ಕಬ್ಬು ಬೆಳೆಗಾರರೊಂದಿಗೆ ಡಿಸಿ ಸಭೆ

ಬಳ್ಳಾರಿ

   ಸಂಪೂರ್ಣವಾಗಿ ಮುಚ್ಚಿರುವ ಹೊಸಪೇಟೆಯ ಐಎಸ್‍ಆರ್ ಸಕ್ಕರೆ ಕಾರ್ಖಾನೆ ಮತ್ತು ಈ ವರ್ಷ ತಾತ್ಕಾಲಿಕವಾಗಿ ಮುಚ್ಚಿರುವ ದೇಶನೂರು ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಗಳ ಪ್ರದೇಶದಲ್ಲಿ ರೈತರು ಬೆಳೆದಿರುವ ಕಬ್ಬನ್ನು ಬೇರೆ ಸಕ್ಕರೆ ಕಾರ್ಖಾನೆಗಳಿಗೆ ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಕಬ್ಬು ಬೆಳೆಗಾರರು,ರೈತ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಜಿಲ್ಲಾಧಿಕಾರಿಕಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಭೆ ನಡೆಸಿದರು.

    ಎನ್‍ಎಸ್‍ಎಲ್ ಸಕ್ಕರೆ ಕಾರಖಾನೆ ಹಾಗೂ ಐಎಸ್‍ಆರ್ ಸಕ್ಕರೆ ಕಾರಖಾನೆ ವ್ಯಾಪ್ತಿಯಲ್ಲಿ ರೈತರು ಬೆಳೆದ ಕಬ್ಬನ್ನು ಹಡಗಲಿಯ ಮೈಲಾರ ಸಕ್ಕರೆ ಕಾರಖಾನೆ ಮತ್ತು ಹರಪನಳ್ಳಿಯ ಶಾಮನೂರು ಸಕ್ಕರೆ ಕಾರಖಾನೆಗೆ ಹಂಚಿಕೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

    ಮೈಲಾರ ಸಕ್ಕರೆ ಕಾರಖಾನೆಯಲ್ಲಿ ದಿನಕ್ಕೆ 5 ಸಾವಿರ ಮೆಟ್ರಿಕ್ ಟನ್‍ನಂತೆ 160 ದಿನಗಳ ಕಾಲ 8ಲಕ್ಷ ಮೆಟ್ರಿಕ್ ಟನ್‍ನಷ್ಟು ಕಬ್ಬನ್ನು ನುರಿಸಬಹುದಾಗಿದ್ದು; ಅವರು ಕಳೆದ ವರ್ಷ 4.41ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿದ್ದಾರೆ. ಶಾಮನೂರು ಸಕ್ಕರೆ ಕಾರಖಾನೆಯವರು 5.60 ಲಕ್ಷ ಕಬ್ಬನ್ನು ನುರಿಸುವ ಸಾಮಥ್ರ್ಯವಿದ್ದು; 3 ಲಕ್ಷ ಮಾತ್ರ ನುರಿಸಲಾಗಿದೆ. ಆದ್ದರಿಂದ ಈ ಸಕ್ಕರೆ ಕಾರಖಾನೆಗಳಲ್ಲಿ ಕಬ್ಬು ನುರಿಸುವ ಸಾಮಥ್ರ್ಯ ಸಾಕಷ್ಟು ಪ್ರಮಾಣದಲ್ಲಿರುವುದರಿಂದ ಎನ್‍ಎಸ್‍ಎಲ್ ಸಕ್ಕರೆ ಕಾರಖಾನೆ ಹಾಗೂ ಐಎಸ್‍ಆರ್ ಸಕ್ಕರೆ ಕಾರಖಾನೆ ವ್ಯಾಪ್ತಿಯಲ್ಲಿ ರೈತರು ಬೆಳೆದ ಕಬ್ಬನ್ನು ಹಂಚಿಕೆ ಮಾಡಬಹುದು ಎಂದರು.

