ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವೆ : ಕವಿರಾಜ್ ಅರಸ್

ಹೊಸಪೇಟೆ:

    ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ನೀಡದೆ ಕಡೆಗಣಿಸಿ ಆನಂದ್ ಸಿಂಗ್‍ಗೆ ಟಿಕೆಟ್ ನೀಡುವ ಮೂಲಕ ಪಕ್ಷದ ನಿಷ್ಠಾವಂತರಿಗೆ ಅನ್ಯಾಯವಾಗಿದ್ದು, ಈ ನಿನ್ನ ಹಿನ್ನೆಲೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವೆ ಎಂದು ಕವಿರಾಜ್ ಅರಸ್ ತಿಳಿಸಿದರು.

     ನಗರದ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಆನಂದ್ ಸಿಂಗ್ ಅವರಿಗೆ ಟಿಕೆಟ್ ನೀಡಿರುವುದು ಸರಿಯಲ್ಲ. ಕಳೆದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಿಂಗ್ ಪಕ್ಷಕ್ಕೆ ದ್ರೋಹಬಗೆದು ಕಾಂಗ್ರೆಸ್‍ಗೆ ಸೇರಿದ್ದರು. ಅಂತಹ ಕಷ್ಟದ ಸಂದರ್ಭದಲ್ಲಿ ಪರಿವರ್ತನಾ ಯಾತ್ರೆ ನಡೆಸಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇವು, ಆ ಸಂದರ್ಭದಲ್ಲಿಯೂ ಗವಿಯಪ್ಪರಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಪುನಾಹ ಆನಂದ್ ಸಿಂಗ್ ಪಕ್ಷಕ್ಕೆ ಬಂದ ಕೊಡಲೇ ಟಿಕೆಟ್ ನೀಡುವ ಮೂಲಕ ಪಕ್ಷಕ್ಕೆ ದುಡಿದವರನ್ನು ನಿರ್ಲಕ್ಷ್ಯಿಸಿರುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿಎಂ ಯಡಿಯೂರಪ್ಪ ಅವರು ಹೇಳಿದರು ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ನಾನು ದೇವರಾಜ ಅರಸ್ ಅವರ ಹಾದಿಯಲ್ಲಿ ಬಂದ ಅರಸ್ ಆಗಿರುವೇ ಕೊಟ್ಟಮಾತಿಗೆ ಬದ್ಧನಾಗಿದ್ದು ಸ್ಪರ್ಧೆ ನಿಶ್ಚಿತ, ಮುಖಂಡರು ಏನೇ ಮನವೊಲಿಕೆ ಮಾಡಿದರೂ ಉಪ ಚುನಾವಣೆಯಲ್ಲಿ ಸ್ಪರ್ದೆ ಖಚಿತ ಎಂದರು. ಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲಿದೆ. ನ. 18 ರಂದು ನಾಮಪತ್ರ ಸಲ್ಲಿಕೆಮಾಡುವೆ ಎಂದು ಹೇಳಿದರು.

    ಆನಂದ್ ಸಿಂಗ್ ಈ ಹಿಂದೆ ನಾನು ಜಿಲ್ಲಾ ಪಂಚಾಯತ್‍ಗೆ ಸ್ಪರ್ಧಿಸುವ ಸಂದರ್ಭದಲ್ಲಿಯೂ ನನ್ನನ್ನು ಸೋಲಿಸಲು ಮುಂದಾಗಿದ್ದರು. ಅಂತಹವರಿಗೆ ನಾನು ಹೇಗೆ ಬೆಂಬಲಿಸಬೇಕು. 20 ವರ್ಷದಿಂದ ಪಕ್ಷಕ್ಕೆ ದುಡಿದಿರುವೆ. ನಿμÁ್ಠವಂತ ಕಾರ್ಯಕರ್ತನಾಗಿರುವೆ. ಕಾರ್ಯಕರ್ತರ ಬೆಂಬಲವಿದೆ. ಸ್ಪರ್ಧೆ ಖಚಿತ ಎಂದು ಸ್ಪಷ್ಟಪಡಿಸಿದರು.

    ಮನವೊಲಿಕೆ ವಿಫಲ: ಕವಿರಾಜ್ ಅರಸ್ ಬಂಡಾಯದ ಬಾವುಟ ಹಾರಿಸುವುದು ನಿಶ್ಚಿತವಾಗುತ್ತಿದ್ದಂತೆ ಸಂಸದರಾದ ದೇವೇಂದ್ರಪ್ಪ, ಕರಡಿ ಸಂಗಣ್ಣ, ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹಾಗೂ ಆನಂದ್ ಸಿಂಗ್ ಕವಿರಾಜ್ ಅರಸ್ ನಿವಾಸಕ್ಕೆ ಭೇಟಿ ನೀಡಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವೊಲಿಕೆಗೆ ಮುಂದಾದರು.

     ಇದಕ್ಕೆ ಕ್ಯಾರೇ ಅನ್ನದ ಅರಸ್ ಪಕ್ಷಕ್ಕೆ ಬಂದಿರುವುದಕ್ಕೆ ವಿರೋಧವಿಲ್ಲ, ಆದರೆ ಟಿಕೆಟ್ ನೀಡಿರುವುದಕ್ಕೆ ವಿರೋದವಿದೆ, ಅದು ನನ್ನೊಬ್ಬನ ವಿರೋಧವಲ್ಲ ಬಹುತೇಕ ಕಾರ್ಯಕರ್ತರ ವಿರೋಧವಿದೆ. ಈ ಹಿನ್ನೆಲೆಯಲ್ಲಿ ನಾನುಗ ಬೇಡ ಸಿಂಗ್‍ಗೂ ಟಿಕೆಟ್ ನೀಡುವುದು ಬೇಡ, ನಿಷ್ಠಾವಂತರಿಗೆ ಟಿಕೆಟ್ ನೀಡಿ ಎಲ್ಲರೂ ಸೇರಿ ಕೆಲಸಮಾಡೋಣ ಎಂದರು.

     ಇದಕ್ಕೆ ಪಕ್ಷದ ಮುಖಂಡರು ಇದು ಪಕ್ಷ ವರಿಷ್ಠರ ನಿರ್ಧಾರ ನಮ್ಮ ಕೈಯಲ್ಲಿಲ್ಲ ಎಂದರು. ಇದಕ್ಕೆ ಕೋಪಗೊಂಡ ಅರಸ್ ನನಗೆ ಕ್ಷೇತ್ರದ ಜನರು, ನಿಷ್ಠಾವಂತರೇ ಹೈಕಮಾಂಡ್ ಅವರಿಗೆ ಮಾತು ನೀಡುರವೆ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ಇದರಿಂದ ಮುಜುಗರಕ್ಕೀಡಾದ ನಾಯಕರು ಅಲ್ಲಿಂದ ಹೊರ ನಡೆದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap