ಹರಿಶ್ಚಂದ್ರಘಾಟ್​ ನತ್ತ ಸ್ಪಂದನಾ ಅಂತಿಮ ಯಾತ್ರೆ

ಬೆಂಗಳೂರು: 

      ವಿಜಯರಾಘವೇಂದ್ರ  ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರ ಮೃತದೇಹದ ಅಂತಿಮ ದರ್ಶನ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಂ ಅವರ ಬೆಂಗಳೂರಿನ ಮಲ್ಲೇಶ್ವರದ ಮನೆಯಲ್ಲಿ ಸಾಗುತ್ತಿದೆ.

    ಕರ್ನಾಟಕ ಸರ್ಕಾರದ ಸಚಿವರಾದ ಪ್ರಿಯಾಂಕ್ ಖರ್ಗೆ, ಸ್ಪೀಕರ್ ಯು ಟಿ ಖಾದರ್ ಮೊದಲಾದವರು ಅಂತಿಮ ದರ್ಶನವನ್ನು ಈಗಾಗಲೇ ಮಾಡಿದ್ದಾರೆ. ಸ್ಯಾಂಡಲ್ ವುಡ್ ನಟ, ನಟಿಯರು, ಹಿರಿಯ ಕಲಾವಿದರು, ಹಲವು ಕ್ಷೇತ್ರಗಳ ಗಣ್ಯರು ಸಹ ಸ್ಪಂದನಾ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

    ವಿಜಯ್ ರಾಘವೇಂದ್ರ ಅವರಿಗೆ ಪತ್ನಿಯ ಮೇಲೆ ಅಪಾರ ಪ್ರೀತಿ, ಗೌರವವಿದ್ದು ಪತಿ-ಪತ್ನಿ ಅನ್ಯೋಯವಾಗಿ 15 ವರ್ಷಗಳಿಂದ ಜೀವನ ಸಾಗಿಸುತ್ತಿದ್ದರು. ಹಠಾತ್ ಪತ್ನಿಯ ನಿಧನ ಅವರಿಗೆ ಬರಸಿಡಿಲಿನಂತೆ ಎದುರಾಗಿದ್ದು ಅವರ ದುಃಖ ಹೇಳತೀರದಾಗಿದೆ. ಅಂತಿಮ ದರ್ಶನಕ್ಕೆ ಬಂದವರು ವಿಜಯ ರಾಘವೇಂದ್ರ ಅವರನ್ನು ಸಂತೈಸುವ ಕೆಲಸ ಮಾಡುತ್ತಿದ್ದಾರೆ.

   ಈಡಿಗ ಸಂಪ್ರದಾಯ ಪ್ರಕಾರ ಸ್ಪಂದನ ಅಂತಿಮ ವಿಧಿ ವಿಧಾನಗಳನ್ನು ಪ್ರಣವಾನಂದ ಸ್ವಾಮಿಗಳ ನೇತೃತ್ವದಲ್ಲಿ ಕುಟುಂಬಸ್ಥರು ನೆರವೇರಿಸುತ್ತಿದ್ದಾರೆ. ವಿಜಯ್ ರಾಘವೇಂದ್ರ ಅವರೇ ಕೈಗೆ ಬಳೆ ತೊಡಿಸಿ ಹಣೆಗೆ ತಿಲಕವಿಟ್ಟು ಅಲಂಕಾರ ಮಾಡಿ ಮಲಗಿಸಿದ್ದರು. 

    ಸ್ಪಂದನಾ ವಿಜಯರಾಘವೇಂದ್ರ ಅವರ ಅಂತ್ಯಕ್ರಿಯೆ ಇಂದು ಸಂಜೆ  4 ಗಂಟೆಗೆ ಶ್ರೀರಾಮಪುರದ ಹರಿಶ್ಚಂದ್ರಘಾಟ್​ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅಂತ್ಯ ಸಂಸ್ಕಾರ  ಹಿನ್ನೆಲೆಯಲ್ಲಿ ಹರಿಶ್ಚಂದ್ರ ಘಾಟ್​ನಲ್ಲಿ ಬಿಬಿಎಂಪಿ ಅಧಿಕಾರಿಗಳು ಸಕಲ ಸಿದ್ದತೆ ಮಾಡುತ್ತಿದ್ದಾರೆ. ಹೇಗೆ ರಿಯಾಕ್ಟ್ ಮಾಡಬೇಕು ನನಗೆ ತಿಳಿಯುತ್ತಿಲ್ಲ. ಸ್ಪಂದನಾ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ. ನಟ ವಿಜಯ​ರಾಘವೇಂದ್ರರನ್ನು ನೋಡುವುದಕ್ಕೆ ಕಷ್ಟ ಆಗುತ್ತೆ ಎಂದು ನಟ ರಾಘವೇಂದ್ರ ರಾಜ್​ಕುಮಾರ್ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap