ನನ್ನನ್ನು ಭೇಟಿ ಮಾಡಿರುವುದಾಗಿ ಮಲ್ಯ ಹೇಳಿರುವುದು ಶುದ್ಧ ಸುಳ್ಳು: ಅರುಣ್‌ ಜೇಟ್ಲಿ

ಹೊಸದಿಲ್ಲಿ:

             ಸಾಲದ ಸಮಸ್ಯೆಯಿಂದಾಗಿ ಎರಡು ವರ್ಷಗಳ ಹಿಂದೆ ದೇಶ ಬಿಟ್ಟು ಹೋಗುವ ಮುನ್ನ ನನ್ನ ಜತೆ ಮಾತನಾಡಿದ್ದೇ ಎಂದು ವಿಜಯ್‌ ಮಲ್ಯ ನೀಡಿರುವ ಹೇಳಿಕೆಗೆ ಕೇಂದ್ರ ಸಚಿವ ಅರುಣ್‌ ಜೇಟ್ಲಿ ತಿರುಗೇಟು ನೀಡಿದ್ದಾರೆ.ಲಂಡನ್‌ನ ವೆಸ್ಟ್‌ ಮಿನ್‌ಸ್ಟರ್‌ ಮ್ಯಾಜಿಸ್ಟೇಟ್‌ ನ್ಯಾಯಾಲಯದ ಹಾಜರಾಗಿದ್ದ ವಿಜಯ್‌ ಮಲ್ಯ, ಭಾರತ ಬಿಟ್ಟು ಬರುವ ಮುನ್ನ ಸಮಸ್ಯೆ ಬಗ್ಗೆ ಅರುಣ್‌ ಜೇಟ್ಲಿ ಅವರೊಂದಿಗೆ ಮಾತನಾಡಿದ್ದೇ ಎಂದು ಹೇಳಿಕೆ ನೀಡಿದ್ದರು.ಇದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡಿರುವ, ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಗಮನಿಸಿದ್ದೇನೆ. ಮಲ್ಯ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು. ನನ್ನ ಸಂದರ್ಶನಕ್ಕೆ ವಿಜಯ್‌ ಮಲ್ಯಗೆ 2014ರಿಂದ ಇಂದಿನಿವರೆಗೂ ಅನುಮತಿ ನೀಡಿಯೇ ಇಲ್ಲ. ಹೀಗಿರುವಾಗ ಅವರನ್ನು ಭೇಟಿ ಮಾಡುವ ಪ್ರಸಂಗವೇ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯಸಭಾ ಸದಸ್ಯರಾಗಿದ್ದ ವೇಳೆ ಅವರು ಅತ್ಯಂತ ಅಪರೂಪವಾಗಿ ಸದನಕ್ಕೆ ಹಾಜರಾಗುತ್ತಿದ್ದರು ಎಂದು ಜೇಟ್ಲಿ ತಿಳಿಸಿದ್ದಾರೆ.ವಿಜಯ್‌ ಮಲ್ಯ ನೀಡಿರುವ ಹೇಳಿಕೆ ಕುರಿತು ಕೇಂದ್ರ ಸರಕಾರ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಸಿಂಘ್ವಿ ಆಗ್ರಹಿಸಿದ್ದಾರೆ.