ಹಸೆಮಣೆ ಏರಿದ ಪವನ್ ಒಡೆಯರ್

   ಬಾಗಲಕೋಟೆ:

      ಕನ್ನಡದ ಸ್ಟಾರ್ ನಿರ್ದೇಶಕ ಪವನ್ ಒಡೆಯರ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಗಲಕೋಟೆಯಲ್ಲಿ ಇಂದು(ಆಗಸ್ಟ್ 20) ಅವರ ಮದುವೆ ಅದ್ದೂರಿಯಾಗಿ ನಡೆದಿದೆ.

       ಅಪೇಕ್ಷಾ ಪುರೋಹಿತ್ ಮೂಲತಃ ಬಾಗಲಕೋಟೆಯವರಾಗಿದ್ದು, ಅಲ್ಲಿಯ ವಿದ್ಯಗಿರಿಯಲ್ಲಿರುವ ಗೌರಿಶಂಕರ್ ಕಲ್ಯಾಣ ಮಂಟಪದಲ್ಲಿ ವಿವಾಹ ಕಾರ್ಯಕ್ರಮ ಸಹ ಜರುಗಿದೆ. ಇಂದು ಬೆಳಗ್ಗೆ 9.05 ಶುಭ ಮುಹೂರ್ತದಲ್ಲಿ ಅಪೇಕ್ಷಾ ಕೊರಳಿಗೆ ಪವನ್ ತಾಳಿ ಕಟ್ಟಿದ್ದಾರೆ.

Image result for pavan wadeyar

      ಬ್ರಾಹ್ಮಣ ಸಂಪ್ರದಾಯದಂತೆ ಕುಟುಂಬಸ್ಥರು ಹಾಗೂ ಆಪ್ತರ ಉಪಸ್ಥಿತಿಯಲ್ಲಿ ಪವನ್ ಒಡೆಯರ್ ಹಾಗೂ ಅಪೇಕ್ಷಾ ತಮ್ಮ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

      ಕಳೆದ ಡಿಸೆಂಬರ್ ತಿಂಗಳಲ್ಲಿ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಿಶ್ಚಿತಾರ್ಥ ಆದ ಎಂಟು ತಿಂಗಳ ಬಳಿಕ ಈ ಜೋಡಿ ಹಸೆಮಣೆ ಏರಿದೆ. ನಿನ್ನೆ ಆರತಕ್ಷತೆ ಕಾರ್ಯಕ್ರಮ ಸಹ ಗ್ರಾಂಡ್ ಆಗಿ ನೆರವೇರಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link