ತಿಪಟೂರು :
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ, ಸಾರ್ಥವಳ್ಳಿ ಗ್ರಾಮದ ಶಾಲಾ ಮಕ್ಕಳು ಬರಗಾಲದಲ್ಲು ಗಿಡಗಳಿಗೆ ನೀರುಣಿಸಿ ಬೆಳೆಸುತ್ತಿದ್ದು ಇತರೆ ಶಾಲೆಗಳಿಗೆ ಮತ್ತು ಗ್ರಾಮಗಳಿಗೆ ಮಾದರಿಯಾಗುತ್ತಿದ್ದಾರೆ.
ಸರ್ಕಾರವೇ ಘೊಷಿಸಿರುವ ಬರಗಾಲದ ತಾಲ್ಲೂಕುಗಳಲ್ಲಿ ತಿಪಟೂರು ಸಹ ಇದ್ದರೂ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಖಾಸಗಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನೆಟ್ಟಗಿಡಗಳನ್ನು ನೀರು ಗೊಬ್ಬರ ಹಾಕಿ ಪೋಷಿಸುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮದಂತೆ ಎಲ್ಲಕಡೆಯೂ ವನಮಹೋತ್ಸವ ಆಚರಿಸುವುದು ಸಾಮಾನ್ಯ.
ಅದರಲ್ಲೂ ಎಲ್ಲರೂ ವನಮಹೋತ್ಸವದ ಅಂಗವಾಗಿ ಲಕ್ಷಾಂತರ ಗಿಡನೆಡುವ ಕಾರ್ಯಕ್ರಮವೆಂದು ತಿಳಿಸಿ ಮಾದ್ಯಮದವರ ಮುಂದೆ ಗಿಡಹಾಕಿ ನಂತರ ವನಮಹೋತ್ಸವವನ್ನು ಮುಂದಿನ ಜೂನ್ 05ರಂದು ಬರುವವರೆಗೆ ಹಾಕಿರುವ ಗಿಡದ ಬಗ್ಗೆ ಗಮನ ಹರಿಸದೆ ಇರುವುದು ಸರ್ವೇಸಾಮಾನ್ಯ ಮತ್ತೆ ಅಲ್ಲಿಯವರೆಗೆ ಅದು ವಣಮಹೋತ್ಸವ ಕಾರ್ಯಕ್ರಮವಾಗಿರುತ್ತದೆ.
ಆದರೆ ಇದಕ್ಕೆ ತದ್ವಿರುದ್ದವಾಗಿ ಇಲ್ಲಿನ ಶಾಲಾ ಮಕ್ಕಳು ತಾವು ವಹಿಸಿಕೊಂಡಿರುವ ಗಿಡಗಳನ್ನು ರಸ್ತೆ ಪಕ್ಕದಲ್ಲಿ ಬಿದ್ದಿರುವ ಸಗಣಿ ಗೊಬ್ಬರವನ್ನು ಹಾಕಿ ದೂರದಿಂದ ನೀರನ್ನು ತಂದು ನಮ್ಮ ಗಿಡ ಚೆನ್ನಾಗಿರಬೇಕು ನನ್ನ ಗಿಡ ಚೆನ್ನಾಗಿರಬೇಕು ಎಂಬ ಸ್ಫರ್ಧಾತ್ಮಕ ಮನೋಭಾವದಿಂದ ಗಿಡಗಳನ್ನು ರಕ್ಷಿಸುತ್ತಾ ಬರುತ್ತಿರುವುದ ಸ್ವಾಗತಾರ್ಹ ಮತ್ತು ಇತರರಿಗೆ ಮಾಡದರಿಯಾಗಿದೆ ಎಂದು ಸಾರ್ಥವಳ್ಳಿ ಗ್ರಾ.ಪಂ ಅಧ್ಯಕ್ಷೆ ಮಮತ ಶಿವಕುಮಾರ್ ತಿಳಿಸಿದರು.
ವಿದ್ಯಾರ್ಥಿಗಳ ಪರಿಸರ ಕಾಳಜಿಗೆ ಶಿಕ್ಷಕರುಗಳು ನೆರವು ನೀಡುತ್ತಿದ್ದು ಶುದ್ದ ಪರಿಸರವನ್ನು ಹೊಂಬೇಕೆನ್ನುವ ಮಹದಾಸೆಯಿಂದ ಪರಿಸರವನ್ನು ರಕ್ಷಿಸುತ್ತಿದ್ದೇವೆ ಪರಿಸರವಿಲ್ಲದೇ ನಾವಿಲ್ಲ ಆದ್ದರಿಂದ ನಮಗಾದ ಮಟ್ಟಿಗೆ ಪರಿಸರವನ್ನು ರಕ್ಷಿಸುತ್ತಿದ್ದೇವೆಂದು ವಿದ್ಯಾರ್ಥಿಗಳು ತಿಳಿಸುತ್ತಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
