ನಗರಕ್ಕೆ ಡೀಸೆಲ್ ಬಸ್ ಗಳ ಬದಲಾಗಿ ಎಲೆಕ್ಟ್ರಿಕ್ ಬಸ್ ಗಳು

ಬೆಂಗಳೂರು:DCM assures e-bus in Bengaluru instead Petrol and Diesel bus!

     ಇನ್ನು ಐದು ವರ್ಷದಲ್ಲಿ ಬೆಂಗಳೂರಲ್ಲಿ ಸಂಪೂರ್ಣವಾಗಿ ಡೀಸೆಲ್ ಮತ್ತು ಪೆಟ್ರೋಲ್ ಬಸ್‌ಗಳ ಸ್ಥಳದಲ್ಲಿ ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸಲಿವೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

      ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ 8ನೇ ಬಸ್‌ ವರ್ಲ್ಡ್ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

DCM assures e-bus in Bengaluru instead Petrol and Diesel bus!

      ಬೆಂಗಳೂರಿನಲ್ಲಿ ನಿತ್ಯ 70 ಲಕ್ಷ ವಾಹನಗಳು ಸಂಚರಿಸುತ್ತಿವೆ. ಆದರೆ ಈ ವಾಹನಗಳಿಗೆ ವ್ಯವಸ್ಥಿತ ರಸ್ತೆಗಳಿಲ್ಲ. ಡೀಸೆಲ್, ಪೆಟ್ರೋಲ್ ಬಸ್‌ಗಳಿಂದ ವಾಯುಮಾಲಿನ್ಯ ಕೂಡ ಹೆಚ್ಚಾಗಿದೆ. ಅಷ್ಟೆ ಅಲ್ಲದೆ ಬಿಎಂಟಿಸಿಯಿಂದ‌ 6 ಸಾವಿರ ವಾಹನಗಳು ಸಂಚರಿಸುತ್ತಿವೆ. ಈ ಎಲ್ಲವೂ ಡೀಸೆಲ್ ಆಗಿರುವುದರಿಂದ ವಾಯುಮಾಲಿನ್ಯ ಕೂಡ ಹೆಚ್ಚುತ್ತವೆ. ಹೀಗಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸುವುದು ಉತ್ತಮ ಎಂದರು.

      ಬೆಂಗಳೂರು ಕಳೆದ 20 ವರ್ಷದಲ್ಲಿ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಐಟಿ-ಬಿಟಿ, ಕೈಗಾರಿಕೆ, ವಿಜ್ಞಾನ , ಸಂಶೋಧನೆ, ಏರೋ ಸ್ಪೇಸ್ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಬೆಂಗಳೂರು ಕೇಂದ್ರವಾಗಿದೆ. ಈ ಪ್ರದರ್ಶನದಲ್ಲಿ ಚೈನಾ, ಕೊರಿಯಾ , ಆಸ್ಟ್ರೇಲಿಯಾ, ಬೆಲ್ಜಿಯಂನಿಂದ ಕಂಪನಿಗಳು ಆಗಮಿಸಿದ್ದು, ತಂತಮ್ಮ ತಂತ್ರಜ್ಞಾನವನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. 

 

Recent Articles

spot_img

Related Stories

Share via
Copy link
Powered by Social Snap