ಸತಿ ಭದ್ರಕಾಳಿ ರೂಪದಲ್ಲಿ
ಲಟ್ಟಣಿಕೆ ಅವಳ ಕೈಯಲ್ಲಿ
ಕಾಲಲ್ಲಿ ಮೆಟ್ಟಿದ ಚಪ್ಪಲಿ
ಪತಿಯ ಜೊತೆ ಚಂಪಕಲಿ
ಗಂಡನ ಮುಖ ಕೋಪದಲಿ
ಭಾರತದ ನಾರಿ ಮುನಿದರೆ ಅಗುವಳು ಮಾರಿ
ಕಂಡರೆ ಪತಿಯ ಜೊತೆಯಲಿ ಬೇರೊಬ್ಬ ನಾರಿ
ದಾರಿ ತಪ್ಪಿದ ಗಂಡನಿಗೆ ಹೆಂಡತಿ ಅಪಾಯಕಾರಿ
ನಂಬಿಕೆಯ ದಾಂಪತ್ಯಕ್ಕೆ ಹೆಂಡತಿಯೇ ಮದನಾರಿ
ಕುಡಿತ, ಜೂಜಾಟ, ಕ್ಷಮಿಸುವಳು ತಾಳ್ಮೆಯಲ್ಲಿ
ಹಿಂಸೆ, ಕಷ್ಟಗಳ ಸಹಿಸುವಳು ಅನುಕಂಪದಲ್ಲಿ
ಕೈಲಾಗದ ಗಂಡನ ಸಾಕುವಳು ಧೈರ್ಯದಲ್ಲಿ
ಸತಿ ಸಹಿಸಳು ಪರ ಸ್ತ್ರೀಯ ಗಂಡನ ತೆಕ್ಕೆಯಲ್ಲಿ
ಗಂಡ ಹೆಂಡತಿ ಗಾಳಿ ತುಂಬಿದ ಚಕ್ರಗಳಿದಂತೆ
ಪೆಟಲೊಂದೇ ಜೀವನ ಚಕ್ರ ಮುಂದೆ ಹೋಗಲು
ಬಂಧಿಸಿದೆ ಸರಪಳಿ ಇಬ್ಬರ ಪ್ರೀತಿ ಬಂಧನದಿಂದ
ಮೇಲೆ ಕಳಿತವ ನಡೆಸುತ್ತಾನೆ ಜೀವನದ ಹಾದಿಯಲಿ
ಸಂಸಾರ ಒಂದು ಬೈಸಿಕಲ್…….ಅಲ್ಲವೇ….
ಬರೆದವರು : ಕೆ.ವಿ.ರಾಜಣ್ಣ,
ಸರಸ್ವತಿಪುರಂ, ತುಮಕೂರು.
