ಸುಡು ಬಿಸಿಲಿಗೆ ಹೊರಗಡೆ ಹೋದರೆ ಅದರಿಂದ ಹಲವಾರು ರೀತಿಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಇದು ತ್ವಚೆ ಬಣ್ಣ ಕುಂದುವಂತೆ ಮಾಡುವುದು ಮಾತ್ರವಲ್ಲದೆ ಕಲೆ, ಒಣಚರ್ಮ ಇತ್ಯಾದಿ ಸಮಸ್ಯೆಗಳನ್ನು ಉಂಟುಮಾಡಬಹುದು. ಇಂತಹ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಹಲವಾರು ರೀತಿಯ ಕ್ರೀಮ್ ಹಾಗೂ ಲೋಷನ್ ಗಳು ಮಾರುಕಟ್ಟೆಯಲ್ಲಿದೆ. ಕೇವಲ ಇದನ್ನು ಮಾತ್ರ ಬಳಸಿಕೊಂಡರೆ ಅದರಿಂದ ಸಮಸ್ಯೆ ತಾತ್ಕಾಲಿಕವಾಗಿ ನಿವಾರಣೆಯಾಗಬಹುದು. ಕೆಲವು ಮನೆಮದ್ದುಗಳನ್ನು ಬಳಸಿಕೊಂಡರೆ ಅದು ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದು. ಈ ಲೇಖನದಲ್ಲಿ ನಿಮಗೆ ಹೇಳಲು ಹೊರಟಿರುವುದು ಟೊಮೆಟೋದಿಂದ ಚರ್ಮದ ಬಣ್ಣ ಕಪ್ಪಾಗುವುದನ್ನು ತಡೆಯುವ ವಿಧಾನ. ಟೊಮೆಟೋದಲ್ಲಿರುವಂತಹ ಹಲವಾರು ರೀತಿಯ ಸೌಂದರ್ಯ ಗುಣಗಳು ಪ್ಯಾಕ್ ಮತ್ತು ಮಾಸ್ಕ್ ಗಳಿಗೆ ತುಂಬಾ ಪರಿಣಾಮಕಾರಿ. ಟೊಮೆಟೋದಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಚರ್ಮಕ್ಕೆ ಮೊಶ್ಚಿರೈಸರ್ ನೀಡಿ ತೇವಾಂಶ ಕೊಡುವುದು. ವಿಟಮಿನ್ ಸಿ ಅಧಿಕವಾಗಿರುವ ಕಾರಣ ಚರ್ಮದ ಸತ್ತಕೋಶಗಳನ್ನು ತೆಗೆದು ಚರ್ಮಕ್ಕೆ ಕಾಂತಿ ನೀಡುವುದು. ನಿಯಮಿತವಾಗಿ ಟೊಮೆಟೊ ಬಳಸಿಕೊಂಡರೆ ಅದರಿಂದ ಬಿಸಿಲಿನಿಂದ ಆಗಿರುವ ಚರ್ಮದ ಕಲೆಗಳ ನಿವಾರಣೆ ಮಾಡಲು ನೆರವಾಗುವುದು.
