ಕಡಿಮೆ ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಗಳನ್ನು ಬಂದ್ ಮಾಡ ಹೊರಟ ಸರ್ಕಾರ

ಬೆಂಗಳೂರು

   ಕಡಿಮೆ ವಿದ್ಯರ್ಥಿಗಳಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಲು ಚಿಂತನೆ ನಡೆಸಿರುವ ರಾಜ್ಯ ಸರ್ಕಾರ ಹತ್ತಕ್ಕಿಂತ ಕಡಿಮೆಯಿರುವ ಸರ್ಕಾರಿ ಶಾಲೆಗಳ ವಿದ್ಯರ‍್ಥಿಗಳಿಗೆ ಉಚಿತ ವಾಹನ ಸೌಲಭ್ಯ ಕಲ್ಪಿಸಿ ಹತ್ತಿರದ ಮತ್ತೊಂದು ಸರ್ಕಾರಿ ಶಾಲೆಗೆ ಕಳುಹಿಸಲು ನರ‍್ಧರಿಸಿದೆ.

     ಗರದ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಕೇಂದ್ರದಲ್ಲಿ ರ‍್ಪಡಿಸಿದ್ದ ಸಂವೇದನಾ ನೇರ ಫೋನ್ ಇನ್ ಕರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯರ್ಥಿಗಳು, ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸರ್ಕಾರಿ ಶಾಲೆಯ ಯಾವೊಬ್ಬ ವಿದ್ಯರ್ಥಿಗಳಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ಉಚಿತ ವಾಹನ ಒದಗಿಸುವ ಸೌಲಭ್ಯವನ್ನು ಜಾರಿಗೊಳಿಸಲಾಗುವುದು ಎಂದರು.

     ರಾಜ್ಯದಲ್ಲಿ ೧೦ ವಿದ್ಯರ‍್ಥಿಗಳಿಗಿಂತ ಕಡಿಮೆ ಇರುವ ಮೂರು ಸಾವಿರ ಶಾಲೆಗಳನ್ನು ಗುರುತಿಸಲಾಗಿದ್ದು ಹತ್ತು ವಿದ್ಯರ್ಥಿಗಳಿರುವ ಶಾಲೆಯನ್ನು ಸ್ಥಗಿತಗೊಳಿಸಿ ಅಲ್ಲಿನ ವಿದ್ಯರ್ಥಿಥಿಗಳಿಗೆ ಉಚಿತ ವಾಹನ ಸೌಲಭ್ಯ ಕಲ್ಪಿಸಿ ಹತ್ತಿರದ ಮತ್ತೊಂದು ಶಾಲೆಗೆ ಕಳುಹಿಸಿ ಆ ಶಾಲೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

      ಒಂದು ಶಾಲೆಯಲ್ಲಿ ಒಂದೇ ವಿದ್ಯರ‍್ಥಿ ಇರುವುದನ್ನೂ ಸಹ ಕಂಡುಕೊಳ್ಳಲಾಗಿದೆ. ಒಂದೇ ವಿದ್ಯರ್ಥಿ ಸಹಪಾಠಿಗಳ ಒಡನಾಟವಿಲ್ಲದೆ, ಆಟ – ಪಾಠ ಕಲಿಯುವುದಾದರೂ ಹೇಗೆ ಮಕ್ಕಳು – ಮಕ್ಕಳೊಂದಿಗೆ ಬೆರೆತು ಆಟ – ಪಾಠ ಕಲಿತಾಗ ಸಹಜವಾಗಿಯೇ ಶಿಕ್ಷಣದ ಮೇಲೆ ಆಸಕ್ತಿ ತಳೆಯುವ ಕಾರಣಕ್ಕೆ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link