ಹಗರಿಬೊಮ್ಮನಹಳ್ಳಿ: ಖೋಟಾನೋಟಿನ ಆಮಿಷ ಯುವಕನ ಬಂಧನ

ಹಗರಿಬೊಮ್ಮನಹಳ್ಳಿ:

      ಒಂದಕ್ಕೆ ಮೂರು ಪಟ್ಟು ಖೋಟಾನೋಟು ಕೊಡುವುದಾಗಿ ಆಮಿಷ ಹೊಡ್ಡಿದ್ದ ಯುವಕರನ್ನು ಇಲ್ಲಿಯ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

      ಮಾನ್ವಿ ಮೂಲದವನಾಗಿರುವ ರಾಜೇಂದ್ರ(ರಾಜು)(28) ಹಾಗೂ ಯಲಬುರ್ಗದ ಬಂಡಿಎನ್ನುವ ಗ್ರಾಮದ ಆದಾನಗೌಡ(35) ಎನ್ನುವ ಇಬ್ಬರು ಯುವಕರು, ಸಾರ್ವಜನಿಕರಿಗೆ ಒಂದುಲಕ್ಷ ರೂ. ನೀಡಿದರೆ ನಿಮಗೆ ಮೂರುಪಟ್ಟು ಅಂದರೆ ಹೆಚ್ಚು ಮೊತ್ತದ ಖೋಟಾನೋಟುಗಳನ್ನು ನೀಡಲಾಗುವುದೆಂದು ವಂಚಿಸುತ್ತಿದ್ದರು ಎಂಬ ಮಾಹಿತಿ ಹಿನ್ನೆಲೆಯಲ್ಲಿ, ಪಟ್ಟಣದ ಆನಂದಬಾಬು ಎನ್ನುವ ಹಳೇ ಊರಿನ ವ್ಯಕ್ತಿಗೆ ಪದೇಪದೇ ಪೋನ್‍ಕರೆ ಮಾಡುವ ಜೊತೆಗೆ ಒತ್ತಾಯ ಕೂಡ ಮಾಡಿದ್ದಾರೆ ಎಂದು ಆನಂದಬಾಬು ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಿದ್ದನು. ಆರೋಪಿಗಳಿಬ್ಬರು ಮಂಗಳವಾರ 1.5 ಕೋಟಿ ರೂ. ಇದೆ ಎಂದು ಅದನ್ನು ತಲುಪಿಸಲು ಪಟ್ಟಣಕ್ಕೆ ಬಂದ ವೇಳೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಈ ಯುವಕರಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ಇಲ್ಲಿಯ ಹಗರಿ ಸೇತುವೆಯ ಬಳಿ ಫಲ್ಸರ್ ಬೈಕ್‍ನಲ್ಲಿ ಬರುತ್ತಿದ್ದ ಯುವಕರ ಮೇಲೆ ದಾಳಿ ನಡೆಸಿ, ಮಧ್ಯಹ್ನ2.30ಕ್ಕೆ ಬಂಧಿಸಿ ವಿಚಾರಿಸಲಾಗಿ, ಪ್ರತಿಯೊಂದು ನೋಟಿನಕಟ್ಟುಗಳಿಗೆ ಮೇಲೆಯೊಂದು ಕೆಳಗೆ ಮತ್ತೊಂದು ಅಸಲಿ ನೋಟುಗಳನ್ನು ಇಟ್ಟು, ಮಧ್ಯದಲ್ಲಿ ಬಿಳಿ ಕಾಗದಗಳನ್ನು ಇಟ್ಟು ವಂಚಿಸುವ ಯತ್ನ ನಡೆಸಿದ್ದಾರೆ ಎಂದು ಸಿಪಿಐ ರಾಮಪ್ಪ ಸಾವಳಿಗಿ ತಿಳಿಸಿದರು.

      ಈಗ ಬೈಕ್ ಮತ್ತು ಎರಡು ಬ್ಯಾಗ್ ನೋಟುಗಳೆಂದು ವಂಚಿಸಲು ತಂದಿರುವನೋಟುಗಳನ್ನು, 3ಮೊಬೈಲ್‍ಗಳನ್ನು ವಶಪಡಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