   ಈ ವರ್ಷ ಬಳ್ಳಾರಿ ಜಿಲ್ಲೆಯಲ್ಲಿ 8268 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದ್ದು, 562221 ಮೆಟ್ರಿಕ್ ಟನ್ ಕಬ್ಬು ಬರುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ ಎಂದರು.ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ಈಗಾಗಲೇ 15 ದಿನಗಳ ಹಿಂದೆ ಸಕ್ಕರೆ ಕಾರಖಾನೆಗಳ ಜತೆ ಸಭೆ ನಡೆಸಲಾಗಿದೆ. ಆ ಸಭೆಯಲ್ಲಿ ಕಾರಖಾನೆಗಳು ಎಷ್ಟು ಬಾಕಿ ಉಳಿಸಿಕೊಂಡಿವೆ. ವಸೂಲಾತಿ ದರ, ಇನ್‍ಸ್ಟಾಲ್ಡ್ ಕೆಪ್ಯಾಸಿಟಿ, ಏರಿಯಾ ಅಲಟ್‍ಮೆಂಟ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದರು.

    ಈಗಾಗಲೇ ಮೈಲಾರ ಸಕ್ಕರೆ ಕಾರಖಾನೆ, ವಿಜಯನಗರ ಸಕ್ಕರೆ ಕಾರಖಾನೆ ಹಾಗೂ ಶಾಮನೂರು ಸಕ್ಕರೆ ಕಾರಖಾನೆಗಳು ಕಬ್ಬು ನುರಿಸುವಿಕೆ ಪ್ರಕ್ರಿಯೆಯನ್ನು ಆರಂಭಿಸಿದ್ದು, ಯಾದಗಿರಿಯ ಕೋರ್‍ಗ್ರೀನ್ ಇನ್ನೂ ಆರಂಭಿಸಿಲ್ಲ ಎಂದು ಅವರು ಸಭೆಗೆ ತಿಳಿಸಿದರು.ವಿಜಯನಗರ ಸಕ್ಕರೆ ಕಾರಖಾನೆ ಎಫ್‍ಆರ್‍ಪಿ- 2671, ಶಾಮನೂರು ಸಕ್ಕರೆ ಕಾರಖಾನೆ ಮತ್ತು ಮೈಲಾರ ಸಕ್ಕರೆ ಕಾರಖಾನೆಗಳು ತಲಾ 2613, ಎನ್‍ಎಸ್‍ಎಲ್-2736,ಕೋರ್‍ಗ್ರೀನ್-2745 ರೂ.ಗಳ ಎಫ್‍ಆರ್‍ಪಿಯನ್ನು ಸರಕಾರ ನಿಗದಿಡಿಸಿದೆ ಎಂದು ಅವರು ವಿವರಿಸಿದರು.
ಐಎಸ್‍ಆರ್ ಸಕ್ಕರೆ ಕಾರಖಾನೆ 2013-14,15-16ನೇ ಸಾಲಿನ ರೈತರ ಬಾಕಿ ಹಣ ವಸೂಲಾತಿಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಲಾಗುವುದು ಎಂದರು.

    ರೈತರ ಹಿತದೃಷ್ಟಿಯಿಂದ ಮತ್ತು ನಮ್ಮ ಭಾಗದ ಕಬ್ಬು ಬೆಳೆಯ ದೃಷ್ಟಿಯಿಂದ ದೇಶನೂರು ಎನ್‍ಎಸ್‍ಎಲ್ ಸಕ್ಕರೆ ಕಾರಖಾನೆ ಇರಲೇಬೇಕು. ಅದು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು; ಈ ವಿಷಯದಲ್ಲಿ ಜಿಲ್ಲಾಡಳಿತ ಕಳೆದ ವರ್ಷ ತೋರಿದ ಮುತುವರ್ಜಿಯನ್ನು ಈ ಬಾರಿ ತೋರುವಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರು ಒತ್ತಾಯಿಸಿದರು.

    ರೈತ ಮುಖಂಡರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿ ನಕುಲ್ ಅವರು ಮತ್ತೊಮ್ಮೆ ದೇಶನೂರು ಎನ್‍ಎಸ್‍ಎಲ್ ಸಕ್ಕರೆ ಕಾರಖಾನೆಯನ್ನು ಈ ಬಾರಿ ಪುನಃ ಆರಂಭಿಸುವುದಕ್ಕೆ ಹಾಗೂ ಈ ಸಕ್ಕರೆ ಕಾರಖಾನೆಗಳ ವ್ಯಾಪ್ತಿಯಲ್ಲಿ ಬೆಳೆದಿರುವ ಕಬ್ಬನ್ನು ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

  ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಕೆ. ರಾಮೇಶ್ವರಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ.ಮಲ್ಲಿಕಾರ್ಜುನ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ರೈತ ಮುಖಂಡರು,ಕಬ್ಬು ಬೆಳೆಗಾರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link