ಶಿರಾ:
ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಚಿಕ್ಕ ಹುಲಿಕುಂಟೆ ಗ್ರಾಮದಿಂದ ಹಡ್ಲು ಗೊಲ್ಲರಹಟ್ಟಿಗೆ ಹೋಗುವ ರಸ್ತೆಯು ಅತ್ಯಂತ ಕಳಪೆಯಾಗಿದ್ದು ವಾಹನ ಚಾಲಕರಿಗೆ ತೀವರತರ ತೊಂದರೆಯಾಗಿದ್ದು ಈ ಕೂಡಲೇ ರಸ್ತೆ ದುರಸ್ಥಿಗೊಳಿಸುವಂತೆ ಸಾರ್ವಜನಿಕರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಚಿಕ್ಕಹುಲಿಕುಂಟೆಯಿಂದ ಗೊಲ್ಲರಹಟ್ಟಿಗೆ ಹೋಗುವ ಈ ರಸ್ತೆಯಲ್ಲಿ ದಿನ ನಿತ್ಯ ನಾಲ್ಕು ಶಾಲಾ ವಾಹನಗಳು ಓಡಾಡುತ್ತವೆಯಲ್ಲದೆ. ನೂರಾರು ಬೈಕ್ ಸವಾರರು ಇದೇ ರಸ್ತೆಯಿಂದ ಸಂಚರಿಸಬೇಕಿದೆ. ಮಳೆ ಬಂದರಂತೂ ಈ ರಸ್ತೆ ಸಂಪೂರ್ಣವಾಗಿ ಓಡಾಡಲು ಕೂಡಾ ಸಾದ್ಯವಾಗದಂತಾಗಿರುತ್ತದೆ.
ಈ ರಸ್ತೆಯ ದುರಸ್ಥಿ ಬಗ್ಗೆ ಸ್ಥಳೀಯ ಗ್ರಾ.ಪಂ..ಗೆ ಸಾಕಷ್ಟು ದೂರು ನಿಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದ ಜಿ.ಪಂ. ಸದಸ್ಯರಾಗಲಿ, ತಾಲ್ಲೂಕು ಪಂಚಾಯ್ತಿ ಸದಸ್ಯರಿಗಾಗಲಿ ಇತ್ತ ಗಮನವನ್ನೇ ಹರಿಸಿಲ್ಲ. ಹುಲಿಕುಂಟೆ ಜಿ.ಪಂ. ಸದಸ್ಯರು ಇದೇ ರಸ್ತೆಯಲ್ಲಿ ಸಾಕಷ್ಟು ಬಾರಿ ಓಡಾಡಿದ್ದರೂ ಈ ರಸ್ತೆ ಅವರ ಕಣ್ಣಿಗೂ ಬಳೀದೇ ಹೋಗಿರುವುದು ವಿಪರ್ಯಾಸವೇ ಸರಿ. ಇನ್ನಾದರೂ ಈ ರಸ್ತೆಯ ದುರಸ್ಥಿಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
