ಹೊಸಪೇಟೆ :

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರ್ಥಿಕ ಹಿಂಜರಿತದ ನೆಪದಲ್ಲಿ ಶ್ರೀಮಂತರಿಗೆ 1.45 ಲಕ್ಷ ಕೋಟಿ ತೆರಿಗೆ ವಿನಾಯಿ ಕೊಡುಗೆ ನೀಡಿದೆ. ಆದರೆ ಕಾರ್ಮಿಕರಿಗೆ ಕೆಲಸದ ಭದ್ರತೆ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಒಂದೇ ಒಂದು ರೂಪಾಯಿಯನ್ನು ನೀಡದೆ ದ್ರೋಹ ಬಗೆದಿದೆ.
ಇದರಿಂದ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕ ವರ್ಗದ ಬುದಕಿನ ಮೇಲೆ ಪರಿಣಾಮ ತೀವ್ರ ಬೀರಿ ಅಪಾರ ಸಂಖ್ಯೆಯಲ್ಲಿ ಉದ್ಯೋಗಗಳು ನಷ್ಟವಾಗಿವೆ. ಇದನ್ನು ಖಂಡಿಸಿ ಇದೇ ಜ.8ರಂದು ಸಿಐಟಿಯು ನೇತೃತ್ವದ ಕಾರ್ಮಿಕ ಸಂಘಟನೆಗಳಿಂದ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಸಲಾಗುವುದು ಎಂದು ಸಿಐಟಿಯು ನ ಪದಾಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿಯ ಎಡಬಿಡಂಗಿ ನಿರ್ಧಾರಗಳಿಂದ ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿದಿದೆ. ಇಂತಹ ಸಂಧರ್ಭದಲ್ಲಿ ಸರ್ಕಾರದ ಕ್ರಮಗಳು ಜನಸಾಮಾನ್ಯರ ಪರವಾಗಿರಬೇಕೆಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಮೋದಿ ಸರ್ಕಾರ ಮಾತ್ರ ಬಂಡವಾಳಶಾಯಿಗಳ ಪರವಾಗಿ ಕೆಲಸ ಮಾಡುತ್ತಿದೆ. ಇದರಿಂದ ಜನಸಾಮಾನ್ಯರು ಹಾಗು ಕಾರ್ಮಿಕರಿಗೆ ಇನ್ನಿಲ್ಲದ ತೊಂದರೆ ಉಂಟಾಗಿದೆ. ಹೀಗಾಗಿ ಕಾರ್ಮಿಕರ ಬದುಕು ಸರಿ ದಾರಿಗೆ ತರಲು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ.
ಕಾರ್ಮಿಕರ ಬೇಡಿಕೆಗಳು :
1) ಕಟ್ಟಡ ಕಾರ್ಮಿಕರಿಗೆ ನಿವೇಶನ, ಮನೆ, ಕಲ್ಯಾಣ ಮಂಡಳಿ ರಚನೆ ಮಾಡಬೇಕು.
2) ಹಮಾಲಿ ಕಾರ್ಮಿಕರಿಗೆ, ನಿವೇಶನ, ಮನೆ ಹಾಗೂ ಕಲ್ಯಾಣ ಮಂಡಳಿ ರಚನೆ ಮಾಡಬೇಕು.
3) ಐ.ಎಲ್.ಒ.ಎಸ್. ಸಾರ್ವತ್ರೀಕರಣ ಗೊಳಿಸಬೇಕು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು.
4) ಅಂಗನವಾಡಿ ಕೇಂದ್ರಗಳಲ್ಲಿಯೇ ಶಾಲಾ ಪೂರ್ವ ಶಿಕ್ಷಣ ಪ್ರಾರಂಭಿಸಬೇಕು.
5) ಸಾಮಾಜಿಕ ಭದ್ರತೆಯ ಸೌಲಭ್ಯಗಳಾದ ನಿವೃತ್ತಿ ವೇತನ ಸೇರಿದಂತೆ ಪ್ರತಿ ತಿಂಗಳು ರೂ. 10,000/- ಕಡಿಮೆ ಇಲ್ಲದಂತೆ ನೀಡಬೇಕು.
6) ಪ್ರತಿ ವರ್ಷದ ಬಜೆಟ್ನಲ್ಲಿ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಸಮರ್ಪಕವಾದ ಅನುದಾನ ನೀಡಬೇಕು.
7) ಕಾರ್ಮಿಕ ವಿರೋಧಿ ಕಾರ್ಮಿಕ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು.
8) ಆಟೋ ಚಾಲಕರು ಹಾಗು ಕಾರ್ಮಿಕರ ಕಲ್ಯಾಣ ಮಂಡಳಿ ರಚನೆ ಆಗಬೇಕು.
9) ಆಕ್ಷರ ದಾಸೋಹ ನೌಕರರನ್ನು ಖಾಯಂ ಗೊಳಿಸಬೇಕು.
10) 45 ಮತ್ತು 46ನೇ ಭಾರತೀಯ ಕಾರ್ಮಿಕ ಸಮಾವೇಶ ಶಿಪಾರಸ್ಸುಗೊಳುವಂತೆ ಕನಿಷ್ಠ ಕೂಲಿ 21,0000/-ಕ್ಕಿಂತ ಕಡಿಮೆ ಇಲ್ಲದಂತೆ ನಿಗದಿ ಮಾಡಬೇಕು.
11) ಮನೆ ಕೆಲಸಗಾರರಿಗೆ ಕ್ಲಯಾಣ ಮಂಡಳಿ ರಚನೆ ಆಗಬೇಕು.
12) ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ವಾಪಾಸ್ಸಾಗಬೇಕು.
13) ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿಯಲ್ಲಿ 500 ಕೋಟಿ ಮೀಸಲಿಡಬೇಕು.
14) ಗ್ರಾಮ ಪಂಚಾಯಿತಿಯಲ್ಲಿ ನೌಕರರನ್ನು ಖಾಯಂ ಗೊಳಿಸಬೇಕು ಎಂದು ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಎಲ್ಲಾ ಕಾರ್ಮಿಕ ವಿರೋಧಿ ಹಾಗೂ ಜನ ವಿರೋಧಿ ಅಂಶಗಳ ವಿರುದ್ದ ಹಾಗೂ ಕಾರ್ಮಿಕ ವರ್ಗದ ಬೇಡಿಕೆಗಳ ಈಡೇರಿಕೆಗಾಗಿ 2020 ಜನವರಿ 8 ರಂದು ದೇಶವ್ಯಾಪಿ ಮುಷ್ಕರದ ಭಾಗವಾಗಿ ಹೊಸಪೇಟೆ ತಾಲೂಕಿನಲ್ಲಿಯೂ ಎಲ್ಲಾ ಕಾರ್ಮಿಕ ಸಂಘಟನೆಗಳು ಸಿ.ಐ.ಟಿ.ಯು. ಕಾರ್ಮಿಕ ಸಂಘಟನೆಗಳು ಹೋರಾಟಕ್ಕೆ ಕರೆ ಕೊಟ್ಟಿವೆ. ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕೆಂದು ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
