ಅನುಮಾನಾಸ್ಪದವಾಗಿ ವ್ಯಕ್ತಿ ಸಾವು

ಶಿರಾ

     ನಗರದ ವಿವಿಧೆಡೆ ಕೊರಳಿಗೆ ದೇವರ ಫೋಟೊ ಹಾಕಿಕೊಂಡು ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಆರ್.ಎಂ.ಸಿ. ಕಚೆರಿಯ ಹಿಂಭಾಗದಲ್ಲಿ ನಡೆದಿದೆ.ನಗರದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ತಗ್ಗಿಹಳ್ಳಿಯ ರಾಮಣ (60) ಎಂಬ ವ್ಯಕ್ತಿಯ ಮೃತ ದೇಹವು ಆರ್.ಎಂ.ಸಿ. ಕಚೆರಿಯ ಆವರಣದ ಹಿಂಭಾಗದಲ್ಲಿ ಆರಕ್ಷಕ ಇಲಾಖೆಗೆ ಲಭ್ಯವಾಗಿದ್ದು, ಸದರಿ ವ್ಯಕ್ತಿಯ ಕೊರಳಿಗೆ ಟವಲ್‍ನಿಂದ ಬಿಗಿದು ಕೊಲೆಗೈದಂತೆ ಮೃತ ದೇಹ ಕಂಡು ಬಂದರೂ, ಕೊರಳಿಗೆ ಬಿಗಿದು ಕೊಲೆಗೈದಿಲ್ಲ ಎಂಬ ಸಂಶಯವೂ ಆರಕ್ಷಕ ಇಲಾಖೆಗೆ ಮೂಡಿದೆ.

     ಕೊರಳಿಗೆ ಬಿಗಿದ ಟವೆಲ್‍ನಿಂದ ಮೃತ ವ್ಯಕ್ತಿಯ ಕೊರಳಿಗೆ ಅಪಾಯವಾಗಿಲ್ಲವೆಂಬ ಸಂಶಯವಿದ್ದು, ಮರಣೋತ್ತರ ಪರೀಕ್ಷೆಯ ನಂತರ ಈ ಪ್ರಕರಣದ ಸತ್ಯಾನುಸತ್ಯತೆ ಲಭಿಸಲಿದೆ. ನಗರದ ಯಾವುದಾದರೂ ಅಂಗಡಿಯೊಂದರ ಮುಂದೆ ಆಕಸ್ಮಿಕವಾಗಿ ಮೃತಪಟ್ಟಿರಬಹುದಾದ ವ್ಯಕ್ತಿಯನ್ನು ತಂದು ಹೊರ ವಲಯದಲ್ಲಿ ಎಸೆದಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ.ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರ ಠಾಣಾ ಸಿ.ಪಿ.ಐ. ರಂಗಸ್ವಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link