ಹೊಸಪೇಟೆ :
ನಗರದ ವಿವಿದೆಡೆ ನಗರಸಭೆ ಸಿಬ್ಬಂದಿಯು ದಿಡೀರ್ ದಾಳಿ ನಡೆಸಿ 400ಕೆ.ಜಿ.ಪ್ಲಾಸ್ಟಿಕ್ ವಶಪಡಿಸಿಕೊಂಡಿತು.ನಗರಸಭೆ ಪೌರಾಯುಕ್ತೆ ಜಯಲಕ್ಷ್ಮಿ ನೇತೃತ್ವದಲ್ಲಿ ದಾಳಿ ನಡೆಸಿದ ಸಿಬ್ಬಂದಿಯು ವಾಲ್ಮೀಕಿ ವೃತ್ತ, ಮೂರಂಗಡಿ ವೃತ್ತದಲ್ಲಿ ದಿಡೀರ್ ದಾಳಿ ನಡೆಸಿ ಪ್ಲಾಸ್ಟಿಕ್ ಬ್ಯಾಗ್, ಕಪ್, ಪ್ಲೇಟ್ ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದೆ. ಎಪಿಎಂಸಿ ಮಾರುಕಟ್ಟೆ : ಬೆಳ್ಳಂ ಬೆಳಿಗ್ಗೆ ಎಪಿಎಂಸಿ ಮಾರುಕಟ್ಟೆಯ ಮಳಿಗೆಗಳ ಮೇಲೆ ದಾಳಿ ನಡೆಸಿದ ಸಿಬ್ಬಂದಿಯು ಇಂದು ಸಹ ಅಲ್ಪ ಪ್ರಮಾಣದಲ್ಲಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದೆ.ನಗರಸಭೆ ಪರಿಸರ ಅಭಿಯಂತರರಾದ ಆರತಿ, ಆರೋಗ್ಯ ನಿರೀಕ್ಷಕರಾದ ವೆಂಕಟೇಶ ಹವಾಲ್ದಾರ್, ಸತ್ಯನಾರಾಯಣಶರ್ಮಾ, ಪ್ರಕಾಶಬಾಬು, ಗುರುರಾಜ, ಸುರೇಶ, ವರ್ಮಾ, ಜಂಬಯ್ಯ, ಗಂಗಾಧರ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