13 ವರ್ಷದ ಬಾಲಕನ ಗುಪ್ತಾಂಗವನ್ನೇ ಸುಟ್ಟ ಮಹಿಳೆ

0
40

ನೋಯ್ಡಾ: 

  ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಸರ್ಕಾರಗಳು ಮೀ ಟೂ ಎಂಬ ಅಭಿಯಾನ ಶುರು ಮಾಡಿದ ಬೆನ್ನಲ್ಲೆ ನೋಯ್ಡಾದಲ್ಲಿ ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ವಿವಾಹಿತೆಯೊಬ್ಬಳು 13 ವರ್ಷದ ಬಾಲಕ ಮರ್ಮಾಂಗವನ್ನೇ ಸುಟ್ಟಿರುವ ಘಟನೆ ವರದಿಯಯಾಗಿದೆ.

   ಚಪ್ರೌಲ ಹಳ್ಳಿಯಲ್ಲಿ ವಿವಾಹಿತ ಮಹಿಳೆ 13 ವರ್ಷದ ಬಾಲಕನನ್ನು ಅವರ ಮನೆಗೆ ಕರೆದು ಬಳಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾಳೆ. ಆಗ ಆ ಬಾಲಕ ನಿರಾಕರಿಸಿದ್ದಕ್ಕೆ ಬಿಸಿ ಇಕ್ಕಳಗಳಿಂದ ಆತನ ಗುಪ್ತಾಂಗನ್ನು ಸುಟ್ಟಿದ್ದಾಳೆ. ಬಳಿಕ ಆರೋಪಿ ಮಹಿಳೆ ಪರಾರಿಯಾಗಿದ್ದಾಳೆ ಎಂದು ದೂರುದಾರರು ತಿಳಿಸಿದ್ದಾರೆ.

    ಪರಾರಿಯಾಗಿರುವ  ಮಹಿಳೆ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here