ಟೊಮೆಟೋ ಮತ್ತು ಮೊಸರು ಬೇಕಾಗುವ ಸಾಮಗ್ರಿಗಳು 1 ಮಧ್ಯಮ ಗಾತ್ರದ ಟೊಮೆಟೋ 1 ಚಮಚ ಮೊಸರು ತಯಾರಿಸುವ ವಿಧಾನ ಟೊಮೆಟೋವನ್ನು ಮೆತ್ತಗೆ ಮಾಡಲು ಅದನ್ನು ಎರಡು ತುಂಡುಗಳನ್ನಾಗಿ ಮಾಡಿ ಮೈಕ್ರೋವೇವ್ ನಲ್ಲಿಡಿ. ಇದು ತಣ್ಣಗಾದ ಬಳಿಕ ಇದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ. ಇದಕ್ಕೆ ಮೊಸರು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಹಚ್ಚಿಕೊಳ್ಳುವ ವಿಧಾನ ನಿಮ್ಮ ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಟೊಮೆಟೋ ಪೇಸ್ಟ್ ನ್ನು ಹಚ್ಚಿಕೊಳ್ಳಿ. ಇದು 20 ನಿಮಿಷ ಕಾಲ ಹಾಗೆ ಇರಲಿ. 20 ನಿಮಿಷ ಬಿಟ್ಟ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರ ಬಳಿಕ ತಣ್ಣೀರಿನಿಂದ ಮುಖ ತೊಳೆದುಕೊಂಡು ಒರೆಸಿಕೊಳ್ಳಿ. ಟೊಮೆಟೋ ಮತ್ತು ಆಲೂಗಡ್ಡೆ ¼ ಭಾಗ ಟೊಮೆಟೋ 1 ಆಲೂಗಡ್ಡೆ ತಯಾರಿಸುವ ವಿಧಾನ ಆಲೂಗಡ್ಡೆ ಮತ್ತು ಟೊಮೆಟೋದ ಸಿಪ್ಪೆ ತೆಗೆದು ಸಣ್ಣ ತುಂಡುಗಳನ್ನಾಗಿ ಮಾಡಿ. ಇದನ್ನು ಮಿಕ್ಸಿಗೆ ಹಾಕಿಕೊಂಡು ರುಬ್ಬಿ ನಯವಾದ ಪೇಸ್ಟ್ ಮಾಡಿಕೊಳ್ಳಿ. ಹಚ್ಚಿಕೊಳ್ಳುವ ವಿಧಾನ ಕಾಸ್ಮೆಟಿಕ್ ಬ್ರಶ್ ಬಳಸಿಕೊಂಡು ತೊಳೆದುಕೊಂಡ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ ಮತ್ತು 30 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ತಣ್ಣೀರಿನಿಂದ ತೊಳೆಯಿರಿ. ಇದನ್ನು ಪ್ರತನಿತ್ಯ ನೀವು ಹೊರಗಿನಿಂದ ಮನೆಗೆ ಬಂದ ಬಳಿಕ ಬಳಸಿಕೊಳ್ಳಿ. ಆರಂಭದಲ್ಲಿ ಇದು ಸ್ವಲ್ಪ ಕಿರಿಕಿರಿ ಉಂಟು ಮಾಡಬಹುದು. ಆದರೆ ಇದಕ್ಕೆ ಚಿಂತೆ ಮಾಡಬೇಕಿಲ್ಲ.
ಟೊಮೆಟೋ, ಲಿಂಬೆ ರಸ ಮತ್ತು ಓಟ್ ಮೀಲ್ ಬೇಕಾಗುವ ಸಾಮಗ್ರಿಗಳು 1 ಚಮಚ ಟೊಮೆಟೋ ರಸ 1 ಚಮಚ ಲಿಂಬೆರಸ 1 ಚಮಚ ಓಟ್ ಮೀಲ್ ತಯಾರಿಸುವ ವಿಧಾನ ಟೊಮೆಟೋ ತೆಗೆದುಕೊಂಡು ಅದರ ರಸ ತೆಗೆಯಿರಿ. ಲಿಂಬೆರಸ ಮತ್ತು ಟೊಮೆಟೋ ರಸವನ್ನು ಜತೆಯಾಗಿ ಮಿಶ್ರಣ ಮಾಡಿಕೊಳ್ಳಿ. ಓಟ್ ಮೀಲ್ ನ್ನು ಮಿಕ್ಸಿಗೆ ಹಾಕಿಕೊಂಡು ಹುಡಿ ಮಾಡಿ. ಅಂತಿಮವಾಗಿ ಎಲ್ಲವನ್ನು ಜತೆಯಾಗಿ ಸೇರಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಹೆಚ್ಚು ದಪ್ಪ ಬೇಕಿದ್ದರೆ ಓಟ್ ಮೀಲ್ ಹುಡಿಯನ್ನು ಹೆಚ್ಚು ಹಾಕಿ. ಹಚ್ಚಿಕೊಳ್ಳುವ ವಿಧಾನ ಈ ಪೇಸ್ಟ್ ಹಚ್ಚಿಕೊಳ್ಳುವ ಮೊದಲು ಮುಖ ಹಾಗೂ ಕುತ್ತಿಗೆಯನ್ನು ತೊಳೆಯಿರಿ. ಇದರ ಬಳಿಕ ಹಚ್ಚಿಕೊಂಡ ಪೇಸ್ಟ್ ನ್ನು ಕೈಯ ಬೆರಳುಗಳಿಂದ ವೃತ್ತಾಕಾರದಲ್ಲಿ ಸ್ಕ್ರಬ್ ಮಾಡಿಕೊಳ್ಳಿ. 15-20 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ವಾರದಲ್ಲಿ ಒಂದು ಸಲ ಇದನ್ನು ಬಳಸಿದರೆ ಬಿಸಿಲಿನ ಕಲೆಗಳು ನಿವಾರಣೆಯಾಗುವುದು.
