ತಾಲೂಕು ಮಟ್ಟದ ಕಾರ್ಯಗಾರ ಮತ್ತು ಕೃಷಿ ಅಭಿಯಾನ ಕಾರ್ಯಕ್ರಮ

ಹರಪನಹಳ್ಳಿ:

       ಅರಣ್ಯನಾಶ, ವರುಣನ ಚಲ್ಲಾಟ, ಹವಾಮಾನದ ವೈಪರಿತ್ಯದಿಂದ ದೇಶಕ್ಕೆ ಅನ್ನಕೊಡುವ ರೈತನ ಜೀವನ ಲಾಟರಿಯಾಗಿದೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

         ಪಟ್ಟಣದ ಸಹಾಯಕ ಕೃಷಿ ನಿರ್ದೇಶಕ ಇಲಾಖೆ ಅವರಣದಲ್ಲಿ ಸುಜಲಾ -3 ಯೋಜನೆಯಡಿ ಭೂ ಸಂಪನ್ಮೂಲ ಮಾಹಿತಿ (ಎಲ್‍ಆರ್‍ಐ) ಪಾಲುದಾರರ ತಾಲೂಕು ಮಟ್ಟದ ಕಾರ್ಯಗಾರ ಮತ್ತು ಕೃಷಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ರೈತನ ಜೀವನವೇ ಅಯೋಮಯ ಸ್ಥಿತಿಯಲ್ಲಿರುವಾಗ ಬೆಳೆದ ಬೆಳೆ ಕೈಕೊಟ್ಟು ನೆಮ್ಮದಿ ಇಲ್ಲದ ಬದುಕಿನಿಂದ ಸಾಲಗಾರನಾಗಬೇಕು, ಇಲ್ಲಾ ಆತ್ಮಹತ್ಯೆ ದಾರಿ ಹಿಡಿಯಬೇಕು ಎನ್ನುವಂತಾ ಸ್ಥಿತಿಯಲ್ಲಿ ಕೆಲ ಅಧಿಕಾರಿಗಳು ಸೂಕ್ತ ಮಾಹಿತಿ ನೀಡದೆ ಮೋಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅನ್ನಕೊಡುವ ರೈತನಿಗೆ ಮೋಸ ಮಾಡದಿರಿ. ಮಾಹಿತಿ ನೀಡದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

        ಮುಂದಿನ ದಿನಗಳಲ್ಲಿ ನೀರಿಗಾಗಿ ಯುದ್ದವಾದರೂ ಆಶ್ಚರ್ಯವಿಲ್ಲ. ಮುಂದಿನ ಪೀಳಿಗೆಗಾಗಿ ನೀರು ಮತ್ತು ಅರಣ್ಯ ಉಳಿಸುವ ಪ್ರಯತ್ನ ಮಾಡಿ. ಫಸಲ್ ಭೀಮಾ ಯೋಜನೆ ಬಗ್ಗೆ ಅಪೂರ್ಣ ಮಾಹಿತಿಯಿಂದ ತೊಂದರೆಯಾಗಿದೆ. ಸೂಕ್ತ ಮಾಹಿತಿ ನೀಡಿ ರೈತನಿಗೆ ತಲುಪಬೇಕಾದ ಹಣವನ್ನು ಸೇರಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.

        ಸುಜಲಾ -3 ಜೋಜನೆಯಿಂದ 17 ಕಿರು ಜಲಾನಯನ, 35 ಗ್ರಾಮಗಳಲ್ಲಿ 10 ಸಾವಿರ ಎಕ್ಟೆರ್ ಪ್ರದೇಶಾಭಿವೃದ್ದಿ, 50 ಕೃಷಿಹೊಂಡ, 1 ಲಕ್ಷಕ್ಕೂ ಹೆಚ್ಚು ತೋಟಗಾರಿಕೆ ಸಸಿಗಳ ವಿತರಣೆ, 3 ಲಕ್ಷಕ್ಕೂ ಹೆಚ್ಚು ತರಕಾರಿ ಬೀಜಗಳ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಪೂರಕವಾಗಿ ವಿತರಣೆಯಾಗಿದ್ದರೆ ಮಿನಿ ಅರಣ್ಯವೇ ಸೃಷ್ಟಿಯಾದಂತೆ ಎಂದರು.

