ಚಿತ್ರದುರ್ಗ: 

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ 64 ನೇ ಪರಿನಿರ್ವಾಣ ಪ್ರಯುಕ್ತ ಜಿಲ್ಲಾ ಸಮತಾ ಸೈನಿಕ ದಳದ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಜಿಲ್ಲಾ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಸಿ.ಹೆಚ್.ಮಂಜುನಾಥ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ರವರು ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನತೆ ಸಿಕ್ಕಿದೆ. ಹಾಗಾಗಿ ಯಾವುದೇ ಜಾತಿ ಬೇಧವಿಲ್ಲದೆ ಎಲ್ಲರೂ ಅಂಬೇಡ್ಕರ್ರವರನ್ನು ನಮನ ಮಾಡಬೇಕಾಗಿದೆ ಎಂದು ಹೇಳಿದರು.
ಭೀಮಣ್ಣ ಚಿಕ್ಕಗೊಂಡನಹಳ್ಳಿ, ನಾಗಪ್ಪ ಸಿ.ಜಿ.ಹಳ್ಳಿ, ಕಳ್ಳಿಹಟ್ಟಿ ಶಿವಮೂರ್ತಿ, ರಂಗಸ್ವಾಮಿ, ರಘು, ನಗರಸಭಾ ಸದಸ್ಯ ಅಂಗಡಿ ಮಂಜಣ್ಣ, ಅಂಜಿನಪ್ಪ, ಡಿ.ಜಯಪ್ಪ, ನ್ಯಾಯವಾದಿ ಬೀಸನಹಳ್ಳಿ ಜಯಪ್ಪ, ದೇವರಾಜ್, ಜೆ.ಮಂಜು, ಹೊನ್ನೂರಪ್ಪ ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ವಕೀಲರಿಂದ ಮಾಲಾರ್ಪಣೆ
ಡಾ.ಬಿ.ಆರ್.ಅಂಬೇಡ್ಕರ್ರವರ 64 ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಮಾದಿಗ ವಕೀಲರ ಕ್ಷೇಮಾಭಿವೃದ್ದಿ ಸಂಘದಿಂದ ಅಂಬೇಡ್ಕರ್ ಪ್ರತಿಮೆಗೆ ಶುಕ್ರವಾರ ಬೃಹಧಾಕಾರವಾದ ಮಾಲೆಯನ್ನು ಅರ್ಪಿಸಲಾಯಿತು.ನ್ಯಾಯಾಲಯ ಆವರಣದಿಂದ ಮೆರವಣಿಗೆ ಮೂಲಕ ಹೊರಟ ವಕೀಲರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಮಾದಿಗ ವಕೀಲರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಬೀಸನಹಳ್ಳಿ ಜಯಪ್ಪ, ಗೌರವಾಧ್ಯಕ್ಷ ಶರಣಪ್ಪ, ವಕೀಲರ ಸಂಘದ ಅಧ್ಯಕ್ಷ ಎಸ್.ವಿಜಯಕುಮಾರ್, ಕುಮಾರಪ್ಪ, ಚಂದ್ರಪ್ಪ, ಜಯಪ್ಪ, ರವಿ, ತಿಪ್ಪೇಸ್ವಾಮಿ, ಶಿವಣ್ಣರೆಡ್ಡಿ, ದಯಾನಂದರೆಡ್ಡಿ, ರಾಜಣ್ಣ, ಅಶೋಕ್ಬೆಳಗಟ್ಟ, ಪ್ರಸನ್ನ, ರಾಜಣ್ಣ, ಹೆಚ್.ಎನ್.ರಾಮಚಂದ್ರಪ್ಪ ಸೇರಿದಂತೆ ಅನೇಕ ವಕೀಲರುಗಳು ಉಪನ್ಯಾಸಕ ಚಿತ್ರಲಿಂಗಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗಣ್ಯರಿಂದ ಗೌರವ ಸಲ್ಲಿಕೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅವರ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 64 ನೇ ಪರಿನಿಬ್ಬಾಣ ಅಂಗವಾಗಿ ನಗರದ ಅಂಬೇಡ್ಕರ್ ವೃತ್ತದಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಗಣ್ಯರಿಂದ ಮಾಲಾರ್ಪಣೆ ನೆರವೇರಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ, ಸತ್ಯಭಾಮ, ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ ಅರುಣ್ ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ನೇರವೇರಿಸಿ ಗೌರವ ಸಮರ್ಪಿಸಿದರು. ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಂಬೇಡ್ಕರ್ ಅವರಿಗೆ ಭಕ್ತಿ ನಮನ ಸಲ್ಲಿಸಿದರು. ಕಾರ್ಯಕ್ರಮದ ಅಂಗವಾಗಿ ಬಿ.ಆರ್. ಅಂಬೇಡ್ಕರ್ ಅವರ ಕುರಿತು ಗೀತ ಗಾಯನ ಏರ್ಪಡಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡು ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದರು.
