ಚಳ್ಳಕೆರೆ
ತಾಲ್ಲೂಕಿನ ಕುದಾಪುರದಲ್ಲಿರುವ ಐಐಎಸ್ಸಿಯ ಟ್ಯಾಲೆಂಟ್ ಡೌವಲಪ್ಮೆಂಟ್ ಸೆಂಟರ್ಗೆ ತರಬೇತಿಗಾಗಿ ಆಗಮಿಸಿದ್ದ ಉಪನ್ಯಾಸಕರಿಗೆ ಬೆದರಿಕೆ ಹಾಕಿ ಅವರಲ್ಲಿದ್ದ ನಗದು ಹಣ, ವಾಚ್ ಹಾಗೂ ಇತರೆ ಬಂಗಾರದ ಆಭರಣಗಳನ್ನು ದರೋಡೆ ಮಾಡಿದ ಘಟನೆ ಮಂಗಳವಾರ ನಡೆದಿದೆ.
ಒರಿಸಾ ಮೂಲದ ಬಾಲಸೂರು ಜಿಲ್ಲೆಯ ಜಿಲೇಶ್ವರಗ್ರಾಮದ ಪ್ರಾಣಿಶಾಸ್ತ್ರ ಉಪನ್ಯಾಸಕ ಹರೆ ಕೃಷ್ಣಗಿರಿ ಎಂಬುವವರು ಇಲಾಖೆಯ ನಿರ್ದೇಶನದಂತೆ ಇಲ್ಲಿನ ಐಐಎಸ್ಸಿ ಕೇಂದ್ರಕ್ಕೆ ಮೇ-14 ರಿಂದ 24ರ ತನಕ 10 ದಿನಗಳ ಕಾಲ ತರಬೇತಿಗಾಗಿ ಆಗಮಿಸಿದ್ದು, ಒರಿಸಾದಿಂದ ಬೆಂಗಳೂರು ಮೂಲಕ ಚಳ್ಳಕೆರೆ ನಗರಕ್ಕೆ ಆಗಮಿಸಿ ಸೋಮವಾರ ರಾತ್ರಿ ಸುಮಾರು 8.45ರ ಸಮಯದಲ್ಲಿ ಊಟಕ್ಕಾಗಿ ಹೋಟೆಲ್ ಬಗ್ಗೆ ವಿಚಾರಿಸಿದಾಗ ಯಾರೋ ಅಪರಿಚಿತ ವ್ಯಕ್ತಿ ಇವರನ್ನು ಮಾತನಾಡಿಸಿ ಹೆಸರು ಮತ್ತು ವಿವರಗಳನ್ನು ಪಡೆದು ನನ್ನ ಸಹೋದರನು ಸಹ ಅಲ್ಲೇ ಕಾರ್ಯನಿರ್ವಹಿಸುತ್ತಿದ್ದು,
ರಾತ್ರಿ ವೇಳೆ ಆದ್ದರಿಂದ ಬಸ್ನ ಸೌಲಭ್ಯ ಇಲ್ಲದ ಕಾರಣ, ನನ್ನ ಮೋಟಾರ್ ಬೈಕ್ನಲ್ಲೇ ಕುದಾಪುರಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಆತನನ್ನು ಬೈಕ್ನಲ್ಲಿ ಕೂರಿಸಿಕೊಂಡು ನಾಯಕನಹಟ್ಟಿ ಬಳಿಯ ಕುದಾಪುರದತ್ತ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ವೆಂಕಟೇಶ್ವರ ನಗರದ ಬಳಿಯ ಕಚ್ಚ ರಸ್ತೆಯಿಂದ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಯಾರೋ ಇಬ್ಬರು ಅಪರಿಚಿತರು ಬಂದು ಉಪನ್ಯಾಸಕ ಹರೆ ಕೃಷ್ಣಗಿರಿ ಮತ್ತು ಈತನ ಮೇಲೆ ಹಲ್ಲೆ ನಡೆಸಿ ಕೃಷ್ಣಗಿರಿ ಬಳಿ ಇದ್ದ ಬ್ಯಾಗ್, ರಾಡರ್ ವಾರ್ಚ್, ಬಂಗಾರ ಚೈನ್, ಉಂಗುರ, 3500 ನಗದು ಹಣ ಹಾಗೂ 1.75 ಲಕ್ಷ ಮೌಲ್ಯದ ಮೊಬೈಲ್ ಕಸಿದುಕೊಂಡು ಪರಾರಿಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಬೈಕ್ ಸವಾರನು ಸಹ ಸ್ಥಳದಿಂದ ಓಡಿಹೋಗಿದ್ದು, ಅಪರಿಚಿತರಿಂದ ಹಲ್ಲೆಗೊಳಗಾದ ಹರೆ ಕೃಷ್ಣಗಿರಿ ಸ್ವಲ್ಪ ಸಮಯದ ನಂತರ ಸುಧಾರಿಸಿಕೊಂಡು ಯಾವುದೋ ವಾಹನದಲ್ಲಿ ಚಳ್ಳಕೆರೆಗೆ ಆಗಮಿಸಿ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿ ತನ್ನಲ್ಲಿದ್ದ ವಸ್ತು, ಹಣ ಹಾಗೂ ದಾಖಲಾತಿಗಳನ್ನು ದರೋಡೆ ಮಾಡಿದ ಬಗ್ಗೆ ದೂರು ನೀಡಿರುತ್ತಾನೆ. ಕೂಡಲೇ ಪೊಲೀಸರು ದೂರನ್ನು ದಾಖಲಿಸಿಕೊಂಡು ಕೃಷ್ಣಗಿರಿಯವರನ್ನು ಅಡ್ಡಗಟ್ಟಿ ಹಣ ದೋಚಿತ ಅಪರಿಚಿತ ವ್ಯಕ್ತಿಗಳಿಗಾಗಿ ಶೋಧನಕಾರ್ಯ ನಡೆಸುತ್ತಿದ್ಧಾರೆ. ಉಪನ್ಯಾಸಕ ಕೃಷ್ಣಗಿರಿ ತರಬೇತಿಗೆ ಆಗಮಿಸಿದ ಸಂದರ್ಭದಲ್ಲಿ ಇವರ ಒಂಟಿತನವನ್ನು ಕಂಡ ಯಾರೋ ಆಗುಂತಕರು ಈತನನ್ನು ಹಿಂಬಾಲಿಸಿ ಹಲ್ಲೆ ನಡೆಸಿ ಅವರಲ್ಲಿದ್ದ ಎಲ್ಲಾ ವಸ್ತುಗಳನ್ನು ದೋಚಿ ಪರಾರಿಯಾಗಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/05/14CLK2P.gif)