ಅಮೂಲ್ಯ ಮತಕ್ಕೆ ಪ್ರತಿಯಾಗಿ ಪ್ರಾಮಾಣಿಕ ಅಭಿವೃದ್ದಿ : ಸಂಗೀತಾ

ಶಿಗ್ಗಾವಿ :

   ರಾಜೀವ ನಗರದಲ್ಲಿ ಮೂಲಭೂತ ಸೌಲಭ್ಯಗಳನ್ನು ಮಾಡುವುದು ಇನ್ನೂ ಅವಶ್ಯವಿದ್ದು ಅವುಗಳನ್ನು ಪ್ರಮಾಣಿಕವಾಗಿ ಮಾಡುವ ಮೂಲಕ ಜನತೆ ನನಗೆ ನೀಡಿದ ಅಮೂಲ್ಯ ಮತಕ್ಕೆ ಪ್ರತಿಯಾಗಿ ಪ್ರಾಮಾಣಿಕ ಅಭಿವೃದ್ದಿಯನ್ನು ಮಾಡುವ ಬರವಸೆಯನ್ನು 23 ನೇ ವಾರ್ಡಿನ ನೂತನ ಪುರಸಭೆ ಸದಸ್ಯೆ ಸಂಗೀತಾ ವಾಲ್ಮೀಕಿ ಬರವಸೆ ನೀಡಿದರು.

    ಶನಿವಾರ ಪಟ್ಟಣದ ಹೊರವಲಯದಲ್ಲಿರುವ ರಾಜೀವನಗರದಲ್ಲಿ ವಾರ್ಡಿನ ಜನತೆ ಹಮ್ಮಿಕೊಂಡ ನೂತನ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪ್ರತಿಯೊಂದು ಮತಕ್ಕೂ ಬೆಲೆ ಬರುವ ನಿಟ್ಟಿನಲ್ಲಿ ಕಾರ್ಯಗಳನ್ನು ಮಾಡಿ ಜನರ ನಂಬಿಕೆಗೆ ಪಾತ್ರಳಾಗುತ್ತೇನೆ ಜೊತೆಗೆ ನನಗೆ ಮತ ನೀಡಿದ ವಾರ್ಡಿನ ಸರ್ವರಿಗೂ ದನ್ಯವಾದಗಳನ್ನು ತಿಳಿಸಿದರು.

   23 ನೇ ವಾರ್ಡಿನ ನಿಕಟಪೂರ್ವ ಸದಸ್ಯರು ಹಾಗೂ 22 ನೇ ನೂತನ ಸದಸ್ಯರೂ ಆಗಿರುವ ಪರಶುರಾಮ ಸೊನ್ನದ ಸನ್ಮಾನ ಸ್ವೀಕರಿಸಿ ಮಾತನಾಡಿ ರಾಜೀವ ನಗರದ ಜನತೆ ನನ್ನನ್ನು ಮನೆಯ ಮಗನಂತೆ ಕಂಡಿದ್ದು ಆ ಮನೆಯ ಋಣವನ್ನು ತೀರಿಸುವ ನಿಟ್ಟಿನಲ್ಲಿ ವಾರ್ಡಿನ ಅಭಿವೃದ್ದಿ ಮಾಡುವ ಬರವಸೆಯನ್ನು ವಾರ್ಡಿನ ಸದಸ್ಯೆ ಸಂಗೀತಾ ಅವರೋಂದಿಗೆ ನಾನೂ ಸಹಿತ ಕೈಜೋಡಿಸಿ ಆಗಬೇಕಾಗಿರುವ ಮನೆಗಳ ದಾಖಲಾತಿಯ ಜೊತೆ ಮೂಲಭೂತ ಸೌಲಭ್ಯ, ಸಮಗ್ರ ನೀರಿನ ವ್ಯವಸ್ಥೆ, ಡ್ರೈನೇಜ್, ಬೀದಿ ದೀಪದ ಅಳವಡಿಕೆ, ವಿದ್ಯುತ್ ಸೌಲಭ್ಯ ಸೇರಿದಂತೆ ಇನ್ನುಳಿದ ಸೌಲಭ್ಯಗಳನ್ನು ಮಾಡಿ ಕೊಡುವ ಬರವಸೆಯನ್ನು ನೀಡಿದರು.

     23 ನೇ ವಾರ್ಡಿನ ಮುಖಂಡ ಮಲ್ಲಿಕಾರ್ಜುನ ಕಾಳೆ ನೂತನ 22 ಮತ್ತು 23 ನೇ ವಾರ್ಡಿನ ಸದಸ್ಯರನ್ನು ಸನ್ಮಾನಿಸಿ ಮಾತನಾಡಿ ರಾಜೀವ ನಗರದಲ್ಲಿರುವ ದೇಸಾಯಿ ಪ್ಲಾಟಿನ ಎನ್‍ಎ ಆಗದ ಪ್ಲಾಟಿನಲ್ಲಿ ಮನೆಗಳ ಅವಶ್ಯಕತೆಯಿದ್ದು ಜೀವನ ನಡೆಸುವ ಉದ್ದೇಶದಿಂದ ಸರಕಾರಿ ಸೌಲಭ್ಯಗಳನ್ನು ನೀಡಬೇಕು, ಈಗಾಗಲೇ ಪೈಪ್‍ಲೈನ್ ಅಳವಡಿಕೆಯಾಗಿದ್ದು ಅಲ್ಲಿ ವಾಸಿಸುತ್ತಿರುವ ಮನೆಗಳು ಸ್ವಂತ ಅಲ್ಲಿಯ ವಾಸಿಸುತ್ತಿರುವವರ ಹೆಸರಿನಲ್ಲಿ ನೊಂದ್ ಆಗಬೇಕಿದೆ ನೊಂದಾಯಿಸಲು ತಗಲುವ ಎಷ್ಟೆ ಬಾಬತ್ ಅನ್ನು ನಾವುಗಳು ಭರಿಸಲು ತಯಾರಿದ್ದು ಅದನ್ನು ನೂತನ ಸದಸ್ಯರು ಮಾಡಿ ಕೊಡಬೇಕೆಂದರು, ಮತ್ತು ವಾರ್ಡಿನಲ್ಲಿ ಡುರಮ್‍ಮುರುಗೇರು ಸಹಿತ ವಾಶಿಸುತ್ತಿದ್ದು ಅವರ ಒಂದು ಮನೆಗಳ ಸೌಲಭ್ಯವನ್ನು ಮಾಡಿಕೊಡಬೇಕು ಮುಖ್ಯವಾಗಿ ರಾಜೀವ ನಗರದಲ್ಲಿ ಹಿಂದೂ ಮುಸ್ಲಿಂ ಭಾಂಧವರು ಸೌಹಾರ್ಧತೆಯಿಂದ ಬಾಳುತ್ತಿದ್ದು ಅದನ್ನು ಕಾಪಾಡಿಕೊಂಡು ಹೋಗಲು ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿದರು.

     ಕಾರ್ಯಕ್ರಮದಲ್ಲಿ ಈರಪ್ಪ ಹಳೆಪ್ಪನವರ, ಶಂಬಣ್ಣ ದೊಡ್ಡಮನಿ, ತಿರಕಪ್ಪ ಹಡಪದ, ಹನುಮಂತ ಬಂಡಿವಡ್ಡರ, ಮೈಲಾರಪ್ಪ ಓಲೇಕಾರ, ಮೌಲಾಸಾಬ್ ಕೌತಾಳ, ನಬಿಸಾಬ್ ಕೌತಾಳ, ಮುಸ್ತಾಕ ಅಹ್ಮದ್ ಮತ್ತುಬಾಯಿ, ಶಂಕ್ರಯ್ಯ ಹೊಂಬಾಳಿಮಠ, ಶಂಕರಣ್ಣ ಕಾಮನಹಳ್ಳಿ, ಯಲ್ಲಪ್ಪ್ ತಳವಾರ ಸೇರಿದಂತೆ ಬಸವೇಶ್ವರ ನಗರ, ರಾಜೀವ ನಗರ, ಮಾರುತಿ ನಗರದ ಜನತೆ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link