ಟೊಮೆಟೋ, ಕಡಲೆಹಿಟ್ಟು, ಜೇನು ಮತ್ತು ಮೊಸರು ಬೇಕಾಗುವ ಸಾಮಗ್ರಿಗಳು 1 ಟೊಮೆಟೋ 2-3 ಚಮಚ ಕಡಲೆಹಿಟ್ಟು 1 ಚಮಚ ಮೊಸರು ಳಿ ಚಮಚ ಜೇನುತುಪ್ಪ ತಯಾರಿಸುವ ವಿಧಾನ ಟೊಮೆಟೋದ ಪೇಸ್ಟ್ ಮಾಡಿಕೊಳ್ಳಿ. ಇದರ ಬಳಿಕ ಅದಕ್ಕೆ ಮೊಸರು, ಕಡಲೆಹಿಟ್ಟು ಮತ್ತು ಜೇನುತುಪ್ಪ ಹಾಕಿ. ಎಲ್ಲವನ್ನು ಜತೆಯಾಗಿ ಬೆರೆಸಿಕೊಂಡು ಮಿಶ್ರಣ ಮಾಡಿ. ಹಚ್ಚಿಕೊಳ್ಳುವ ವಿಧಾನ ದಪ್ಪಗಿನ ಪೇಸ್ಟ್ ನ್ನು ಮುಖ ಹಾಗೂ ಕುತ್ತಿಗೆ ತೊಳೆದುಕೊಂಡು ಹಚ್ಚಿಕೊಳ್ಳಿ. ಇದು ಮುಖದಲ್ಲಿ ಹಾಗೆ ಒಣಗಲಿ ಮತ್ತು ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.
ಕಡಲೆಹಿಟ್ಟು-ಮುಳ್ಳುಸೌತೆಕಾಯಿ ಜ್ಯೂಸ್ ಹಾಗೂ ಟೊಮೆಟೋ ಜ್ಯೂಸ್ ಎರಡು ಚಮಚ ಕಡಲೆಹಿಟ್ಟು, ಎರಡು ಚಮಚ ಗಂಧದ ಹುಡಿ, ಎರಡು ಚಮಚ ಮುಳ್ಳುಸೌತೆಕಾಯಿ ಜ್ಯೂಸ್, ಎರಡು ಚಮಚ ಟೊಮೆಟೋ ಜ್ಯೂಸ್, ಎರಡು ಚಮಚ ಲಿಂಬೆರಸ, ಸ್ವಲ್ಪ ಮೊಸರು ಮತ್ತು ಸ್ವಲ್ಪ ರೋಸ್ ವಾಟರ್. ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದು ಹೆಚ್ಚು ದಪ್ಪ ಅಥವಾ ತೆಳುವಾಗದಂತೆ ನೋಡಿಕೊಳ್ಳಿ. ಕೈಬೆರಳುಗಳು ಅಥವಾ ಒಂದು ಸ್ವಚ್ಛ ಬ್ರಷ್ ತೆಗೆದುಕೊಂಡು ಈ ಫೇಸ್ ಪ್ಯಾಕ್ ಅನ್ನು ಹಚ್ಚಿಕೊಳ್ಳಿ. 20 ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣಗಿನ ನೀರಿನಿಂದ ತೊಳೆಯಿರಿ.
