ಪ್ರಭಾರಿ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಸಿ.ಲೋಕ್ಯನಾಯ್ಕ

ಹರಪನಹಳ್ಳಿ :

                ಪಟ್ಟಣದ ಪುರಸಭೆ ಮುಖ್ಯಾಧಿಕಾರಿಗಳ ಕೊಠಡಿಯಲ್ಲಿ ವರ್ಗಾವಣೆಗೊಂಡ ಮುಖ್ಯಾಧಿಕಾರಿ ಐ.ಬಸವರಾಜರವರಿಗೆ ಕಛೇರಿಯ ಸಿಬ್ಬಂದಿ ವರ್ಗದವರಿಂದ ಬೀಳ್ಕೊಡಿಗೆ ಸಮಾರಂಭ ಮತ್ತು ಸಿ.ಲೋಕ್ಯನಾಯ್ಕರವರಿಗೆ ಪ್ರಬಾರಿ ಮುಖ್ಯಾಧಿಕಾರಿಯಾಗಿ ಅಧಿಕಾರ ಹಸ್ತಾಂತರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

                    ಮುಖ್ಯಾಧಿಕಾರಿ ಐ.ಬಸವರಾಜ್ ಬೀಳ್ಕೊಡಿಗೆ ಸ್ವಿಕರಿಸಿ ಮಾತನಾಡಿ ಅಧ್ಯಕ್ಷರ ಸಹಕಾರ,ಜನರ ಸಹಕಾರ, ಸಿಬ್ಬಂದಿ ವರ್ಗದ ಸಹಕಾರಕ್ಕೆ ನಾನು ಚಿರಋಣಿಯಾಗಿದ್ದೇನೆ. ಇವರುಗಳ ಸಹಕಾರದಿಂದ ಸುಮಾರು 4 ವರ್ಷಗಳ ಕಾಲ ಸುದೀರ್ಘ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು. ಪಟ್ಟಣದಲ್ಲಿ ಲೋಕಾಯುಕ್ತ ದೂರುಗಳು, ಕೋರ್ಟು ದೂರುಗಳು, ಆರ್.ಟಿ.ಐ ದೂರುಗಳಿಂದ ರಾತ್ರಿ ಸಮಯದಲ್ಲಿಯೂ ಸಹ ನನಗೆ ನಿದ್ದೆ ಬಂದಿಲ್ಲ. ನಾನು ಹೆಚ್ಚಾಗಿ ಕೋರ್ಟುಗಳಲ್ಲಿಯೇ ದಿನ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಧಿಕಾರ ವಹಿಸಿಕೊಳ್ಳುವ ಮುಂದಿನ ಮುಖ್ಯಾಧಿಕಾರಿ ಗಳು ಆ ಬಗ್ಗೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು,

                     ಪುರಸಭೆ ಅಧ್ಯಕ್ಷ ಹೆಚ್.ಕೆ ಹಾಲೇಶ್‍ಮಾತನಾಡಿ ಮುಖ್ಯಾಧಿಕಾರಿಗಳ ಕಾರ್ಯ ವೈಖರಿ ಶ್ಲಾಘನೀಯವಾದದ್ದು, ಯಾವುದೇ ಆಡಳಿತಾತ್ಮಕ ಸಮಸ್ಯೆಗಳು ಬಂದಾಗ ಅವುಗಳನ್ನು ಬಗೆಹರಿಸುವ ಚತುರರು ಪುನ: ಹರಪನಹಳ್ಳಿ ನಗರ ಸಭೆಯಾದ ಬಳಿಕ ಪೌರಯುಕ್ತರಾಗಿ ಬರುವಂತಾಗಲಿ ಇನ್ನು ಹೆಚ್ಚಿನ ಮಟ್ಟದಲ್ಲಿ ಹರಪನಹಳ್ಳಿಯ ಅಭಿವೃದ್ಧಿಗೆ ಶ್ರಮಿಸಲಿ ಎಂದು ಹೇಳಿ ಪ್ರಭಾರಿ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಸಿ.ಲೋಕ್ಯನಾಯ್ಕರಿಗೆ ಇರುವ ದಿನಗಳ ಸದುಪಯೋಗ ಪಡೆದುಕೊಂಡು ಉತ್ತಮ ಕಾರ್ಯವೈಖರಿಯಿಂದ ಚಾಪು ಮೂಡಿಸಬೇಕು ಎಂದು ಹೇಳಿದರು.

                    ಪ್ರಭಾರಿ ಮುಖ್ಯಾಧಿಕಾರಿಯಾಗಿಅಧಿಕಾರ ವಹಿಸಿಕೊಂಡು ಮಾತನಾಡಿದ ಸಿ.ಲೋಕ್ಯನಾಯ್ಕ ಕಛೇರಿಯ ಸಿಬ್ಬಂದಿಯವರ ಸಹಕಾರ ಪಡೆದು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

                     ಈ ಸಂದರ್ಭದಲ್ಲಿ ಪುರಸಭೆ ಸದಸ್ಯರು, ಸಿಬ್ಬಂದಿಗಳಾದ ಶ್ರೀನಿವಾಸ ನಿರೂಪಣೆ ಮಾಡಿದರು, ಪ್ರಭು, ಮಂಜುನಾಥ್ ಅನಿಸಿಕೆ ಹೇಳಿದರು, ಸಿರಾಜ್, ನಿಂಗಪ್ಪ, ಚನ್ನಬಸಪ್ಪ, ಹನುಮೇಶ್, ಗೌಡಪ್ಪ, ಮಹೇಶ್, ಜಬೀಲ್, ಅಂಜಿನಪ್ಪ, ಮೇಸ್ತ್ರಿ ಉಚ್ಚೆಂಗಪ್ಪ, ಬಷೀರ್‍ಸಾಬ್, ಮನ್ಸೂರ್, ಗುತ್ತಿಗೆದಾರ ಘಾಟಿನ ರಾಜಪ್ಪ, ಬಿಜೆಪಿ ಮುಖಂಡ ಯಲ್ಲಜ್ಜಿ ಹನುಮಂತಮತ್ತಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link