ಅಂಬೇಡ್ಕರ್ ಜ್ಯೋತಿಯಾತ್ರೆ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ 64 ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಬೆಂಗಳೂರಿನಿಂದ ಮುಂಬೈಗೆ ಹೊರಟಿರುವ ಅಂಬೇಡ್ಕರ್ ಜ್ಯೋತಿಯಾತ್ರೆ ಗುರುವಾರ ಚಿತ್ರದುರ್ಗಕ್ಕೆ ಆಗಮಿಸಿದಾಗ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದಿಂದ ಭವ್ಯವಾಗಿ ಸ್ವಾಗತಿಸಲಾಯಿತು.
ಮದಕರಿನಾಯಕನ ಪ್ರತಿಮೆ ಮುಂಭಾಗದಿಂದ ಆಗಮಿಸಿದ ಡಾ.ಬಿ.ಆರ್.ಅಂಬೇಡ್ಕರ್ ಜ್ಯೋತಿಯಾತ್ರೆ ಒನಕೆ ಓಬವ್ವ ವೃತ್ತದ ಮೂಲಕ ಅಂಬೇಡ್ಕರ್ ಪ್ರತಿಮೆ ಬಳಿ ತೆರಳಿದಾಗ ದಲಿತ ಸಂಘಟನೆಗಳವರು ಪ್ರತಿಮೆಗೆ ನಮನ ಸಲ್ಲಿಸಿದರು.ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾಂ, ಕಲಬುರ್ಗಿ ಮೂಲಕ ಮಹಾರಾಷ್ಟ್ರ ಮುಂಬೈನ ಕಡಲತೀರ ದಾದರ್ನ ಅಂಬೇಡ್ಕರ್ರವರ ಚೈತನ್ಯ ಭೂಮಿಗೆ ಡಿ.7 ರಂದು ಜ್ಯೋತಿಯಾತ್ರೆ ತಲುಪಲಿದೆ.
ದಲಿತರಲ್ಲಿ ಸ್ವಾಭಿಮಾನ, ಜಾಗೃತಿ ಮೂಡಿಸುವುದು ಅಂಬೇಡ್ಕರ್ರವರ ಕನಸಾಗಿತ್ತು. ಹಾಗಾಗಿ ಅಸ್ಪøಶ್ಯತೆ ನಿವಾರಣೆ, ಕ್ರಾಂತಿಗೀತೆ, ಬೀದಿ ನಾಟಕಗಳನ್ನು ಜ್ಯೋತಿಯಾತ್ರೆಯುದ್ದಕ್ಕೂ ಪ್ರದರ್ಶಿಸಲಾಗುವುದೆಂದು ಯಾತ್ರೆಯ ನೇತೃತ್ವ ವಹಿಸಿದವರು ತಿಳಿಸಿದರು.ದಲಿತ ಸಂಘಟನೆಗಳ ಒಕ್ಕೂಟದ ಜಿ.ಓ.ಎನ್.ಮೂರ್ತಿ, ಬಿ.ಟಿ.ಸಂಪತ್ಕುಮಾರ್, ಹೆಚ್.ತಿಪ್ಪೇಸ್ವಾಮಿ, ಚಿದಾನಂದಮೂರ್ತಿ, ಲಕ್ಷ್ಮಿನರಸಿಂಹ ಸ್ವಾಮಿ, ಎನ್.ರವಿಕುಮಾರ್, ಜೆ.ಮಂಜುನಾಥ, ಜಿಲ್ಲಾಧ್ಯಕ್ಷ ಮಹಲಿಂಗಪ್ಪ, ರುದ್ರಮುನಿ, ಸುರೇಶ್, ಶಿವಮೂರ್ತಿ, ಮಹಂತೇಶ್, ಸತೀಶ್ ಸೇರಿದಂತೆ ನೂರಾರು ದಲಿತರು ಜ್ಯೋತಿಯಾತ್ರೆಯಲ್ಲಿ ತೆರಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