ಟೊಮೆಟೊ ಹಾಗೂ ಬೆಣ್ಣೆಹಣ್ಣು ಬೆಣ್ಣೆಹಣ್ಣಿನಲ್ಲಿ ಪ್ರತಿಜೀವಕ ಮತ್ತು ತೇವಕಾರಕ ಗುಣಗಳಿವೆ. ಇದನ್ನು ಟೊಮೆಟೊದೊಂದಿಗೆ ಬೆರೆಸಿದಾದ ಇದೊಂದು ಅದ್ಭುತವಾದ ಮೊಡವೆ ನಿವಾರಕ ಲೇಪವಾಗಿ ಮಾರ್ಪಡುತ್ತದೆ. ಸಮಪ್ರಮಾಣದಲ್ಲಿ ಟೊಮೆಟೊ ಹಣ್ಣಿನ ತಿರುಳು ಮತ್ತು ಬೆಣ್ಣೆಹಣ್ಣಿನ ತಿರುಳನ್ನು ಚೆನ್ನಾಗಿ ಬೆರೆಸಿ ದಪ್ಪನಾಗಿ ಈಗತಾನೇ ತಣ್ಣೀರಿನಲ್ಲಿ ತೊಳೆದುಕೊಂಡ ಮುಖಕ್ಕೆ ಹಚ್ಚಿ. ಇಪ್ಪತ್ತು ನಿಮಿಷದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸಿ. ಟೊಮೆಟೊ ಹಾಗೂ ಓಟ್ ಮೀಲ್ಸ್ ಟೊಮೆಟೊವನ್ನು ಚೆನ್ನಾಗಿ ಹಿಸುಕಿ ಪೇಸ್ಟ್ ರೀತಿ ಮಾಡಬೇಕು. ಅದಕ್ಕೆ ಸ್ವಲ್ಪ ಓಟ್ ಮೀಲ್ಸ್ ಮತ್ತು ಒಂದು ಚಮಚ ಮೊಸರು ಸೇರಿಸಬೇಕು. ನಂತರ ಚೆನ್ನಾಗಿ ಮಿಶ್ರ ಮಾಡಿ ಮುಖಕ್ಕೆ ಹಾಗೂ ಕುತ್ತಿಗೆ ಹಚ್ಚಿ 2-3 ನಿಮಿಷ ಉಜ್ಜಿ ಹಾಗೇ ಬಿಡಬೇಕು. ನಂತರ ತಣ್ಣಿರಿನಿಂದ ಮುಖ ತೊಳೆಯಬೇಕು. ಈ ರೀತಿ ಮಾಡಿ ಬಿಸಿಲಿನಿಂದ ಮುಖ ಕಪ್ಪಾಗಿದ್ದರೆ ಹೋಗಲಾಡಿಸಿ ಹೊಳೆಯುವ ಮುಖವನ್ನು ಪಡೆಯಬಹುದು. ಟೊಮೆಟೊ ಮತ್ತು ಮುಲ್ತಾನಿ ಮಿಟಿ ಟೊಮೆಟೊ ಮತ್ತು ಮುಲ್ತಾನಿ ಮಿಟಿ ಮಿಶ್ರ ಮಾಡಿ ಹಚ್ಚಿದರೆ ತುಂಬಾ ಪ್ರಯೋಜನ ಪಡೆಯಬಹುದು. ಹೀಗೆ ಹಚ್ಚಿದಾಗ ಮುಖವನ್ನು ಅಥವಾ ಬಾಯಿಯನ್ನು ಅಲುಗಾಡಿಸಲು ಹೋಗಬಾರದು. ಹಚ್ಚಿಕೊಂಡು ನಗುವುದು ಅಥವಾ ಮಾತನಾಡುವುದು ಮಾಡಿದರೆ ಮುಖದಲ್ಲಿ ನೆರಿಗೆ ಬೀಳುತ್ತದೆ. ಹಿಗೆ ಮುಖಕ್ಕೆ ಹಚ್ಚಿಕೊಂಡು 10 ನಿಮಿಷಗಳಿಗಿಂತ ಅಧಿಕ ಕಾಲ ಬಿಡಬೇಡಿ. ನಂತರ ಹದ ಬಿಸಿ ನೀರಿನಿಂದ ಮುಖವನ್ನು ಶುಚಿಗೊಳಿಸಿ.