         ಜಿಲ್ಲಾ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್ ಮಾತನಾಡಿ. ವಿಶ್ವಬ್ಯಾಂಕ್ ಯೋಜನೆಯಾದ ಸುಜಲಾ-3 ಯೋಜನೆ ರೈತರಿಗೆ ಮಹತ್ವದ್ದಾಗಿದೆ. ವೈಜ್ಞಾನಿಕ ಹಿನ್ನೆಲೆಯಿಂದ ಈ ಕಾರ್ಯಕ್ರಮದ ಯಶಸ್ವಿಗೆ ಮುಂದಾಗಿದೆ. ಇಲ್ಲಿಯವರೆಗೆ 5400 ಎಕ್ಟೆರ್‍ನಲ್ಲಿ ಈ ಯೋಜನೆ ಅನುಷ್ಟಾನಗೊಳಿಸಲಾಗಿದೆ. 960 ಲಕ್ಷ ಅನುದಾನ ಅನುಮೋದನೆಯಾಗಿದ್ದು 6 ಸಾವಿರ ಕುಟುಂಭಗಳು ಇದರ ಸದುಪಯೋಗ ಪಡೆಯಲಿವೆ. 620 ಕುಟುಂಭಗಳಿಗೆ ಕುರಿಗಳನ್ನು ವಿತರಿಸಲಾಗಿದೆ ಎಂದರು.

       ಕಾರ್ಯಕ್ರಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಭಗಳಿಗೆ, ಹಾವುಕಚ್ಚಿ ಸಾವನ್ನಪ್ಪಿದ ಕುಟುಂಬಗಳಿಗೆ, ಬೆಂಕಿ ಅನಾಹುತಗಳಿಗೆ ರೈತರ ಖಾತೆಗೆ ಜಮೆಯಾದ ಹಣದ ಹಣದ ಪ್ರಮಾಣಪತ್ರವನ್ನು ನೀಡಲಾಯಿತು.ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದಪ್ಪ, ಸದಸ್ಯ ಡಾ.ಮಂಜುನಾಥ್ ಉತ್ತಂಗಿ, ತಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಮಂಜ್ಯಾನಾಯ್ಕ್, ಪುರಸಭೆ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಉಪಾಧ್ಯಕ್ಷ ಕೆ.ಸತ್ಯನಾರಾಯಣ, ಎಂ.ಪಿ.ನಾಯ್ಕ್, ಕೃಷಿಕ ಸಮಾಜದ ಅಧ್ಯಕ್ಷ ರೇವಣಸಿದ್ದಪ್ಪ, ಲಕ್ಷ್ಮಿಪುರ ಗ್ರಾಪಂ ಅಧ್ಯಕ್ಷ ಪಿ.ಟಿ.ಭರತ್, ತೆಲಿಗಿ ಮಡಿವಾಳಪ್ಪ, ತಾಪಂ ಸದಸ್ಯ ನಾಗರಾಜ್, ಹುಲಿಕಟ್ಟಿ ಚಂದ್ರಪ್ಪ, ಈರಣ್ಣ, ಹುಣ್ಸಿಹಳ್ಳಿ ಪ್ರಕಾಶ್, ಮುಖಂಡರಾದ ಬಾಗಳಿ ಕೊಟ್ರಪ್ಪ, ಡಾ.ಮಲ್ಲಿಕಾರ್ಜುನ, ಶ್ರೀಮತಿ ಸ್ಪೂರ್ತಿ, ತಿಪ್ಪೇಸ್ವಾಮಿ, ನಾರನಗೌಡ, ಬೆಂಗಳೂರಿನ ಕಿರಣ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap