅಂಗಡಿಗಳು ಮತ್ತು ಆಹಾರ ಇಲಾಖೆಗಳು ಪ್ರಾಮಾಣಿಕವಾಗಿ ಜನರಿಗೆ ಸೇವೆ ನೀಡಿದರೆ ಮಾತ್ರ ಅರ್ಹ ಬಡ ಕೂಲಿಕಾರ್ಮಿಕರಿಗೆ ಸೌಲಭ್ಯಗಳು ತಲುಪಲು ಸಾಧ್ಯ ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊತಂಬರಿ ಅಭಿಪ್ರಾಯಪಟ್ಟರು

        ಹಾನಗಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆ ವಿಶ್ವ ಆಹಾರ ದಿನಾಚರಣೆ ಅಂಗವಾಗಿ ಲೋಕ್ ಮಂಚ್ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿದ ಆಹಾರ ಭದ್ರತಾ ಕಾಯ್ದೆ ಸಂವಾದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂದು ಸ್ಥಿತಿವಂತರು ನೌಕರಿವರ್ಗದವರು ಅನೇಕ ಸೌಲಭ್ಯಗಳನ್ನು ಪಡೆಯುತ್ತಿರುವುದನ್ನು ನಾವೆಲ್ಲ ಪ್ರತಿದಿನ ಕೇಳುತ್ತಿದ್ದೇವೆ. ಸರಕಾರ ಕಾನೂನು ಮಾಡಿದರೆ ಸಾಲದು ಕಾನೂನು ಸಮರ್ಪಕವಾಗಿ ಜಾರಿಯಾಗಬೇಕು. ಮತ್ತು ಮಾತೃತ್ವ ಯೋಜನೆ, ಬಿಸಿಊಟ, ಆಂಗನವಾಡಿ ಮಕ್ಕಳ ಆಹಾರಗಳ ಪ್ರಯೋಜನೆ ಯಾವ ರೀತಿ ನಡೆಯುತ್ತದೆ ಎಂದು ತಿಳಿಯಲು ಜನರು ಜಾಗೃತರಾದರೆ ಬಡಮಹಿಳೆಯರಲ್ಲಿ ಉಂಟಾಗುವ ಅಪೌಷ್ಠಿಕತೆ ತಪ್ಪಿಸಿ ಬಡವರಿಗೆ ನ್ಯಾಯ ದೊರಕಿಸಿ ಉತ್ತಮ ಸಮಾಜ ಕಟ್ಟಬಹುದು ಎಂದರು.

       ಸ್ಪೂರ್ತಿ ಗ್ರಾಮ ಪಂಚಾಯತ ಚುನಾಯಿತ ಮಹಿಳಾ ಸದಸ್ಯರ ಒಕ್ಕೂಟದ ಅಧ್ಯಕ್ಷರಾದ ನಿರ್ಮಲಾ ರಾಜಶೇಖರಗೌಡ ಪಾಟೀಲ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬ ಪ್ರಜೆ ಮೂಲ ದಾಖಲಾತಿಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಪ್ರತಿಯೊಂದು ಸರಕಾರಿ ಸೌಲಭ್ಯಗಳನ್ನು ಪಡೆಯಬೇಕಾದರೆ ಕಡ್ಡಾಯವಾಗಿ ಅಗತ್ಯ ದಾಖಲಾತಿಗಳು ಬೇಕು. ಈ ನಿಟ್ಟಿನಲ್ಲಿ ಲೋಕಮಂಚ್ ಮುಖಂಡರು ಸೌಲಭ್ಯ ವಂಚಿತ ನಿರ್ಲಕ್ಷಿತ ಜನರನ್ನು ಗುರುತಿಸಿ ಆಹಾರ ಭದ್ರತಾ ಕಾಯ್ದೆ ಸಂವಾದ ಕಾರ್ಯಕ್ರಮದಲ್ಲಿ ತೊಡಗಿಸಿರುವುದು ಸಂತೋಷದ ವಿಷಯ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರೂ ಈ ಸಂವಾದ ಕಾರ್ಯಕ್ರಮದ ಸದುಪುಯೋಗ ಪಡೆದುಕೊಳ್ಳುವಂತೆ ಕರೆ ನೀಡಿದ ಅವರು, ಚುನಾಯಿತ ಸದಸ್ಯರು ಜನರ ಅಗತ್ಯಗಳಿಗೆ ಸ್ಪಂದಿಸ ಬೇಕು ಮತ್ತು ಜನರು ತಮ್ಮ ಸಮಸ್ಯೆಗಳನ್ನು ವಾರ್ಡ ಸದಸ್ಯರ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

       ಕಾರ್ಯಗಾರದ ಅಧ್ಯಕ್ಷತೆ ವಹಿಸಿದ ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ ಡಿಂಪಲ್ ಡಿಸೋಜಾ ಮಾತನಾಡಿ, ಅನ್ನಭಾಗ್ಯ ಯೋಜನೆಯಲ್ಲಿ ಜನರು ತಮಗಿರುವ ಸಮಸ್ಯೆಗಳನ್ನು ಆಹಾರ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಕ್ಷಣ ಜನರ ಕಷ್ಟ ಆಲಿಸಿ ಪ್ರತಿಯೊಬ್ಬರಿಗೂ ರೇಶನ್ ಕಾರ್ಡ ಒದಗಿಸಬೇಕು. ಲೋಕ್ ಮಂಚ್ ಮುಖಂಡರು ಸಮಾಜದಲ್ಲಿ ನಡೆಯುವ ಬ್ರಷ್ಠಾಚಾರದ ವಿರುದ್ದ ಸಂಘಟಿತರಾಗಿ ಹೋರಾಡಬೇಕು. ಸಮಾಜದಲ್ಲಿ ಬದಲಾವಣೆ ತಂದು ಶೋಷಿತ ಜನರಲ್ಲಿ ಬೆಳಕು ಮೂಡಿಸುವ ಕಾರ್ಯದಲ್ಲಿ ಲೋಕ್ ಮಂಚ್ ಮುಂಖಡರು ಇನ್ನೂ ಹೆಚ್ಚಿನ ಶ್ರಮ ಹಾಕುವ ಅಗತ್ಯವಿದೆ ಎಂದರು.

        ಕಾರ್ಯಾಗಾರದಲ್ಲಿ ಪಾಲ್ಗೊಂಡ ಸಾರ್ವಜನಿಕರು ಸಮಸ್ಯೆಗಳ ಕುರಿತು ಮಾತನಾಡಿ, ಪಡಿತರ ಅಂಗಡಿಗಳಲ್ಲಿ 3 ರಿಂದ 4 ದಿನ ರೇಶನ್ ಹಂಚುತ್ತಾರೆ. ಸೀಮೆ ಎಣ್ಣಿಗೆ ಹೆಚ್ಚಿನ ಹಣ ಪಡೆಯುತ್ತಾರೆ. ತೊಗರಿಬೇಳೆಗೂ ಹೆಚ್ಚಿನ ಹಣ ಪಡೆಯುವುದು. ದಾರಣೆ ಬೋರ್ಡ ಹಾಕುವದಿಲ್ಲ. 1 ಕೆಜಿ ಅಕ್ಕಿ ಕಡಿಮೆ ಕೊಡುತ್ತಾರೆ. ಕೆಲವರು 2 ರಿಂದ 3 ಸಲ ಅರ್ಜಿಹಾಕಿದರು ಕಾರ್ಡ ಇಲ್ಲಾ ಈ ಸಮಸ್ಯಗಳಿಗೆ ಪರಿಹಾರ ಯಾವಾಗ ಎಂದು ಪ್ರಶ್ನಿಸಿದರು.

         ಸಂವಾದ ಕಾರ್ಯಕ್ರಮದಲ್ಲಿ ಆಹಾರ ಇಲಾಖೆಯ ವೀಣಾ ಕಿವಡೇರವರು ಅರ್ಜಿ ಹಾಕುವುದು, ಎಪಿಎಲ್, ಬಿಪಿಎಲ್, ಅಂತ್ಯೋದಯ ಕಾರ್ಡುಗಳ ಮಾನದಂಡಗಳು, ಕಾರ್ಡಗಳ ವಿಳಂಬದ ಮಾಹಿತಿ ನೀಡಿದರು.

         ವೇದಿಕೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷರಾದ ದೇವರಹೊಸಪೇಟಿಯ ಕುಮಾರ ರುದ್ರಪ್ಪ ಕ್ಯಾಬಳ್ಳಿ ಇದ್ದರು. ವೈ.ಕೆ.ಗೌರಮ್ಮ ಸ್ವಾಗತಿಸಿದರು. ಕೆ.ಎಫ್.ನಾಯ್ಕರ ನಿರೂಪಿಸಿದರು. ಪ್ರೇಮಾ ಬಿದರಕೊಪ್ಪ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link