ಬೆಂಗಳೂರು
ಮನೆಯ ಮುಂಭಾಗದ ನೀರಿನ ತೊಟ್ಟಿ(ಸಂಪ್)ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ದುರ್ಘಟನೆ ಸಂಪಿಗೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಾಜಿ ಕೃಪ ಲೇಔಟ್‍ನಲ್ಲಿ ನಡೆದಿದೆ.
ಸಂಪಿಗೆಹಳ್ಳಿಯ ಬಾಲಾಜಿ ಕೃಪ ಲೇಔಟ್‍ನ ಅಪ್ರೋಜ್ ಖಾನ್ (36)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.ಸಂಪಿನಲ್ಲಿ ಪತಿ ಬಿದ್ದು ಮೃತಪಟ್ಟಿರುವುದನ್ನು ಕೊಲೆ ಎಂದು ಮೃತರ ಪತ್ನಿ ಮೆಹರಾಜ್ ಪೊಲೀಸರ ಮುಂದೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಅಪ್ರೋಜ್ ಖಾನ್‍ನನ್ನು ವಿವಾಹವಾಗಿ ಬಾಲಾಜಿ ಕೃಪ ಲೇಔಟ್‍ನಲ್ಲಿ ಪತಿಯೊಂದಿಗೆ ಮೆಹರಾಜ್ ಜೊತೆ ವಾಸವಾಗಿದ್ದರು.ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಪತ್ನಿ ಮೆಹರಾಜ್ ತವರಿಗೆ ತೆರಳಿದ್ದರು.
ಎರಡು ದಿನಗಳ ನಂತರ ಪತಿ ಅಪ್ರೋಜ್ ಖಾನ್ ಮೊಬೈಲ್‍ಗೆ ಪತ್ನಿ ಮೆಹರಾಜ್ ಕಾಲ್ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು.ಈ ಬಗ್ಗೆ ಅತ್ತೆ, ಮಾವನನ್ನ ಕೇಳಿದರೆ ಅಪ್ರೋಜ್ ಎಲ್ಲಿ ಹೋಗಿದ್ದಾನೆ ಗೊತ್ತಿಲ್ಲ ಎಂದು ಹೇಳಿದ್ದರು.ಬಳಿಕ ಒಂದು ದಿನದ ನಂತರ ಆತನ ಫೋನ್ ಆನ್ ಆಗಿತ್ತು.ಆದರೆ ಅಪ್ರೋಜ್ ಬದಲು ಆತನ ಸಹೋದರ ಇಮ್ರಾನ್‍ಖಾನ್ ಕಾಲ್ ಸ್ವೀಕರಿಸಿ ಫೋನ್ ಆಫ್ ಆಗಿತ್ತು ನಾನೇ ಆನ್ ಮಾಡಿದೆ ಎಂದಿದ್ದಾರೆ.
ಬಳಿಕ ಅಪ್ರೋಜ್‍ಗಾಗಿ ಹುಡುಕಾಟ ನಡೆಸಿದಾಗ ಸಂಪ್‍ನಲ್ಲಿ ಶವ ಪತ್ತೆಯಾಗಿದೆ ಎಂದು ಪತ್ನಿ ತಿಳಿಸಿದ್ದಾರೆ.ನನ್ನ ಗಂಡನ ಸಾವಿನ ಬಗ್ಗೆ ಅನುಮಾನವಿದೆ. ಯಾರೋ ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಸಂಪಿಗೆ ಹಳ್ಳಿ ಪೊಲೀಸರಿಗೆ ಮೆಹರಾಜ್ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.








