ದಾವಣಗೆರೆ:
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಪೋಷಕರು, ಜನಪ್ರತಿನಿಧಿಗಳು ಸಮರ್ಪಕವಾಗಿ ಅರ್ಥೈಸಿಕೊಂಡು ಸಾರ್ವಜನಿಕ ಶಿಕ್ಷಣವ್ಯವಸ್ಥೆಯನ್ನು ಬಲಿಷ್ಠಗೊಳಿಸಲು ಮುಂದಾಗಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಗಬಾಲಯ್ಯ ಕರೆ ನೀಡಿದರು.
ತಾಲೂಕಿನ ಕುಕ್ಕುವಾಡ ಗ್ರಾಮದ ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಬುಧÀವಾರ ಜಿಲ್ಲಾ ಕಾನೂನು ಸೇವಾ ಪ್ರಾಕಾರ, ಜಿಲ್ಲಾವಕೀಲರ ಸಂಘ, ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಗ್ರಾಮಪಂಚಾಯಿತಿ ಹಾಗೂ ಸ್ಪಂದನಯುವಜನ ಸಂಪರ್ಕ ಮತ್ತು ಕೌಶಲ್ಯಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ನಡೆದ ಕಾಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಕುರಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶಾದ್ಯಂತ 2010ರಲ್ಲಿ ಜಾರಿಯಾಗಿರುವ ಉಚಿತ ಗುಣಾತ್ಮಕ ಕಡ್ಡಾಯ ಶಿಕ್ಷಣ ಕಾಯಿದೆಯು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸಲು ಹಾಗೂ ದುರ್ಬಲ ವರ್ಗದ ಕುಟುಂಬದ 14 ವರ್ಷದೊಳಗಿನ ಮಕ್ಕಳ ಶೈಕ್ಷಣಿಕ ಹಕ್ಕನ್ನು ದೊರಕಿಸಿದೆ. ಹಕ್ಕನ್ನು ಪೋಷಕರು ಮಕ್ಕಳಿಗೆ ಕಲ್ಪಿಸಿಕೊಡುವ ಜತೆಗೆ ತಮ್ಮ ಕರ್ತವ್ಯವನ್ನೂ ನಿರ್ವಹಿಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನೆರವಾಗಬೇಕು ಎಂದು ತಿಳಿಸಿದರು.
ನಾಗರಿಕ ಸ್ವಾಸ್ಥ್ಯ ಸಮಾಜಕ್ಕಾಗಿ ಕಾಯಿದೆಗಳಿವೆ. ಕಾನೂನು ಉಲ್ಲಂಘಿಸಿ ನಡೆದರೆ ಶಿಕ್ಷೆಯೂ ಇದೆ. ಬಾಲ್ಯವಿವಾಹ ಮಾಡಿದವರು, ಮಕ್ಕಳನ್ನು ದುಡಿಮೆಗೆ ತಳ್ಳುವ ಮೂಲಕ ಬಾಲಕಾರ್ಮಿಕ ಪದ್ಧತಿಗೆ ಪ್ರೇರೇಪಿಸಿದರೆ ಅಂತಹ ಸಂಬಂಸಿದವರಿಗೆ ಶಿಕ್ಷೆ ವಿಸುವ ಅವಕಾಶವೂ ಕಾನೂನಿನಲ್ಲಿದೆ ಎಂದು ಎಚ್ಚರಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿಯನ್ನು ಸಂಬಂಸಿದ ಇಲಾಖೆ ನಿಯಂತ್ರಿಸಬೇಕು. ಸರಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ಅವುಗಳನ್ನು ಬಲಪಡಿಸಬೇಕು. ಶಿಕ್ಷಕರನ್ನು ಬೋಧನೇತರ ಕೆಲಸಗಳಿಗೆ ಹಚ್ಚದೆ ಕಡ್ಡಾಯವಾಗಿ ಪಾಠಪ್ರವಚನ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ನ್ಯಾಯವಾದಿ ಎಲ್.ಹೆಚ್.ಅರುಣಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಸಂಖ್ಯಾಬಲ ಆಧರಿಸಿ ಶಿಕ್ಷಕರನ್ನು ನಿಯುಕ್ತಿಗೊಳಿಸುವ ಪದ್ಧತಿ ಅವೈಜ್ಞಾನಿಕವಾಗಿದ್ದು, ಸರಕಾರದ ಮಟ್ಟದ ಜನಪ್ರತಿಗಳು ಅಕಾರಿಗಳು ಶಿಕ್ಷಣ ಹಕ್ಕು ಕಾಯಿದೆಯನ್ನು ದಾರಿತಪ್ಪಿಸುವ ಹುನ್ನಾರ ಮಾಡುತ್ತಿದ್ದಾರೆ. ಸ್ಥಳೀಯ ಗ್ರಾಪಂ ನಿಂದ ಸಂಸತ್ತಿನವರೆಗೆ ಇರುವ ಜನಪ್ರತಿನಿಗಳು ಈ ಕಾಯಿದೆಯನ್ನು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.
ಎಸ್‍ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾ ಅಧ್ಯಕ್ಷ ಪರಮೇಶ್ವರಪ್ಪ ಪ್ರಸಾವಿಕ ಭಾಷಣ ಮಾಡಿದರು. ಶಾಲಾ ಸಮಿತಿ ಉಪಾಧ್ಯಕ್ಷ ಡಿ.ಮಲ್ಲೇಶಪ್ಪ ಅಧ್ಯಕ್ಷತೆವಹಿಸಿದ್ದರು. ಪ್ರಾಚಾರ್ಯ ಕೃಷ್ಣ, ಮುಖ್ಯೋಪಾಧ್ಯಾಯ ಕೆ.ಎಂ.ಮಂಜುನಾಥ್, ಪಿಡಿಒ ಆರ್.ಅಶ್ವಿನಿ, ಹದಡಿ ನಳಿನ ಶೇಖರ್, ಮಂಜಮ್ಮ, ಪ್ರತಿಭಾ, ನೀಲಮ್ಮ, ಸುವರ್ಣಮ್ಮ, ಯಶೋಧಮ್ಮ, ರೇಷ್ಮಾಬಾನು, ಗೋಪಾಲದಾಸ್, ತಿಪ್ಪೇಸ್ವಾಮಿ ಕೆ.ಆರ್.ಅಜ್ಜಯ್ಯ, ಶರಣಪ್ಪ, ಪಿ.ಎಂ.ಮಂಜುನಾಥ್, ಬಸಪ್ಪ ಸಿದ್ದಪ್ಪ ಕೊಂಬಳಿ, ಓಬಳೇಶಪ್ಪ, ಕೆ.ಬಿ.ರಮೇಶಯ್ಯ, ಹನುಗೌಡ ಸೇರಿಂತೆ ಹೊನ್ನಮರಡಿ, ನಾಗರಸನಹಳ್ಳಿ, ಆಂಜನೇಯನಗರ ಶಾಲಾ ಸಮಿತಿ ಪದಾಕಾರಿಗಳು ಸೇರಿದಂತೆ ಪೋಷಕರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
