ಮುಂಬೈ:
ಸಿಎಂ ಏಕನಾಥ್ ಶಿಂಧೆ- ಡಿಸಿಎಂ ದೇವೇಂದ್ರ ಫಡ್ನವಿಸ್ ಸಿಎಂ ಗೃಹ ಕಚೇರಿಯಲ್ಲಿ ತಡರಾತ್ರಿ ಸಭೆ ನಡೆಸಿದ್ದಾರೆ.
ಈ ಬೆಳವಣಿಗೆಗೂ ಮುನ್ನ, ಎನ್ ಸಿಪಿ ನಾಯಕ ಅಜಿತ್ ಪವಾರ್ ಶಿಂಧೆ-ಫಡ್ನವಿಸ್ ಸರ್ಕಾರವನ್ನು ಸೇರಿರುವುದರ ಬಗ್ಗೆ ಶಿವಸೇನೆ ಶಾಸಕರಲ್ಲಿ ಅಸಮಾಧಾನವಿದೆ ಎಂಬ ಮಾಧ್ಯಮಗಳ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಶಿಂಧೆ, ಈ ಸರ್ಕಾರ ಮತ್ತಷ್ಟು ಸದೃಢಗೊಂಡಿದೆ. ತಾವು ಸಿಎಂ ಹುದ್ದೆಯಿಂದ ನಿರ್ಗಮಿಸುವುದು ಹಾಗೂ ಶಿವಸೇನೆ ಶಾಸಕರಲ್ಲಿ ಅಸಮಾಧಾನ ಮೂಡಿರುವ ಬಗ್ಗೆ ಪ್ರಕಟವಾಗಿರುವ ವರದಿಗಳನ್ನು ವದಂತಿಗಳೆಂದು ಹೇಳಿದ್ದರು.
ತಾವು ಸಿಎಂ ಆಗಬೇಕೆಂಬ ಅಜಿತ್ ಪವಾರ್ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಅಜಿತ್ ಪವಾರ್ ಅವರ ಈ ಹೇಳಿಕೆಯಿಂದಾಗಿ ಶಿವಸೇನೆಯ ಶಾಸಕರಲ್ಲಿ ಆತಂಕ ಮೂಡಿದೆ. ಈ ನಡುವೆ ಶಿಂಧೆ ಬಣದ ಸಚಿವರಾಗಿರುವ ಉದಯ್ ಸಮಂತ್, ಶಿಂಧೆ ಅವರ ರಾಜೀನಾಮೆ ವದಂತಿ ಸುಳ್ಳು ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
