ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ಎಂ.ಎನ್.ಕೋಟೆಯಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ಮುದ್ದಪುರ ಗೇಟ್ ಸಮೀಪ ಬಳಿ ದೊಡ್ಡದಾದ ಮರ ರಸ್ತೆಗೆ ವಿದ್ಯುತ್ ತಂತಿಯ ಸಮೇತ ಧರೆಗುರುಳಿದೆ. ವಾಹನ ಹಾಗೂ ದ್ವಿಚಕ್ರ ಸವಾರರಿಗೆ ಸುಮಾರು ತಾಸು ರಸ್ತೆ ಬಂದ್ ಆಗಿತ್ತು. ರಾತ್ರಿಯೇ ಮರ ಬಿದ್ದಿರುವುದರಿಂದ ಬೆಳಿಗ್ಗೆ ಬಸ್ ಹಾಗೂ ವಾಹನ ಸವಾರರು ಬೇರೆ ಕಡೆ ಮಾರ್ಗವಾಗಿ ನಿಟ್ಟೂರಿಗೆ ತೆರಳಿದರು. ನಂತರ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರವನ್ನು ತೆರವುಗೊಳಿಸಿ ಸುಗಮಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಗುಬ್ಬಿ ತಾಲ್ಲೂಕಿನ ಎಂ.ಎನ್.ಕೋಟೆ ಶ್ರೀ ಕೊಲ್ಲಾಪುರದಮ್ಮ ದೇವಾಲಯದ ಬಳಿ ಸೇತುವೆ ರಾತ್ರಿ ಸುರಿದ ಭಾರಿ ಮಳೆಗೆ ಜಾಲವೃತ್ತವಾಗಿದೆ. ಹತ್ತದ ಮಳೆ ಬಂದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಕೈಮರದ ಕಟ್ಟಿ ತುಂಬಿ ಹರಿದಿದೆ. ಮಂಚಲದೊರೆ , ಶಿವರಾಂಪುರ , ಕೈಮರ , ಅಪ್ಪಣ್ಣನಹಳ್ಳಿ , ಯಕ್ಕಲ್ಲಕಟ್ಟೆ ಗ್ರಾಮಗಳಲ್ಲಿ ಅಲ್ಲಲ್ಲಿ ಭರ್ಜರಿ ಮಳೆಯಾಗಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಅಲ್ಲಲ್ಲಿ ಕೆರೆ ಕಟ್ಟೆಗಳಿಗೆ ನೀರು ಬಂದಿದೆ.
ಕೆಲವು ತೋಟ ಗದ್ದೆಗಳಲ್ಲಿ ಮಳೆ ನೀರು ತುಂಬಿಕೊಂಡಿದೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಹತ್ತದ ಮಳೆಗೆ ರಾಗಿ , ಜೋಳ , ಉಚ್ಚೆಳ್ಳು ಬೆಳೆಗಳು ಹಸಿರಿನಿಂದ ಕೂಡಿದೆ. ವಾಣಿಜ್ಯ ಬೆಳೆಗಳಾದ ಅಡಿಕೆ , ತೆಂಗಿನ ಗಿಡಗಳಿಗೆ ಮಳೆಯಿಂದ ಜೀವಕಳೆ ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








