ಮಹಿಳೆ ಕಾಣೆ: ದೂರು ದಾಖಲು

 ಬಳ್ಳಾರಿ:

      ಕುವೆಂಪು ನಗರ ನಿವಾಸಿಯಾದ ಪದ್ಮರಾಣಿ (ವಯಸ್ಸು 53) ಎಂಬ ಮಹಿಳೆಯು ಜನವರಿ 02 ರಿಂದ ಕಾಣೆಯಾದ ಬಗ್ಗೆ ದೂರು ದಾಖಲಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಸಬ್-ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.

      5.4 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ, ಎಡ ಗೈ ಮೇಲೆ ಕಪ್ಪು ಮಚ್ಚೆ ಗುರುತು ಇರುತ್ತದೆ. ಕನ್ನಡಕವನ್ನು ಧರಿಸಿರುತ್ತಾರೆ. ಕನ್ನಡ, ತೆಲುಗು ಭಾಷೆಯನ್ನು ಮಾತನಾಡುತ್ತಾಳೆ.

      ಈ ಮಹಿಳೆಗೆ ಮೈಗ್ರೇನ್ ಸಮಸ್ಯೆ ಹಾಗೂ ಪಾರ್ಕಿಂಗ್ ಸೆಲ್ ಡಿಸಿಸ್ ರೋಗವು ಇರುತ್ತದೆ. ಈ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಕೂಡಲೇ ಹತ್ತಿರವಿರುವ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link