ಕಳಸ : ಕಗ್ಗನಹಳ್ಳ ಗ್ರಾಮಕ್ಕೆ ರಸ್ತೆಯೇ ಮರಿಚಿಕೆ

ಕಳಸ

     ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕಗ್ಗನಹಳ್ಳ ಗ್ರಾಮಕ್ಕೆ ಮಾತ್ರ ದೇಶದ ಆಡಳಿತ ವ್ಯವಸ್ಥೆ ಸತ್ತು ದಶಕಗಳೇ ಕಳೆದಿದೆ.

     ಈ ಗ್ರಾಮಕ್ಕೆ ಓಡಾಡೋಕೆ ರಸ್ತೆಯೇ ಇಲ್ಲ, ರಸ್ತೆ ಈ ದೇಶದ ಎಷ್ಟೋ ಗ್ರಾಮಕ್ಕೆ ಇಲ್ಲ, ಇದೇನು ಮಹಾ ಅನ್ನಬೇಡಿ, ರಸ್ತೆ ಇಲ್ಲ ಅಂದ್ರೆ ಕಲ್ಲು-ಮಣ್ಣಿನ ರಸ್ತೆಯೂ ಇಲ್ಲ. ಇವ್ರಿಗೆ ಭದ್ರ ನದಿಯೇ ರಸ್ತೆ, ನದಿಯಲ್ಲಿ ಎಷ್ಟೇ ವೇಗವಾಗಿ ನೀರು ಹರಿಯುತ್ತಿದ್ದು, ಈ ಗ್ರಾಮದ ಜನ ತೆಪ್ಪದ ಮೂಲಕವೇ ಓಡಾಡಬೇಕು. ಇದು ಇಂದು-ನಿನ್ನೆಯದಲ್ಲ. ಕಳೆದ ಎರಡೂರು ದಶಕದ್ದು, ಡಿಸಿ‌, ರಾಜಕಾರಣಿಗಳು ಬಂದು ಈ ಗ್ರಾಮಕ್ಕೆ ದಾರಿ ಮಾಡಿಕೊಡುವಲ್ಲಿ ಸೋತಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕಗ್ಗನಹಳ್ಳ ಗ್ರಾಮದಲ್ಲಿ 50 ರಿಂದ 60 ಅಡಿ ಆಳದ ಭದ್ರಾ ನದಿ ಮೇಲೆ ಇವರು ಐದಾರು ದಶಕಗಳಿಂದ ತೇಲಿಕೊಂಡೇ ಬದುಕ್ತಿದ್ದಾರೆ. ಮಳೆಗಾಲದಲ್ಲಿ ಕಟ್ಟಿಕೊಂಡ ಸಂಕ ಕೊಚ್ಚಿ ಹೋಗಿರುತ್ತೆ. ಬೇಸಿಗೆಯಲ್ಲಿ ಮತ್ತೆ ಕಟ್ಟಿಕೊಳ್ಳಬೇಕು ಇದಂರಹ ಪರಿಸ್ಥಿತಿಯಲ್ಲಿ ಈ ಗ್ರಾಮದ ಜನರು.

    ಇನ್ನು ಸತ್ತವರನ್ನು ಅಂತ್ಯ ಸಂಸ್ಕಾರ ಮಾಡುವುದಕ್ಕೆ, ಬಾಣಂತಿಯನ್ನ ಆಸ್ಪತ್ರೆಗೆ ಕೊಂಡೊಯ್ಯೋದಕ್ಕೆ, ಮಕ್ಕಳು ಶಾಲೆಗೆ ಹೋಗೋದಕ್ಕೂ ಪ್ರತಿಯೊಂದಕ್ಕೂ ಇವ್ರಿಗೆ ಮಳೆಗಾಲದಲ್ಲಿ ದೋಣಿ, ಬೇಸಿಗೆಯಲ್ಲಿ ಈ ಕಾಲುಸಂಕ ಆಸರೆಯಾಗುತ್ತವೆ. ಮಳೆಗಾಲ ಸಂಧರ್ಬದಲ್ಲಿ ಮಕ್ಕಳು ತಿಂಗಳುಗಟ್ಟಲೆ ಶಾಲೆಗೆ ಹೋಗಲ್ಲ. ಕೆಲ ಮಕ್ಕಳು ಶಾಲೆಯನ್ನೇ ಬಿಟ್ಟಿದ್ದಾರೆ ರಸ್ತೆ ಮಾಡಿ ಕೊಡ್ತೀವಿ ಅಂತ ಅಧಿಕಾರಿಗಳು-ಜನನಾಯಕರು ಬಂದಿದ್ದಾರೆ. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹೋಗಿದ್ದಾರೆ.

    ರಾಜ್ಯದಲ್ಲಿ ಪೂರ್ಣ ಬಹುಮತದ ಸ್ಪಷ್ಟ ಸರ್ಕಾರವಿದೆ. ಶಾಸಕರು ಆಯ್ಕೆಯಾಗಿದ್ದಾರೆ. ಇನ್ನಾದ್ರು, ಸರ್ಕಾರ, ಜನನಾಯಕರು, ಅಧಿಕಾರಿಗಳು ಇತ್ತ ಗಮನ ಹರಿಸಿ ಮೂಲಭೂತ ಸೌಲಭ್ಯವನ್ನ ಕಲ್ಪಿಸುತ್ತಾರ ಕಾದು ನೋಡಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link