ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿಗೆ ‘ನೊಬೆಲ್ ಗೌರವ’

ವಾಷಿಂಗ್ಟನ್ :

     ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರಿಗೆ ಅತ್ಯುನ್ನತ ಪ್ರಶಸ್ತಿ ಎಂದೇ ಪರಿಗಣಿಸಲಾದ ನೊಬಲ್ ಗೌರವ ಸಂದಿದೆ.

     ಅಭಿಜಿತ್ ಬ್ಯಾನರ್ಜಿ ಅವರ ಪತ್ನಿ ಈಸ್ಟರ್ ಡಲ್ಫೋ ಹಾಗೂ ಅರ್ಥಶಾಸ್ತ್ರಜ್ಞ ಮೈಖೇಲ್ ಕ್ರೆಮರ್ ನಡೆಸಿದ ಬಡತನದ ಮೇಲಿನ ಅಧ್ಯಯನಕ್ಕಾಗಿ ಅಭಿಜಿತ್ ಬ್ಯಾನರ್ಜಿ ಅವರಿಗೆ ಈ ಅತ್ಯುನ್ನತ ಗೌರವ ಲಭಿಸಿದ್ದು, ಮೂವರು ಅರ್ಥಶಾಸ್ತ್ರಜ್ಞ ರೊಂದಿಗೆ ಅವರು ನೊಬಲ್ ಗೌರವವನ್ನು ಹಂಚಿಕೊಂಡಿದ್ದಾರೆ.

      ಕಳೆದ ಎರಡು ದಶಕಗಳಲ್ಲಿ ಅಭಿವೃದ್ಧಿ ಆರ್ಥಿಕತೆಗೆ ಸಂಬಂಧಿಸಿದಂತೆ ಇವರು ಮಾಡಿದ ಸಂಶೋಧನೆ ಮತ್ತು ಪ್ರಯೋಗಗಳು ಜಾಗತಿಕ ಬಡತನವನ್ನು ಹೋಗಲಾಡಿಸುವಲ್ಲಿ ನೆರವಾಗಿವೆ ಎಂಬ ಕಾರಣಕ್ಕೆ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸ್ ಘೋಷಣೆ ಮಾಡಿದೆ.

      1961 ಫೆಬ್ರವರಿ 21ರಂದು ಅಭಿಜಿತ್ ಕೊಲ್ಕತ್ತಾದಲ್ಲಿ ಜನಿಸಿದರು. 1981ರಲ್ಲಿ ಕೊಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜ್ ನಲ್ಲಿ ಅರ್ಥಶಾಸ್ತ್ರದಲ್ಲಿ ಬಿ.ಎಸ್. ಡಿಗ್ರಿ ಪಡೆದರು. ದಿಲ್ಲಿಯ ಜವಾಹರ್ ಲಾಲ್ ನೆಹರೂ ವಿವಿಯಲ್ಲಿ ಅರ್ಥಶಾಸ್ತ್ರದ ಎಂ.ಎ. ಪದವಿ ಗಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link