ಜೈಪುರ ಸರಣಿ ಸ್ಪೋಟ ಪ್ರಕರಣ: ವಿಶೇಷ ನ್ಯಾಯಾಲಯದ ತೀರ್ಪು ಪ್ರಕಟ.!

ಜೈಪುರ:

     2008ರಲ್ಲಿ ಇಡೀ ದೇಶವನ್ನು ಬೆಚ್ಚಿ ಬೀಳುವಂತೆ ಮಾಡಿದ್ದ ಜೈಪುರ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸಿದೆ , ಬಂಧಿತರಾದ 5 ಮಂದಿಯಲ್ಲಿ ನಾಲ್ಕು ಮಂದಿಯನ್ನು ದೋಷಿಗಳು ಮತ್ತು ಓರ್ವನನ್ನು ನಿರ್ಧೋಷಿ ಎಂದು ಆದೇಶಿಸಿದೆ.

    11ವರ್ಷಗಳ ಹಿಂದೆ ಜೈಪುರದ 8 ಪ್ರದೇಶಗಳಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟದಲ್ಲಿ ಸುಮಾರು 70 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದರು ಮತ್ತು 185 ಮಂದಿ ಗಾಯಗೊಂಡಿದ್ದರು. ಈ ಪ್ರಕರಣದ ಸುದೀರ್ಘ ವಿಚಾರಣೆಯ ನಂತರ ಇಂದು ತೀರ್ಪು ನೀಡಿರುವ ವಿಶೇಷ ನ್ಯಾಯಾಲಯ ಪ್ರಕರಣದ ನಾಲ್ಕು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿದೆ. 

   ಈ ಪೈಕಿ ಆರೋಪಿಗಳಾದ ಮೊಹಮ್ಮದ್ ಸೈಫ್, ಮೊಹಮ್ಮದ್ ಸರ್ವಾರ್ ಅಜ್ಮಿ, ಮೊಹಮ್ಮದ್ ಸಲ್ಮಾನ್ ಮತ್ತು ಸೈಫುರೆಹ್ಮಾನ್ ಅವರನ್ನು ಕೋರ್ಟ್ ದೋಷಿಗಳೆಂದು ತೀರ್ಪು ನೀಡಿದ್ದು, ಐಪಿಸಿ ಸೆಕ್ಷನ್ 120 (ಬಿ) ಅಡಿಯಲ್ಲಿನ ಅವರ ಮೇಲಿನ ಎಲ್ಲ ಆರೋಪಗಳೂ ಸಾಬೀತಾಗಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ. ಇಂದಿನ ವಿಚಾರಣೆಯಲ್ಲಿ ಎಲ್ಲ ದೋಷಿಗಳೂ ಹಾಜರಿದ್ದರು.ಅಂತೆಯೇ ಪ್ರಕರಣದ ಉಳಿದ ಆರೋಪಿಗಳಾದ ಶಹಬಾಜ್ ಹುಸೇನ್ ನನ್ನು ಕೋರ್ಟ್ ನಿರ್ದೋಷಿ ಎಂದು ಹೇಳಿದ್ದು, ಆತನ ವಿರುದ್ಧ ಮಾಡಲಾಗಿದ್ದ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರ ಗಳಿಲ್ಲ ಎಂದು ಹೇಳಿದೆ. 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link