ಗೌರಿ-ಗಣೇಶ ಹಬ್ಬದ ಖರೀದಿಯಲ್ಲಿ ಜನತೆ

0
201

ತುರುವೇಕೆರೆ
             ಹಣ್ಣು ಹೂಗಳ ಬೆಲೆ ಏರಿಕೆಗಳ ನಡುವೆಯೂ ಸಹ ಸಂಪ್ರದಾಯದಂತೆ ಗೌರಿ-ಗಣೇಶ ಹಬ್ಬವನ್ನು ಆಚರಿಸುವ ಸಲುವಾಗಿ ಮಂಗಳವಾರ ಪಟ್ಟಣದಲ್ಲಿ ಜನರು ಹಲವು ವಸ್ತುಗಳ ಖರೀದಿಯಲ್ಲಿ ತೊಡಗಿದ್ದು ಕಂಡು ಬಂತು.
             ಗೌರಿ ಗಣೇಶ ಹಬ್ಬ ಆಚರಣೆಗೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಬಾಳೆಹಣ್ಣು ಕೆ.ಜಿ.ಗೆ 100 ರೂ.ನಿಂದ 120 ರೂ, ಹೂವು ಮಾರು 100 ರೂ, ಹಣ್ಣುಗಳು ಕೆಜಿ 150 ರೂಗಳಿಗೇರಿದ್ದು ಜನತೆ ಕೊಳ್ಳಲು ಹಿಂದು ಮುಂದು ಯೋಚಿಸುವಂತಾಗಿದೆ. ಗೌರಿ ಗಣೇಶನ ಹಬ್ಬಕ್ಕೆ ಹಾಗೂ ಹೆಣ್ಣು ಮಕ್ಕಳಿಗೆ ಬಾಗಿನ ನೀಡುವ ಸಲುವಾಗಿ ಸಂಪ್ರದಾಯದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಕೊಳ್ಳಲೇಬೇಕಾಗಿದೆ. ಆದರೆ ಈ ವರ್ಷವು ಸಹಾ ಸಕಾಲಕ್ಕೆ ಮಳೆ ಇಲ್ಲದೆ ಬೇಸತ್ತಿರುವ ರೈತರು ಹಾಗೂ ಪಟ್ಟಣದ ಜನತೆ ಸಂಪ್ರದಾಯದಂತೆ ಇತ್ತ ಹಬ್ಬ ಆಚರಿಸಲು ಆಗದೆ, ಬಿಡಲೂ ಆಗದಂತಹ ಪರಿಸ್ಥಿತಿ ಎದುರಾಗಿದೆ.
            ಪಟ್ಟಣಕ್ಕೆ ಬಂದ ಗಣೇಶ ಮೂರ್ತಿಗಳು: ಪಟ್ಟಣದ ರಸ್ತೆ ಬದಿಯಲ್ಲ್ಲಿ ಗೌರಿ ಗಣೇಶನ ಮೂರ್ತಿಗಳು ಮಾರಾಟ ಮಾಡುತ್ತಿದ್ದಾರೆ. ತಾಲ್ಲೂಕಿನ ಹಳ್ಳಿಗಳು ಸೇರಿದಂತೆ ಪಟ್ಟಣದ ವಾರ್ಡ್‍ಗಳಲ್ಲಿ ಯುವಕರಿಂದ ಹಿಡಿದು ಮಕ್ಕಳಾದಿಯಾಗಿ ಗೌರಿ ಗಣೇಶನನ್ನು ಪ್ರತಿಷ್ಠಾಪಿಸುತ್ತಿದ್ದು ಒಟ್ಟಿನಲ್ಲಿ ಸಾರ್ವಜನಿಕರು ಸಂಪ್ರದಾಯದಂತೆ ಗೌರಿ-ಗಣೇಶನನ್ನು ಶ್ರದ್ದಾ ಭಕ್ತಿಯಿಂದ ಬರಮಾಡಿಕೊಳ್ಳಲು ಜನರು ಈಗಾಗಲೇ ಪೂರ್ವ ಸಿದ್ದತೆಯಲ್ಲಿ ತೊಡಗಿದ್ದಾರೆ. ಶಾಸಕರು ಈ ಬಾರಿ ಪಿಓಪಿ ಗಣಪತಿ ಮಾರಾಟ ಮಾಡದಂತೆ ಪ. ಪಂ. ಕ್ರಮ ಕೈಗೊಳ್ಳಲು ಆದೇಶಿಸಿರುವ ಹಿನ್ನೆಲೆಯಲ್ಲಿ ಮಣ್ಣಿನ ಗಣಪತಿಗಳಿಗೆ ಬೇಡಿಕೆ ಹೆಚ್ಚಿದ್ದು ಬರಗಾಲದ ನಡುವೆಯೂ ಸಹಾ ಗಣೇಶನ ಮಾರಾಟ ಬಹು ಜೋರಾಗಿಯೇ ನಡೆದಿದೆ ಎನ್ನಬಹುದು

LEAVE A REPLY

Please enter your comment!
Please enter your name here