ಸೆ.12ಕ್ಕೆ ಸಮಾಲೋಚನಾ ಸಭೆ..!

ಹೊಸದುರ್ಗ:

    ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿರುವ ದಲಿತರು ಐದನೇ ದಿನದ ಪ್ರತಿಭಟನೆಯಲ್ಲಿ ತಾಲ್ಲೂಕು ಕಚೇರಿ ಮುಂದೆ ಒಲೆಗಳನ್ನು ಹೂಡಿ ಆಹಾರವನ್ನು ತಯಾರಿಸಿ ಪ್ರತಿಭಟನೆ ನಡೆಸಿದರು.

     ಸೆ. 12 ರಂದು ಗುರುವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿಗಳ ಅದ್ಯಕ್ಷತೆಯಲ್ಲಿ ದಲಿತ ದೌರ್ಜನ್ಯ ತಡೆ ಮಹತ್ವದ ಸಮಾಲೋಚನಾ ಸಭೆಯನ್ನ ಆಯೋಜಿಸಲಾಗಿದೆ ಎಂದು ತಹಶೀಲ್ದಾರ್ ವಿಜಯಕುಮಾರ್ ತಿಳಿಸಿದರು.
ಅವರು ಪಟ್ಟಣದ ಕಂದಾಯ ಇಲಾಖೆ ಆವರಣದಲ್ಲಿ ಸೋಮವಾರ ಜಂತಿಕೊಳಲು ಮತ್ತು ದೊಡ್ಡಘಟ್ಟ ದಲಿತರ ಪ್ರತಿಭಟನಾ ಸ್ಥಳದಲ್ಲಿ ಭಾಗವಹಿಸಿ ಮಾತನಾಡಿದರು.

   ಅಂದಿನ ಸಭೆಯಲ್ಲಿ ಸತಾಗ್ರಹಿ ದಲಿತರ ಬೇಡಿಕೆಗಳನ್ನು ಪರಿಶೀಲಿಸಿ ಹೆಚ್ಚಿನ ರೀತಿಯಲ್ಲಿ ನೆರವು ನೀಡಲು ಕ್ರಮ ಜರುಗಿಸಲಾಗುವುದು. ಶಾಸಕ ಗೂಳಿಹಟ್ಟಿ ಡಿ. ಶೇಖರ್ ಈ ಬಗ್ಗೆ ಕಾಳಜಿ ವಹಿಸಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ, ದಲಿತರಿಗೆ ನಿವೇಶನ ನೀಡಲು ಸೂಕ್ತವಾದ ಸ್ಧಳ ಪರಿಶೀಲನೆ ಮಾಡಲಾಗುತ್ತಿದೆ, ಅಧೀನ ಅಧಿಕಾರಿಗಳ ವರದಿ ಬಂದೊಡನೆ ಮುಂದಿನ ಕ್ರಮ ಕೈಗೋಳುತ್ತ್ಳೇವೆ ಎಂದರು.

   ಸೆ. 12 ರಂದು ನಡೆಯಲಿರುವ ಸಭೆಗೆ ಶಾಸಕರು, ಸಂಸದರು, ಅಂಬೇಡ್ಕರ್ ನಿಗಮದ ಅಧಿಕಾರಿಗಳೂ ಬರಲಿದ್ದಾರೆ, ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಲಿದ್ದಾರೆ, ಅದೇ ರೀತಿ ಮನೆಗಳ ಮಂಜೂರಾತಿಯನ್ನು ಮಾಡಲಾಗುವುದು, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ, ಪೋಲೀಸ್, ಡಿ.ವೈ,ಎಸ್.ಪಿ ಎರಡೂ ಗ್ರಾಮಗಳಿಗೆ ಈಗಾಗಲೇ ಭೇಟಿ ನೀಡಿದ್ದಾರೆ, ಯಾವುದೇ ರೀತಿಯ ಆಶ್ವಾಸನೆ ನೀಡದೆ ಕ್ರಮ ಜರುಗಲಿದೆ ಎಂಬ ಭರವಸೆ ನೀಡಿದರು. ಈ ಬಗ್ಗೆ ಮೊದಲ ಸುತ್ತಿನ ಚಿಂತನೆ ನಡೆಸಲಾಗಿದೆ, ನೊಂದ ದಲಿತರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡಲಾಗುವುದು ಎಂದರು.

    ಈ ಸಂಧರ್ಬದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೊಡ್ಡಘಟ್ಟ ಲಕ್ಷ್ಮಣ್ ಅಮೃತ್ ಮಹಲ್ ಕಾವಲು, ಗೋಮಾಳ, ಸೇಂದಿವನ ಸೇರಿಂದಂತೆ ಜಮೀನು ನೀಡಲು ಅಗತ್ಯ ಕ್ರಮಕ್ಕೆ ಒತ್ತಾಯಿಸಿದರು.

     ಬ್ರಷ್ಟಾಚಾರ ವಿರೋಧಿ ನಿರ್ಮೂಲನಾ ಆಂದೋಲನದ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗ ಮಾತನಾಡಿ ಬೇಡಿಕೆಗಳು ಈಡೇರದಿದ್ದಲ್ಲಿ ಸರ್ಕಾರಿ ಕಛೇರಿಗಳಿಗೆ ಮುತ್ತಿಗೆ ಹಾಕಿ ಅಧಿಕಾರಿಗಳೀಗೆ ಘೇರಾವ್ ಮಾಡಲಾಗುವುದು ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನ ಕೂಗಲಾಗುವುದು ಎಂದರು.

    ದಲಿತ ಸಂಘರ್ಷ ಸಮಿತಿಯ ರಾಜ್ಯಾದ್ಯಕ್ಷ ಟಿ.ಡಿ.ರಾಜಗಿರಿ, ಆದಿಜಾಂಬವ ಸಮಾಜದ ಅಧ್ಯಕ್ಷ ಆರ್.ತಿಪ್ಪಯ್ಯ, ತಾಲ್ಲೂಕು ಅಧ್ಯಕ್ಷ ರಾಮಸ್ವಾಮಿ, ದೊಡ್ಡಘಟ್ಟ ಏಕಾಂತಪ್ಪ, ತಿಮ್ಮಪ್ಪ, ಗೂಳಿಹಟ್ಟಿ ಕೃಷ್ಣಮೂರ್ತಿ ಮುಂತಾದವರು ನೇತೃತ್ವ ವಹಿಸಿದ್ದರು

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link